ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ದೇಹದ ಬೆನ್ನು ಮೂಳೆಯಲ್ಲಿ ಸಿಲುಕಿಕೊಂಡಿದ್ದ 2.5 ಇಂಚು ಉದ್ದದ ಚಾಕುವಿನ ಪೀಸ್ ನ್ನ ವೈದ್ಯರು ಹೊರತೆಗಿದಿದ್ದಾರೆ.
ನಟನಿಗೆ ಹಂತಕ 6 ಬಾರಿ ಚಾಕು ಇರಿದಿದ್ದು, ಸದ್ಯ ಚಿಕಿತ್ಸೆ ಕೊಡಲಾಗುತ್ತಿದೆ. ಅವರ ಬೆನ್ನುಮೂಳೆಯಲ್ಲಿ ಚಾಕು ಸಿಲುಕಿಕೊಂಡಿದ್ದರಿಂದ ತೀವ್ರ ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ. ಇನ್ನು ಬೆನ್ನಿನ ಭಾಗದಲ್ಲಿ ಸೋರಿಕೆಯಾಗುತ್ತಿದ್ದ ಬೆನ್ನುಮೂಳೆಯ ದ್ರವ ಸರಿಪಡಿಸಲಾಗಿದೆ ಎಂಬುದನ್ನು ಲೀಲಾವತಿ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.
ಲೀಲಾವತಿ ಆಸ್ಪತ್ರೆಯ ವೈದ್ಯ ನಿತಿನ್ ಡಾಂಗೆ ಅವರ ಪ್ರಕಾರ, ಸೈಫ್ ಅಲಿ ಖಾನ್ ಅವರ, ರಿಸ್ಕ್ ಫ್ಯಾಕ್ಟರ್ಸ್ ಕೊನೆಗೊಂಡಿದೆ. ಸೈಫ್ ಅಲಿ ಖಾನ್ ಡೇಂಜರ್ ಕಂಡೀಶನ್ನಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ. ನಟ ಸದ್ಯ ಸಂಪೂರ್ಣ ಸ್ಥಿರವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.ದಾಳಿಯ ನಂತರ ನಟನ ಮುಖ ಮತ್ತು ದೇಹದ ಭಾಗಗಳಲ್ಲಿ ಅನೇಕ ಗಾಯಗಳು ಕಂಡು ಬಂದಿವೆ ಎಂದು ಲೀಲಾವತಿ ಆಸ್ಪತ್ರೆಯ ಅಧಿಕೃತ ಮೂಲಗಳು ತಿಳಿಸಿವೆ.

ಕಳೆದ ಮಧ್ಯರಾತ್ರಿ ಬಾಂದ್ರಾದಲ್ಲಿರುವ ನಿವಾಸದಲ್ಲಿ ಸೈಫ್ ಅಲಿ ಖಾನ್ ಮೇಲೆ ದುಷ್ಕರ್ಮಿ ದಾಳಿ ನಡೆಸಿದ್ದನು. ನಟನ ಕೈ ಮತ್ತು ಕುತ್ತಿಗೆಯ ಗಂಭೀರ ಗಾಯ ಸೇರಿದಂತೆ ದೇಹದಲ್ಲಿ ಕನಿಷ್ಠ ಆರು ಗಾಯಗಳಾಗಿವೆ.
ಬೆನ್ನುಮೂಳೆಯಲ್ಲಿ ಚಾಕು ಸಿಲುಕಿದ್ದರಿಂದ (thoracic spinal cord). ದೇಹದಿಂದ ಚಾಕು ತೆಗೆದುಹಾಕಲು ಮತ್ತು ಬೆನ್ನುಮೂಳೆಯಿಂದ ಸೋರಿಕೆಯಾಗುತ್ತಿದ್ದ ದ್ರವವನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರ ಎಡಗೈಯಲ್ಲಾದ ಎರಡು ಗಂಭೀರ ಗಾಯಗಳು ಮತ್ತು ಕುತ್ತಿಗೆಯಲ್ಲಾದ ಗಾಯವನ್ನು ಪ್ಲಾಸ್ಟಿಕ್ ಸರ್ಜರಿ ತಂಡ ಸರಿಪಡಿಸಿದೆ. ಅವರೀಗ ಸಂಪೂರ್ಣವಾಗಿ ಸ್ಥಿರವಾಗಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ” ಎಂದು ಡಾ.ಡಾಂಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇನ್ಮು ಇಡೀ ಘಟನೆ ದರೋಡೆ ಪ್ರಯತ್ನ ದಂತೆ ಕಾಣುತ್ತಿದೆ ಎಂದು ಮುಂಬೈ ಪೊಲೀಸ್ ಝೋನ್ 9 ರ ಡಿಸಿಪಿ ದೀಕ್ಷಿತ್ ಗೆಡಮ್ ಹೇಳಿದ್ದಾರೆ. ದುಷ್ಕರ್ಮಿ ನಟನ ಮನೆಗೆ ಫೈಯರ್ ಎಸ್ಕೇಪ್ ಸ್ಟೇರ್ಕೇಸ್ (ಅಗ್ನಿ ಅವಘಡವಾದಾಗ ತಪ್ಪಿಸಿಕೊಳ್ಳುವ ಮೆಟ್ಟಿಲುಗಳು) ಮೂಲಕ ಪ್ರವೇಶಿಸಿದ್ದನು. ನಾವು ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದೇವೆ. ಹತ್ತು ಡಿಟೆಕ್ಷನ್ ಟೀಮ್ಸ್ ಪ್ರಕರಣದ ತನಿಖೆ ನಡೆಸುತ್ತಿವೆ” ಎಂದು ಮಾಹಿತಿ ನೀಡಿದರು.
ಮನೆ ಕೆಲಸದಾಕೆಯನ್ನು ಕಾಪಾಡಲು ಹೋದಾಗ ನಟನ ಮೇಲೆ ಹಲ್ಲೆ:
ಬಾಂದ್ರಾದ ಸತ್ಗುರು ಶರಣ್ ಕಟ್ಟಡದಲ್ಲಿರುವ ಸೈಫ್ ಅಲಿ ಖಾನ್ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿ ಮೊದಲು ನಟನ ಮನೆಕೆಲಸದಾಕೆಯನ್ನು ಎದುರಿಸಿದ್ದಾನೆಂದು ಹೇಳಲಾಗಿದೆ. ಸೈಫ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಬಗೆಹರಿಸಲು ಪ್ರಯತ್ನಿಸಿದರು. ಅದಾಗ್ಯೂ, ಗಲಾಟೆ ಹಿಂಸೆಗೆ ತಿರುಗಿದೆ. ಪರಿಣಾಮವಾಗಿ, ಸೈಫ್ ಗಾಯಗೊಂಡರು ಎನ್ನಲಾಗಿದೆ.