Headlines

ಸಂಜು ವೆಡ್ಸ್ ಗೀತಾ ಭಾಗ-2 ಚಲನಚಿತ್ರ ತಂಡ:ಗದಗನಲ್ಲಿ ನಾಯಕ ನಟ ಶ್ರೀನಗರ ಕಿಟ್ಟಿ ನೇತೃತ್ವದಲ್ಲಿ ಚಿತ್ರದ ಪ್ರಚಾರ

ಗದಗ: ಕನ್ನಡ ಚಲನಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸಂಜು ವೆಡ್ಸ್ ಗೀತಾ ಚಲನಚಿತ್ರ ಅಭಿಮಾನಿಗಳಲ್ಲಿ ಒಂದು ರೀತಿಯ ಗುಂಗು ಹಿಡಿಸಿತ್ತು. ಅದೇ ರೀತಿ ಇದೀಗ ಸಂಜು ವೆಡ್ಸ್ ಪಾರ್ಟ್ -2 ಇದೀಗ ಮತ್ತೊಮ್ಮೆ ಅಭಿಮಾನಿಗಳ ನಿದ್ದೆಗೆಡಿಸಲು ಸಜ್ಜಾಗುತ್ತಿದೆ. ಇದರ ಬೆನ್ನಲ್ಲೆ, ಚಿಂತ್ರತಂಡ ಈಗಾಗಲೇ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದ್ದು, ನಗರದ ನೀರಿಕ್ಷಣಾ ಮಂದಿರದಲ್ಲಿ ಅಭಿಮಾನಿಗಳು ಹಾಗೂ ಆಪ್ತರ ಜೊತೆ ಸೇರಿ ಸಭೆ ನಡೆಸಿದ್ದಾರೆ.

ಚಿತ್ರದ ನಾಯಕ ನಟ ಶ್ರೀನಗರ ಕಿಟ್ಟಿ ಸೇರಿದಂತೆ ನಿರ್ಮಾಪಕ ಹಾಗೂ ಅವರ ತಂಡ ಗದಗ ನಗರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಈ ಹಿಂದೆ ಬಂದ ಸಂಜುವೆಡ್ಸ್ ಗೀತಾ ಚಿತ್ರವನ್ನು ಕರ್ನಾಟಕದ ಜನತೆ ಮೆಚ್ಚಿಕೊಂಡು ಕರ್ನಾಟಕದಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಂಡಿದ್ದು ಇತಿಹಾಸ. ಅದೇ ತರಹ ಭಾಗ-೨ರ ಈ ಚಿತ್ರ ಅಷ್ಟೆ ಸೊಗಸಾಗಿ ಬಂದಿದೆ. ಚಿತ್ರದಲ್ಲಿರುವ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದ್ದು, ಕುಟುಂಬ ಸಮೇತರಾಗಿ ಕುಳಿತು ಯಾವುದೇ ಮುಜುಗುರವಿಲ್ಲದೇ ನೋಡುವ ಸಿನಿಮಾ ಇದಾಗಿದೆ ಎಂದು ಚಿತ್ರದ ನಿರ್ಮಾಪಕ ಛಲವಾದಿ ಕುಮಾರ್ ಹೇಳಿದರು.

ನಾಯಕ ನಟರಾದ ಶ್ರೀ ನಗರ ಕಿಟ್ಟಿ, ಮಾತನಾಡಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದ್ದು,ನಾಯಕಿಯಾಗಿ ರಚಿತಾರಾಮ್  ನಟಿಸಿದ್ದಾರೆ. ಹಾಸ್ಯ ನಟರಾಗಿ ಸಾಧುಕೋಕಿಲ ನಟಿಸಿದ್ದಾರೆ. ಸಂಜುವೆಡ್ಸ್ ಗೀತಾ ಭಾಗ-2 ಇದೇ ದಿನಾಂಕ 10 ರಂದು ಬಿಡುಗಡೆಯಾಗುತ್ತಿದ್ದು ಎಲ್ಲರೂ ಚಿತ್ರಮಂದಿರಕ್ಕೆ ಬಂದು ನೋಡಿ ಹಾರೈಸಿ ಎಂದು ವಿನಂತಿ ಮಾಡಿಕೊಂಡರು.

ಇದೇ ವೇಳೆ, ಬಸವರಾಜ ಕಡೇಮನಿ ಮಾತನಾಡಿದರು.ಈ ಸಂದರ್ಭದಲ್ಲಿ ಗದಗ ಜಿಲ್ಲಾ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷರಾದ ಆನಂದ ಶಿಂಗಾಡಿ, ಹಿರಿಯರಾದ ಗುರುಬಸಪ್ಪ ಬಿಳೆಯಲಿ, ದೇವಪ್ಪ ಬಣಕಾರ, ಶಂಭು ಹುನಗುಂದ, ಪರಮೇಶ ಕಾಳಿ, ರಾಮು ಬಾಗಲಕೋಟೆ, ಶರೀಫ್ ಬಿಳೆಯಲಿ, ಅನಿಲ್ ಕಾಳೆ, ಪರಶು ಕಾಳೆ, ಶಿವಾನಂದ ತಮ್ಮಣ್ಣವರ, ಶಿವಾನಂದ ಕರಿಯಣ್ಣವರ, ಗೋಪಾಲ ಕಾಳೆ, ಅಕ್ಷಯ ಬಿಳೆಯಲಿ ಮಲ್ಲು ಬಾರಕೇರ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *