Sunday, April 20, 2025
Homeರಾಜ್ಯಖಾಸಗಿ ಶಾಲಾ ಕಾಲೇಜು ವಾಹನಗಳ ಮೇಲೆ RTO ಅಧಿಕಾರಿಗಳ ದಾಳಿ! ನಿಯಮ‌ ಪಾಲಿಸದ ವಾಹನಗಳ ಜಪ್ತಿ!

ಖಾಸಗಿ ಶಾಲಾ ಕಾಲೇಜು ವಾಹನಗಳ ಮೇಲೆ RTO ಅಧಿಕಾರಿಗಳ ದಾಳಿ! ನಿಯಮ‌ ಪಾಲಿಸದ ವಾಹನಗಳ ಜಪ್ತಿ!

ಬೆಂಗಳೂರು: ಬೆಳ್ಳಂಬೆಳಗ್ಗೆ ಖಾಸಗಿ ಶಾಲಾ, ಕಾಲೇಜು ವಾಹನಗಳಿಗೆ ಆರ್‌ಟಿಓ (RTO Officers) ಬಿಸಿಮುಟ್ಟಿಸಿದ್ದಾರೆ. ನಿಯಮ ಪಾಲಿಸದ ನೂರಕ್ಕೂ ಹೆಚ್ಚು ಶಾಲಾ, ಕಾಲೇಜು ವಾಹನಗಳನ್ನು ಆರ್‌ಟಿಓ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚಾಲಕರು ಮಕ್ಕಳನ್ನು ಕುರಿಗಳಂತೆ ಬೇಕಾಬಿಟ್ಟಿಯಾಗಿ ಓಮಿನಿ ವಾಹನಗಳಲ್ಲಿ, ಕರೆದುಕೊಂಡು ಹೋಗುತ್ತಿದ್ದರು. ಎಫ್ಸಿ ರಿನಿವಲ್, ಪರ್ಮಿಟ್ ಇಲ್ಲದ, ಟ್ಯಾಕ್ಸ್ ಕಟ್ಟದ, ಚಾಲಕರ ಡಿಎಲ್ ನವೀಕರಣ ಇಲ್ಲದ, ಇನ್ಸುರೆನ್ಸ್ ನವೀಕರಣ ಆಗದ ವಾಹನಗಳನ್ನು ಸೀಜ್ ಮಾಡಿದ್ದಾರೆ.

*ಶಾಲೆಗಳು ಪಾಲಿಸಬೇಕಾದ ನಿಯಮಗಳು*

ಶಾಲಾ ವಾಹನಗಳು ಶಾಲೆ ಹೆಸರಿನಲ್ಲೇ ನೊಂದಣಿ ಆಗಿರಬೇಕು.

ಶಾಲಾ-ಕಾಲೇಜು ವಾಹನಗಳ ಮೇಲೆ ಶಾಲೆ ಹೆಸರು ಮತ್ತು ವಿಳಾಸ, ದೂರವಾಣಿ ಸಂಖ್ಯೆ ಇರಬೇಕು.

ವಾಹನದೊಳಗೆ ಸಿಸಿ ಕ್ಯಾಮರಾ, ಫ್ಯಾನಿಕ್ ಬಟನ್, ಫಸ್ಟ್ ಏಡ್ ಬಾಕ್ಸ್, ಫೈರ್ ಎಸ್ಟಿಂಗ್ ವಿಷರ್ ಇರಬೇಕು.

ಈ ಯಾವ ನಿಯಮಗಳನ್ನೂ ಕೂಡ ಪಾಲನೆಯಾಗದ ಶಾಲಾ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಆರ್ ಟಿಓ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments