Sunday, April 20, 2025
Homeಸುತ್ತಾ-ಮುತ್ತಾಸಂಕ್ರಾಂತಿ ಸಂಭ್ರಮ : "ಹಾರುವ ಹಕ್ಕಿ" ಪುಸ್ತಕ ಲೋಕಾರ್ಪಣೆ

ಸಂಕ್ರಾಂತಿ ಸಂಭ್ರಮ : “ಹಾರುವ ಹಕ್ಕಿ” ಪುಸ್ತಕ ಲೋಕಾರ್ಪಣೆ

ಗದಗ: ನಗರದ ಮಹಾವೀರ ಭವನದಲ್ಲಿ ಕಪ್ಪತ್ತಗಿರಿ ಫೌಂಡೇಶನ್ ಕಪ್ಪತ್ತಗಿರಿ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಕಲಾ ವೇದಿಕೆ ರಾಜ್ಯ ಘಟಕದ ವತಿಯಿಂದ “ಸಂಕ್ರಾಂತಿ ಸಂಭ್ರಮ” ಕಾರ್ಯಕ್ರಮದಲ್ಲಿ “ಹಾರುವ ಹಕ್ಕಿ” ಪುಸ್ತಕ ಲೋಕಾರ್ಪಣೆ, ಕವಿಗೋಷ್ಠಿ , ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಶರದ್ ರಾವ್ ಹುಯಿಲಗೋಳ ಅವರ ಘನ ಉಪಸ್ಥಿತಿಯಲ್ಲಿ ಜರುಗಿತು.

ಉದಯೋನ್ಮುಖ ಕವಿ ಮಹಾಂತೇಶ ಬೆರಗಣ್ಣವರ ಅವರು ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಶ್ರೀಮತಿ ಎಸ್. ಎಸ್. ಗೌಡರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೇ. ಶ್ರೀ ಸಿ. ಕೆ. ಹೆಚ್. ಕಡಣಿ ಶಾಸ್ತ್ರಿ ಅವರು “ಹಾರುವ ಹಕ್ಕಿ” ಪುಸ್ತಕ ಲೋಕಾರ್ಪಣೆಗೊಳಿಸಿ, ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಎ. ವಿ. ಜವಳಿ, ಪರಮೇಶ ನಾಯಕ್ ಪಾಲ್ಗೊಂಡಿದ್ದರು.

ಪುಸ್ತಕ ಪರಿಚಯಿಸಲು ಆಗಮಿಸಿದ್ದ ಡಾ. ವಿನಾಯಕ ಕಮತದ ಅವರು “ಹಾರುವ ಹಕ್ಕಿ” ಪುಸ್ತಕದ ಕುರಿತು ಮಾತನಾಡುತ್ತಾ, ಮಕ್ಕಳ ಸಾಹಿತ್ಯ ಹೇಗಿದ್ದರೆ ಮಕ್ಕಳ ಮನ ಮುಟ್ಟುತ್ತದೆ ? ಎಂಬುದನ್ನು ವಿವರಿಸಿದರು. ಮಕ್ಕಳ ಸಾಹಿತ್ಯದಲ್ಲಿ ಪ್ರತಿಯೊಬ್ಬರ ಬಾಲ್ಯದ ವಿಚಾರ, ಅನುಭವಗಳನ್ನು ಅಭಿವ್ಯಕ್ತಪಡಿಸುವುದು ಮುಖ್ಯ ಅಂಶವಾಗಿದೆ. ಸಾಹಿತ್ಯ ರಚನೆಯ ಉದ್ಧೇಶ ಚಲನಶೀಲವಾಗಿರುವಂತದ್ದು, ಅದು ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ.

ಮಕ್ಕಳ ಸಾಹಿತ್ಯದಲ್ಲಿ ಉದ್ಧೇಶಪೂರ್ವಕ ನೀತಿ ಬೇಕೇ ಬೇಕಂತಿಲ್ಲ. ಮಕ್ಕಳ ಸಾಹಿತ್ಯ ಬರೆಯುವ ಸಂದರ್ಭದಲ್ಲಿ ಪ್ರಾಸ, ಪದ ಬಳಸಲೇಬೇಕು ಅಂತ ನಿಯಮವಿಲ್ಲ. ಸರಳವಾಗಿ ಬರೆದರೆ ಇನ್ನೂ ಹೆಚ್ಚಿನ ಮೆರಗು ಬರುತ್ತದೆ. ಇಂದು ಲೋಕಾರ್ಪಣೆಗೊಳ್ಳುತ್ತಿರುವ “ಹಾರುವ ಹಕ್ಕಿ” ಕೃತಿಯನ್ನು ಪ್ರತಿಯೊಬ್ಬರು ಓದಬಹುದು. ಈ ಪುಸ್ತಕದಲ್ಲಿ ಕವಯತ್ರಿ ಶಾಲೆ, ಹಬ್ಬ, ದೇವರು, ಗುಬ್ಬಿಯ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದಾರೆ. ಎಲ್ಲರೂ ಸಾಹಿತ್ಯವನ್ನು ಓದಬೇಕು ಅದನ್ನು ವಿಮರ್ಶಿಸಿಕೊಂಡು ಪ್ರಕಟಿಸಬೇಕೆಂದು ಯುವ ಕವಿಗಳಿಗೆ ಕಿವಿಮಾತು ಹೇಳಿದರು.

ವಿವಿಧ ಕ್ಷೇತ್ರದ ಸಾಧಕ ಮಹನೀಯರಾದ ಸುರೇಶ ಲಮಾಣಿ, ಮಲ್ಲಿಕಾರ್ಜುನ ಕಂಡಮ್ಮನವರ, ಡಾ. ಅಂದಯ್ಯ ಅರವಟಗಿಮಠ ಸೇರಿದಂತೆ ಸಾಧಕರಿಗೆ ಸನ್ಮಾನ ಮಾಡಲಾಯಿತು.

ಸಂಕ್ರಾಂತಿ ಸಂಭ್ರಮ ಕವಿಗೋಷ್ಠಿಯಲ್ಲಿ ಶ್ವೇತಾ ಕೊಟಗಿ, ಕಳಕಪ್ಪ ಜಲ್ಲಿಗೇರಿ, ಮಮತಾ ದೊಡ್ಡಮನಿ, ಶಿವಾನಂದ ಭಜಂತ್ರಿ, ವಿಜಯಲಕ್ಷ್ಮೀ ಉಪ್ಪಾರ, ರೇಣುಕಾ, ಕಸ್ತೂರಿ ಕಡಗದ, ಪಕ್ಕೀರಮ್ಮ ಜಂಬಗಿ, ಪವಿತ್ರಾ ಇನಾಮತಿ, ಮಹಾದೇವಿ ಗಂಜಿಗಟ್ಟಿ, ಶೋಭಾ ಗಾಳಿ, ಶಿವಪ್ಪ ಹೂಗಾರ, ಶಿವಲೀಲಾ ಧನ್ನಾ, ಭಾಗವಹಿಸಿ ಕವನ ವಾಚಿಸಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿಕೊಂಡಿದ್ದ ಅಂದಾನಪ್ಪ ವಿಭೂತಿ ಮಾತನಾಡಿ ಕವಿಗೆ ಪ್ರಚಾರದ ಹುಚ್ಚು ಇರಬಾರದು, ಆಳವಾದ ಅಧ್ಯಯನ ಮಾಡಬೇಕು. ಬರೆಯುವ ಕವನಗಳು ಗುಣಮಟ್ಟದಲ್ಲಿರಬೇಕು. ಬರೆದ ಸಾಹಿತ್ಯ ಶೀಘ್ರ ಪ್ರಕಟವಾಗಬೇಕೆಂಬ ಅವಸರ ಮಾಡಬಾರದು. ಕಾವ್ಯದಲ್ಲಿ ಚೈತನ್ಯ, ಪ್ರೀತಿ , ಸೌಂದರ್ಯ ಇರಬೇಕು ಎಂದು ಬೇಂದ್ರೆಯವರು ಹೇಳುತ್ತಾರೆ. ಎಂದು ಬೇಂದ್ರೆಯವರ ಕವನ ಉದಾಹರಣೆ ಕೊಡುತ್ತಾ ಕಾವ್ಯದ ರಚನೆ ಹೇಗಿರಬೇಕೆಂಬುದನ್ನು ಹೇಳಿದರು.

ಜಾನಪದರು ಕಾವ್ಯ ಕಟ್ಟುತ್ತಿದ್ದ ಪರಿಕಲ್ಪನೆಯನ್ನು ವಿವರಿಸಿದರು. ಕಾವ್ಯ ಬರೆದು ಅದನ್ನು ಪುನಾರಾವರ್ತಸಿಕೊಂಡು ಓದಬೇಕು. ಕಪ್ಪತಗಿರಿ ಫೌಂಡೇಶನ್ ನ ಅಧ್ಯಕ್ಷರಾದ ಚಂದ್ರಕಲಾ ಇಟಗಿಮಠ ಅವರು ತುಂಬಾ ಕ್ರೀಯಾಶೀಲ ಸಂಘಟಕರು ಇದೇ ರೀತಿ ಹಲವಾರು ಕಾರ್ಯಕ್ರಮಗಳು ಜರುಗಲಿ ಎಂದು ಆಶಿಸಿದರು.

ಹಾರುವ ಹಕ್ಕಿ ರಚನೆ ಮಾಡಿದ ಕವಿಯತ್ರಿ ಗೀತಾ ಮಲ್ಲನಗೌಡ್ರ ಹಾಗೂ ಅತಿಥಿಗಳಾದ ಪರಮೇಶ್ವರ ನಾಯಕ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದ ಚಂದ್ರಕಲಾ ಇಟಗಿಮಠ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಕಾರ್ಯಕ್ರಮವನ್ನು ವಿದ್ಯಾ ಸಿಂದಬಾಳ ಹಾಗೂ ಈಶ್ವರ ಕುರಿ ಅವರು ಅಚ್ಚುಕಟ್ಟಾಗಿ ನಿರ್ವಹಿಸಿ, ನಿರೂಪಿಸಿದರು. ಶಿವಲೀಲಾ ದನ್ನಾ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ಅಪಾರ ಸಾಹಿತ್ಯಾಸಕ್ತರು, ಸಾಹಿತಿಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments