**********************
ಲಕ್ಷ್ಮೇಶ್ವರ: ವಿದ್ಯಾರ್ಥಿ ದಿಶೆಯಲ್ಲಿ ಮಕ್ಕಳಿಗೆ ವಿಜ್ಞಾನ ಮತ್ತು ವೈಚಾರಿಕ ಮನೋಭಾವಕ್ಕೆ ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಅವರು ಪಟ್ಟಣದ ಪ್ರತಿಷ್ಠಿತ ಸ್ಕೂಲ್ ಚಂದನದ ೧೦ ನೇ ವರ್ಷದ ವಿಜ್ಞಾನ ವಿಸ್ತೃತ ಕಾರ್ಯಕ್ರಮ ಹಾಗೂ ೨೦೨೫ ನೇ ಸಾಲಿನ ಚಂದನ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಸಿಗೆ ನೀರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ವರದಿ : ಪರಮೇಶ ಎಸ್ ಲಮಾಣಿ.
ಶಿಕ್ಷಣ ಯಾರ ಸೊತ್ತುಯಲ್ಲ, ಸತತ ಪರಿಶ್ರಮದ ಮೂಲಕ ಸಾಧನೆಯ ಮೆಟ್ಟಿಲೇರಲು ಸಾಧ್ಯವೆಂದು ಹೇಳಿದರಲ್ಲದೇ, ಸತ: ತಮ್ಮ ಕುಟುಂಬದ ಆರು ಜನ ಸಹೋದರರಲ್ಲಿ ತಾವವೊಬ್ಬರೆ ಇ ಮಟ್ಟಕ್ಕೆ ಬೆಳೆಯಲು ಶಿಕ್ಷಣವೇ ಕಾರಣ ಎಂದು ತಮ್ಮ ಮಾತನ್ನು ಹಂಚಿಕೊಂಡರು.
ಇಂದು ಸುಶಿಕ್ಷಿತರಲ್ಲಿಯೇ ಹೆಚ್ಚು ವರ್ಗ ಮತ್ತು ಜಾತಿಭೇಧ ನಿರ್ಮಾಣವಾಗುತ್ತಿದೆ. ಇದನ್ನು ಹೋಗಲಾಡಿಸಿ ಮನುಷ್ಯ ಸಮಾಜ ಮತ್ತು ಸಮಸಮಾಜದ ನಿರ್ಮಾಣವಾಗಬೇಕಾದರೆ ಎಲ್ಲದಕ್ಕೂ ಶಿಕ್ಷಣವೇ ಪ್ರಾಧನ್ಯವಾಗಿದೆ.
ಯಾವ ಧರ್ಮದಲ್ಲು ದ್ವೇಷ ಮತ್ತು ಹಿಂಸೆಯ ಭೋದನೆಯನ್ನು ಮಾಡಿಲ್ಲ ಆದರೆ ಕೇಲವು ಪಟ್ಟಭದ್ರ ಹಿತ್ತಾಶಕ್ತಿಗಳು ಧರ್ಮದ ಹಾದಿಯನ್ನು ತಪ್ಪಿಸುತ್ತಿವೆ ಎಂದ ಅವರು ಅವಕಾಶ ಮತ್ತು ಪ್ರಯತ್ನದ ಮೂಲಕ ಸಾಧನೆಗೈಯಲು ಸಾಧ್ಯ ಎಂದರು.
ಸಾಮಾಜಿಕ ಹರಿಕಾರ ಬಸವಣ್ಣನವರ ಕರ್ಮ ಸಿದ್ದಾಂತದ ಬಗ್ಗೆ ಮಾತನಾಡುವವರು ಇಂದು ಜಾತಿಯನ್ನು ಕೇಳುತ್ತಿರುವುದು ವಿಷಾದದ ಸಂಗತಿ ಎಂದರು.
ವೇದಿಕೆಯ ಮೇಲೆ ರಿಮೋಟ್ ಒತ್ತುವ ಮೂಲಕ ಎಚ್.ಸಿ ರಟ್ಟಿಗೇರಿಯವರ ಕಂಚಿನ ಮೂರ್ತಿ ಅನಾವರಣ ಮಾಡಿದರು.
ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್ ಪಾಟೀಲ್ ಅವರಿಗೆ “ಚಂದನ ಶ್ರೀ” ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಬಿ ಎಸ್ ಪಾಟೀಲ್ ಮಾತನಾಡಿದರು.
ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರೈತರ ಧ್ವನಿಯಾಗಿ ಉತ್ತರ ಕರ್ನಾಟಕದ ಮೆಕ್ಕೆಜೋಳ ಮತ್ತು ಕಬ್ಬು ಸಮಸ್ಯೆಯಾದಾಗ ಸತ: ಮುಖ್ಯಮಂತ್ರಿಗಳು ಈ ಭಾಗದ ರೈತರಿಗೆ ಅನ್ಯಾಯವಾಗಬಾರದು ಎಂದು ಅಧಿಕಾರಿಗಳ ಸಭೆ ಕರೆದು ಮೆಕ್ಕೆಜೋಳ ಖರೀದಿ ಮತ್ತು ಕಬ್ಬು ಬೆಳೆಗಾರರಿಗೆ ಸ್ಪಂದಿಸಿದರು.
ಕೃಷ್ಣ ಮೇಲ್ದಂಡೆ ಮೂರನೆ ಹಂತದ ಯೋಜನೆಗೆ ಒಣಬೇಸಾಯ ಪ್ರತಿ ಎಕರೆಗೆ ೩೦ ಲಕ್ಷ ಮತ್ತು ನೀರಾವರಿ ಜಮೀನಿಗೆ ೪೦ ಲಕ್ಷ ರೂಪಾಯಿ ಪರಿಹಾರ ನೀಡಲು ಮುಖ್ಯಮಂತ್ರಿ ಅವರು ಕೈಗೊಂಡ ನಿರ್ಯಣ ರೈತರ ಹಿತ ಕಾಪಾಡಲು ಧಡ ನಿರ್ಧಾರವಾಗಿದೆ ಸುಮಾರು ೫೦ ಸಾವಿರ ಕೋಟಿ ರೂ, ಗಳಷ್ಟು ಕೊಡಲು ಮುಖ್ಯಮಂತ್ರಿಗಳು ಸಿದ್ಧವಿರುವುದು ಅವರ ಇಚ್ಛಾಶಕ್ತಿಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಸ್ಕೂಲ್ ಚಂದನದ ಸಂಸ್ಥಾಪಕ ಟಿ.ಈಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು
ವೇದಿಕೆಯ ಮೇಲೆ ಶಾಸಕರಾದ ಜಿ.ಎಸ್ ಪಾಟೀಲ್, ಡಾ.ಚಂದ್ರು ಲಮಾಣಿ ಮಾಜಿ ಶಾಸಕರಾದ ಬಿ.ಆರ್ ಯಾವಗಲ್, ಜಿ.ಎಸ್ ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಆನಂದ ಗಡ್ಡದೇವರಮಠ, ಸುಜಾತಾ ದೊಡ್ಡಮನಿ, ಎಸ್.ಪಿ ಬಳಿಗಾರ , ಹುಮಾಯಿನ್ ಮಾಗಡಿ ಮತ್ತಿತರಿದ್ದರು.
