ಹೊಸ ವರ್ಷದ ಪ್ರಾರಂಭದ ದಿನಗಳಲ್ಲೇ ಜನರಲ್ಲಿ ದರೋಡೆಕೋರರ ಆತಂಕ ಹೆಚ್ಚಾಗಿದೆ. ಹೌದು, ಬ್ಯಾಂಕ್ ದರೋಡೆ, ಎಟಿಎಮ್ ದರೋಡೆ, ಮನೆ ದರೋಡೆ, ಹೈವೆ ರಾಬರಿ ಸೇರಿದಂತೆ ರಾಜ್ಯದಲ್ಲಿ ಸರಣಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ.
ಈ ದರೋಡೆಗಳಿಂದ ಜನರು ನೆಮ್ಮದಿಯಿಂದ ಹೊರಗೆ ಹೆಜ್ಜೆ ಹಾಕುವದು ದುಸ್ಥರವಾಗಿದೆ. ಹಾಗೂ ಭಯಭೀತರಾಗಿದ್ದಾರೆ.

ಹೆಚ್ಚು ಹಣ ಕೊಂಡೊಯ್ಯಲು ಹೆದರುತ್ತಿದ್ದಾರೆ. ಈ ಸರಣಿ ಪ್ರಕರಣಗಳ ಬೆನ್ನಲ್ಲೇ, ಮೈಸೂರಿನಲ್ಲಿ ಇಂದು ಉದ್ಯಮಿಯೊಬ್ಬರ ಮೇಲೆ ದಾಳಿ ನಡೆದಿದೆ. ಅವರ ಬಳಿಯಿದ್ದ ಲಕ್ಷಾಂತರ ಹಣ ಲೂಟಿ ಮಾಡಲಾಗಿದೆ. ಹಣ ಸಾಗಾಟದ ಬಗ್ಗೆ ಸಮರ್ಪಕ ಮಾಹಿತಿ ಹೊಂದಿರುವ ದುಷ್ಕರ್ಮಿಗಳು ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂಬುದು ಪೊಲೀಸರ ಹೇಳಿಕೆ.
ಹೀಗಾಗಿ ಪ್ರಯಾಣ ಮಾಡುವ ವೇಳೆ ಹೆಚ್ಚು ಹಣ ತೆಗೆದುಕೊಂಡು ಹೋಗದೆ ಬ್ಯಾಂಕ್ ವ್ಯವಹಾರ ಆಶ್ರಯಿಸಬೇಕೆಂದು ಪೊಲೀಸರು ಸೂಚಿಸಿದ್ದಾರೆ.