ಗದಗ: ಇತ್ತೀಚೆಗೆ ಕೆ.ಎಲ್.ಇ. ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದವರು ಆಯೋಜಿಸಿದ್ದ (ಇನ್ನೊವೇಟ್) ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಚಿಕ್ಕಟ್ಟಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆ ಗೈದಿದ್ದಾರೆ.
ಉಪನ್ಯಾಸಕರಾದ ಶ್ರೀಮತಿ ದೀಪಾ.ಮ.ಮುಂಡರಗಿ ಅವರ ಮಾರ್ಗದರ್ಶನದಲ್ಲಿ ‘ಪೋಸ್ಟರ್ ಮೇಕಿಂಗ್’ಚಟುವಟಿಕೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರಾದ ಕುಮಾರಿ ಸುಹಾನಾ ಮುಲ್ಲಾ, ಕುಮಾರಿ ಹಿಪ್ಪಾ ಬೇಗ್ ಮತ್ತು ಕುಮಾರಿ ಜವೇರಿಯಾ ಖಾಜಿ ಪ್ರಥಮ ಸ್ಥಾನವನ್ನು ಪಡೆದು ಪ್ರಶಸ್ತಿ ಫಲಕದೊಂದಿಗೆ ಗೌರವಧನ ೨೦೦೦/- ರೂಗಳನ್ನು ಪಡೆದಿದ್ದಾರೆ.
ಇನ್ನಿತರೆ ಚಟುವಟಿಕೆಗಳಾದ ‘ವರ್ಕಿಂಗ್ ಮಾಡೆಲ್ ಮೇಕಿಂಗ್’ ‘ಸ್ಟ್ಯಾಟಿಕ್ ಮಾಡೆಲ್ ಮೇಕಿಂಗ್’‘ಸೈನ್ಸ್ ಕ್ವೀಜ್’ಹಾಗೂ ‘ಸೈನ್ಸ್ ಆರ್ಟ್ (ರಂಗೋಲಿ) ಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡು ಚಿಕ್ಕಟ್ಟಿ ಸಂಸ್ಥೆಯ ಗೌರವವನ್ನು ಹೆಚ್ಚಿಸಿದ್ದಾರೆ. ಉಪನ್ಯಾಸಕರಾದ ಶ್ರೀ ಮರಿಯಪ್ಪ ಹರಿಜನ ಹಾಗೂ ಮೇಘಾ ರಾಯ್ಕರ್ ಉಪಸ್ಥಿತರಿದ್ದರು. ಈ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಹಾಗೂ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಶುಭಕೋರಿದ್ದಾರೆ.
