ಬೆಂಗಳೂರು, ಮೇ 05: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಗೆ ಪ್ರತೀಕಾರ ತೀರಿಸಲು ಭಾರತ ಸರ್ಕಾರ ತೀವ್ರ ತಯಾರಿ ನಡೆಸುತ್ತಿದೆ. ರಾಷ್ಟ್ರದ ವಿವಿಧ ಭಾಗಗಳಲ್ಲಿ ಭದ್ರತಾ ಸಿದ್ಧತೆಯ ನಿಟ್ಟಿನಲ್ಲಿ ಭಾರೀ ಪ್ರಮಾಣದಲ್ಲಿ ಮಾಕ್ ಡ್ರಿಲ್‌ಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಕರ್ನಾಟಕದಲ್ಲಿ ಕೂಡ ಮಾಕ್ ಡ್ರಿಲ್ ನಡೆಸಲು ತೀರ್ಮಾನಿಸಲಾಗಿದೆ.
ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, “ಬುಧವಾರ ಸಂಜೆ 4 ಗಂಟೆಗೆ ಬೆಂಗಳೂರು, ಕಾರವಾರ ಹಾಗೂ ರಾಯಚೂರಿನಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ಈಗಾಗಲೇ ಅಗ್ನಿಶಾಮಕ ದಳ, ಸಿವಿಲ್ ಡಿಫೆನ್ಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಮಾಕ್ ಡ್ರಿಲ್ಲಿನಲ್ಲಿ ಎನ್ಸಿಸಿ, ಎನ್ಎಸ್ಎಸ್, ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಭಾಗವಹಿಸಲಿದ್ದಾರೆ” ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ 32 ಸ್ಥಳಗಳಲ್ಲಿ ಮಾಕ್ ಡ್ರಿಲ್: ಜನತೆ ಹದುವಾಗಿ ಸಹಕರಿಸಬೇಕೆಂಬ ವಿನಂತಿ
ಬೆಂಗಳೂರು ನಗರದಾದ್ಯಂತ 35 ಕಡೆಗಳಲ್ಲಿ ಸೈರನ್ ವ್ಯವಸ್ಥೆ ಇದೆ. ಇವುಗಳಲ್ಲಿ 32 ಕಡೆಗಳಲ್ಲಿ ಸೈರನ್ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಸ್ಥಳಗಳಲ್ಲಿ ನಾಳೆ ಮಾಕ್ ಡ್ರಿಲ್ ಜರುಗಲಿದೆ. ಡಿಜಿಪಿ ಹೇಳಿದರು, “ಸೈರನ್ ಕೇಳಿದಾಗ ಜನರು ಆತಂಕ ಪಡುವ ಅಗತ್ಯವಿಲ್ಲ. ಇದು ಪೂರ್ವಸಿದ್ಧತೆಗಾಗಿ ನಡೆಯುವ ಮಾದರಿ ತಾಲೀಮು. ಸಾರ್ವಜನಿಕರು ಶಿಸ್ತುಪಾಲಿಸಿ ಸಹಕರಿಸಬೇಕಾಗಿದೆ. ಕೇಂದ್ರ ಸರ್ಕಾರದಿಂದ ಸಾರ್ವಜನಿಕರಿಗೆ ಮಾರ್ಗಸೂಚಿ ಹಾಗೂ ನಡವಳಿಕೆ ಸಂಬಂಧಿಸಿದಂತೆ ಸುತ್ತೋಲೆ ಕೂಡ ಹೊರಡಿಸಲಾಗುವುದು.”

ಮೇಲಿನ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಮಾಕ್ಡ್ರಿಲ್ ನಡೆಯಲಿರುವ ಪ್ರಮುಖ ಸ್ಥಳಗಳ ವಿವರ:
ಇಂಡಿಯನ್ ಇನ್ಸ್ಟಿಟ್ಯೂಟ್
ಸಿಕ್ಯುಎಎಲ್
ಇಎಸ್ಐ ಆಸ್ಪತ್ರೆ
ಎನ್ಎಎಲ್
ಬೆಂಗಳೂರು ಡೈರಿ
ಕೆನರಾ ಬ್ಯಾಂಕ್
ಎಸ್‌ಆರ್‌ಎಸ್ ಪೀಣ್ಯ
ವಿವಿ ಟವರ್ ಅಗ್ನಿಶಾಮಕ ಠಾಣೆ
ಜ್ಞಾನಭಾರತಿ, ಥಣಿಸಂದ್ರ, ಬಾಣಸವಾಡಿ, ಯಶವಂತಪುರ, ಬನಶಂಕರಿ, ರಾಜಾಜಿನಗರ, ಚಾಮರಾಜಪೇಟೆ ಅಗ್ನಿಶಾಮಕ ಠಾಣೆಗಳು
ಕಮರ್ಷಿಯಲ್ ಸ್ಟ್ರೀಟ್, ಹಲಸೂರು ಗೇಟ್, ಉಪ್ಪಾರಪೇಟೆ, ರಾಜರಾಜೇಶ್ವರಿ ನಗರ, ಕಾಮಾಕ್ಷಿಪಾಳ್ಯ, ಕೆ.ಆರ್.ಮಾರ್ಕೆಟ್, ವೈಯಾಲಿಕಾವಲ್ ಪೊಲೀಸ್ ಠಾಣೆಗಳು
ಹಲಸೂರು ಗೃಹರಕ್ಷಕದಳ ಕೇಂದ್ರ ಕಚೇರಿ
ಪೀಣ್ಯ, ಬಾಗಲೂರು, ಅಂಜನಾಪುರ, ಐಟಿಪಿಎಲ್, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ ಮತ್ತು ಡೈರಿ ಸರ್ಕಲ್ ಅಗ್ನಿಶಾಮಕ ಠಾಣೆಗಳು.

ABVPನಿಂದ ಯುವಕರಿಗೆ ಕರೆ: ಮಾಕ್ ಡ್ರಿಲ್ಲಿನಲ್ಲಿ ಸಕ್ರಿಯ ಪಾಲ್ಗೊಳ್ಳಿ
ಪಹಲ್ಗಾಮ್ ದಾಳಿಯ ನಂತರ ದೇಶದ ಭದ್ರತೆ ಕುರಿತಾಗಿ ಗಂಭೀರ ಚಿಂತನೆ ನಡೆದಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧಗಳಲ್ಲಿ ಉದ್ವಿಗ್ನತೆ ವೃದ್ಧಿಯಾಗಿರುವ ಹೊತ್ತಿನಲ್ಲಿ ಯುವಜನತೆಯಲ್ಲಿ ಭದ್ರತಾ ಅರಿವು ಮೂಡಿಸುವ ಉದ್ದೇಶದಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಮಾಕ್ ಡ್ರಿಲ್ಲಿನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದೆ.

ಈ ಮಾಕ್ ಡ್ರಿಲ್ ಕೇವಲ ಭದ್ರತಾ ಪಡೆಗಳ ಪರಿಕ್ಷೆ ಮಾತ್ರವಲ್ಲ; ಜನಸಾಮಾನ್ಯರ ಸಹಕಾರ ಮತ್ತು ಸಜಾಗತೆಯ ಪ್ರಮಾಣಿತ ನೋಟವೂ ಹೌದು. ಹೀಗಾಗಿ ನಾಳೆ ನಡೆಯಲಿರುವ ಈ ಅಭ್ಯಾಸದ ಫಲಶ್ರುತಿಯಲ್ಲಿ ಕರ್ನಾಟಕವು ಭದ್ರತೆಗೆ ಸಜ್ಜಾಗಿರುವ ರಾಜ್ಯವೆಂದು ದೇಶಕ್ಕೆ ಸಂದೇಶ ನೀಡಲಿದೆ.