ರೋಣ: ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನಕ್ಕೆ ರೋಣ ಶಾಸಕರಾದ ಜಿಎಸ್ ಪಾಟೀಲ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಸ್.ಎಂ.ಕೃಷ್ಣ ಅವರು ರಾಜ್ಯ ಕಂಡ ಮೇರು ವ್ಯಕ್ತಿತ್ವದ ಹಿರಿಯ ರಾಜಕಾರಣಿಗಳಾಗಿದ್ದರು.ಆದರೆ ಇಂದು ನಮ್ಮನ್ನೆಲ್ಲ ಬಿಟ್ಟು ಅಗಲಿರುವದು ನೋವಿನ ಸಂಗತಿ. ರಾಜ್ಯದ ಸಿಎಂ ಹಾಗೂ ಡಿಸಿಎಂ ಆಗಿದ್ದವರು ಎಸ್.ಎಂ.ಕೃಷ್ಣ. ಕೇಂದ್ರದ ವಿವಿಧ ಖಾತೆಯ ಸಚಿವರಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ ದೇಶಕ್ಕೆ ಸೇವೆ ಸಲ್ಲಿಸಿದವರು. ಅವರ ಕಾಲಾವಧಿಯಲ್ಲಿ ಬೆಂಗಳೂರನ್ನ ಸಿಂಗಾಪುರ ಮಾದರಿಯಲ್ಲಿ ಬೆಳೆಸುವ ಹಂಬಲ ಹೊಂದಿದ್ದರು. ಇಂದು ಬೆಂಗಳೂರನ್ನ ಐಟಿ, ಬಿಟಿ ಹಬ್ ಮಾಡಲು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ನಮ್ಮ ಕುಟುಂಬದ ಮೇಲೂ ಎಸ್ ಎಂಕೆ ಪ್ರೀತಿ ವಿಶ್ವಾಸ ಇಟ್ಟಿದ್ದರು. ಅವರ ಅಧಿಕಾರವಧಿಯಲ್ಲಿ ಸಹೋದರ ವಿ.ಎಸ್ ಪಾಟೀಲರನ್ನ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು. ಅವರ ದಕ್ಷ ಆಡಳಿತ ಕಂಡು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನಾಗಿಯೂ ಮಾಡಿದ್ದರು. 2004 ರಲ್ಲಿ ನಮ್ಮ ಕುಟುಂಬದ ಮೂವರು ಸಹೋದರರಿಗೆ ಸ್ಪರ್ಧಿಸಲು ಎಸ್.ಎಂ.ಕೆ ಅವಕಾಶ ಮಾಡಿ ಕೊಟ್ಟಿದ್ದರು.ಅಲ್ಲದೇ ಬಿಸಿಯೂಟ, ಸ್ತ್ರೀ ಶಕ್ತಿ ಯೋಜನೆ ತಂದ ಎಸ್.ಎಂ.ಕೆ, ಇಂದು ನಮ್ಮಜೊತೆ ಇಲ್ಲದೇ ಇರಬಹುದು.ಆದ್ರೆ ಅವರು ಮಾಡಿದ ಕೆಲಸ ನಮ್ಮ ಜೊತೆಗಿವೆ. ಎಸ್.ಎಂ.ಕೆ.ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಜಿ.ಎಸ್.ಪಾಟೀಲ ಸಂತಾಪ ಸೂಚಿಸಿದ್ದಾರೆ.