ಗದಗ:ನಗರದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ವಿಶ್ವವಿದ್ಯಾಲಯವು ಇದೇ ನವೆಂಬರ್ ೨೦ ವಾಣಿಜ್ಯೋತ್ಸವ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಈ ವೇಳೆ, ನಗರದ ಸನ್ಮಾರ್ಗ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಈ ಮಹೋತ್ಸವದಲ್ಲಿ ಅತ್ಯಂತ ಉತ್ಸಾಹ ಜೊತೆಗೆ ಆತ್ಮವಿಶ್ವಾಸದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಾರ್ಹವಾದ ಸ್ಥಾನಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಕು : ಕೀರ್ತಿ ಕಂಪ್ಲಿ ‘ಸ್ಪೇಸ್ ಮ್ಯಾನೆಜ್ಮೆಂಟ್’ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿತಂದರೆ, ಕು : ಪ್ರಿಯಾಂಕಾ ಭಾಂಡಗೆ ಹಾಗೂ ಕು : ರಾಣಿ ಮಿಸ್ಕಿನ್ ‘ನ್ಯೂಜ್ ಪೇಪರ್ ಬಿಲ್ಡಿಂಗ್’ನಲ್ಲಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡರು. ‘ಟ್ರೆಜರ್ ಹಂಟ್’ ಸ್ಪರ್ಧೆಯಲ್ಲಿ ಪ್ರಥಮ ಸಂಪತ್ತನ್ನು ಗಳಿಸುವಲ್ಲಿ ಕು : ಅಭಿಷೇಕ ಭಂಡಾರಿ ಹಾಗೂ ಶರಣಬಸಪ್ಪ ಕುರ್ತಕೋಟಿ ಸಫಲರಾಗಿದ್ದಾರೆ. ಕು : ಕೀರ್ತಿ ಕಂಪ್ಲಿ ತನ್ನ ವಾಕ್ಪಟುತ್ವದಿಂದ ‘ಡಿಬೇಟ್’ (ಚರ್ಚಾಸ್ಪರ್ಧೆ)ನಲ್ಲಿ ಪ್ರಥಮಳಾಗಿ ಮೆರೆದಿದ್ದಾಳೆ. ‘ಕಾರ್ಟೂನಿಂಗ್’(ವ್ಯಂಗ್ಯ ಚಿತ್ರಕಲೆ) ಸ್ಪರ್ಧೆಯಲ್ಲಿ ಕು : ರಾಣಿ ಮಿಸ್ಕಿನ್ ಹಾಗೂ ಪ್ರೀಯಾಂಕಾ ಭಾಂಡಗೆ ಪ್ರಥಮ ಸ್ಥಾನ ಗಳಿಸಿ ಗೆಲುವಿನ ನಗೆ ಬೀರಿದ್ದಾರೆ. ಕು : ಅಭಿಷೇಕ ಭಂಡಾರಿ ಹಾಗೂ ಶರಣಬಸಪ್ಪ ಕುರ್ತಕೋಟಿ ‘ಫೋಟೋಗ್ರಾಫಿ’ಯಲ್ಲಿ ತಮ್ಮ ಕೈಚಳಕವನ್ನು ತೋರಿ ಪ್ರಥಮರಾಗಿ ಕಾಲೇಜಿಗೆ ಯಶಸ್ಸಿನ ‘ಫೋಟೋ’ ಅಂಟಿಸಿದ್ದಾರೆ. ‘ಸಮೂಹನೃತ್ಯ’ದಲ್ಲಿ ಕು : ಕೀರ್ತಿ ಕಂಪ್ಲಿ ಹಾಗೂ ತಂಡದವರು ದ್ವಿತೀಯ ಸ್ಥಾನಗಳಿಸಿದರೂ ನೆರೆದ ಎಲ್ಲ ಪ್ರೇಕ್ಷಕರ ಮೆಚ್ಚುಗೆಯ ಕರತಾಡನವನ್ನು ಗಳಿಸುವಲ್ಲಿ ಸಫಲರಾದರು.
ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಸನ್ಮಾರ್ಗ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ‘ಸಮಗ್ರ ವೀರಾಗ್ರಣಿ ಪಟ್ಟ’ವನ್ನು ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಕ್ಕಾಗಿ ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಚೇರಮನ್ರಾದ ಪ್ರೊ. ರಾಜೇಶ ಕುಲಕರ್ಣಿ, ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ಉಡುಪಿ ದೇಶಪಾಂಡೆ, ಪ್ರೊ. ಸೈಯದ್ ಮತೀನ್ ಮುಲ್ಲಾ ಹಾಗೂ ಪ್ರೊ. ರಾಹುಲ್ ಒಡೆಯರ್, ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ, ಆಡಳಿತಾಧಿಕಾರಿಗಳಾದ ಶ್ರೀ. ಎಮ್. ಸಿ. ಹಿರೇಮಠ, ವಾಣಿಜ್ಯ ವಿಭಾಗದ ಆಯೋಜಕರಾದ ಪ್ರೊ. ಶಿವಕುಮಾರ ವಜ್ರಬಂಡಿ, ಹಾಗೂ ಕಾಲೇಜಿನ ಸಮಸ್ತ ಬೋಧಕ ಹಾಗೂ ಬೋಧಕೇತರ ವರ್ಗ ಹಾಗೂ ಸಕಲ ವಿದ್ಯಾರ್ಥಿವೃಂದ ಆ ಎಲ್ಲ ವಿದ್ಯಾರ್ಥಿಗಳಿಗೆ ಮೆಚ್ಚುಗೆಯನ್ನು ನೀಡಿ ಹಾರೈಸಿದ್ದಾರೆ.