ಗದಗ : ತಾಲೂಕಿನ ಹಾತಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನರಸಾಪೂರ ಗ್ರಾಮದ ಲಕ್ಕಮ್ಮದೇವಿ ನಗರದ ರಸ್ತೆಯು ಹೊಂಡಗಳಿಂದ ಕೂಡಿದ್ದು, ಕೆಸರುಮಯವಾಗಿ ಸಂಚಾರಕ್ಕೆ ತೊಡಕು ಉಂಟಾಗಿತ್ತು. ಈ ಕುರಿತು ಅ.23 ರಂದು”ಸಿಟಿ ಎಕ್ಸ್‌ಪ್ರೆಸ್” ನಲ್ಲಿ ಸಮಸ್ಯೆ ನಿಮ್ಮದು..! ಪರಿಹಾರ ನಮ್ಮಲಿಲ್ಲ..! ಎನ್ನುವ ಹಾಗಿದೆ ಅಧಿಕಾರಿಗಳ ನಡೆ.. ? ಎಂಬ ಶಿರ್ಷಿಕೆಯಡಿ
ಸಚಿತ್ರ ವರದಿ ಪ್ರಕಟವಾಗಿತ್ತು.
ವರದಿ : ಪರಮೇಶ ಎಸ್ ಲಮಾಣಿ
ವರದಿಗೆ ಸ್ಪಂದಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹದಗೆಟ್ಟ ರಸ್ತೆಯನ್ನು ದುರಸ್ಥಿ ಮಾಡಲು ಮುಂದಾಗಿದ್ದಾರೆ.
ಸಿಟಿ ಎಕ್ಸ್‌ಪ್ರೆಸ್ ವರದಿ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳು ರಸ್ತೆ ದುರಸ್ಥಿ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಸಮಾಧಾನ ಮೂಡಿಸಿದೆ.
