ಲಕ್ಷ್ಮೇಶ್ವರ: ದೊಡ್ಡೂರು ಪಂಚಾಯತಿಯ ಮುನಿಯನ ತಾಂಡಾದ ಲಕ್ಷಣ ದೇವಲಪ್ಪ ಲಮಾಣಿ ಇವರ ಜಮೀನಿನ ಸರ್ವೆ ನಂ. 73/2 ರಲ್ಲಿರುವ ಸಿ.ಸಿ.ರಸ್ತೆ, ಪೈಪ್ ಲೈನ್, ವಿದ್ಯುತ್ ಕಂಬಗಳು, ಶಾಲಾ ಕಂಪೌಂಡಿನ ಮೇನ್ ಗೇಟ್ ಇವುಗಳನ್ನು ತೆರವುಗೊಳಿಸಲು ಭಾರತೀಯ ಕಿಸಾನ ಕರ್ನಾಟಕ ಪ್ರದೇಶ ಸಂಘದಿಂದ ದೊಡ್ಡೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕಾರ್ಯದರ್ಶಿ ಲಕ್ಷ್ಮಣ ಲಮಾಣಿ, ದೊಡ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮುನಿಯಾನ ತಾಂಡಾದ ನಿವಾಸಿ, ಲಕ್ಷ್ಮಣ ದೇವಪ್ಪ ಲಮಾಣಿ ಇವರ ಮಾಲ್ಕಿ ವಹಿವಾಟಿನಲ್ಲಿರುವ ಸರ್ವೆ ನಂ. 73/2 ರಲ್ಲಿರುವ ಮುಖ್ಯ ರಸ್ತೆಯಿಂದ ಜಮಲಪ್ಪ ಲಮಾಣಿ ಇವರ ಮನೆಯಿಂದ ರಾಮಣ್ಣ ಪೂರಪ್ಪ ಲಮಾಣಿ ಇವರ ಮನೆಯವರೆಗೆ ಈ ಮೊದಲು ಕಾಲು ದಾರಿ ಇದ್ದು, ಈಗ ಅಲ್ಲಿ ಸಿ.ಸಿ. ರಸ್ತೆ ನಿರ್ಮಿಸಲಾಗಿದೆ.ಹಾಗೂ ಸದರಿ ಸರ್ವೆ ನಂಬರಿನಲ್ಲಿ ಪೈಪ್ ಲೈನ್ ಅಳವಡಿಸಿರುತ್ತಾರೆ. ಸರಕಾರಿ ಪ್ರಾಥಮಿಕ ಶಾಲೆಯಿಂದ ಜೇಮಲಪ್ಪ ಲಮಾಣಿ ಇವರ ಮನೆಯವರೆಗೆ ವಿದ್ಯುತ್ ಕಂಬಗಳು ಇರುತ್ತವೆ. ಸದರಿ ಸರ್ವೆ ನಂಬರಿನಲ್ಲಿ ಸದರಿ ಶಾಲು ಕಂಪೌಂಡ್ ಮೇನ್ ಗೇಟ್ ಇರುತ್ತದೆ.

ಸಿ.ಸಿ.ರಸ್ತೆ, ಪೈಪ್ ಲೈನ್, ವಿದ್ಯುತ್ ಕಂಬಗಳು, ಶಾಲಾ ಕಂಪೌಂಡಿನ ಮೇನ್ ಗೇಟ್ ಇವುಗಳೆಲ್ಲವೂ ಸರ್ವೆ ನಂ. 73/2 ರಲ್ಲಿ ಇರುತ್ತವೆ. ಇವುಗಳಿಂದ ರೈತನಿಗೆ ತುಂಬಾ ತೊಂದರೆಯಾಗುತ್ತಿದ್ದು, ಸದರಿ ಸ್ಥಳವನ್ನು ತಾವು ಖುದ್ದಾಗಿ ಪರಿಶೀಲಿಸಿ . ಅವುಗಳನ್ನು ತೆರವುಗಳಿಸಿ ಈ ಮೊದಲಿನ ಸ್ಥಿತಿಯಲ್ಲಿ ಸರ್ವೆ ನಂ. 73/2ನ್ನು ಮಾಡಿಕೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಿರಪ್ಪ ಲಮಾಣಿ, ಮಹಾದೇವಪ್ಪ ಲಮಾಣಿ, ರಾಮಣ್ಣ ಲಮಾಣಿ, ಶಾಂತವ್ವ ಲಮಾಣಿ, ಲಕ್ಷ್ಮಣ ಲಮಾಣಿ, ಸೊನವ್ವ ಲಮಾಣಿ, ಗೋವಿಂದಪ್ಪ ಲಮಾಣಿ, ದೇವಲಪ್ಪ ಲಮಾಣಿ, ಸುರೇಶ ಬಾಗಲದ, ಅಜೇಯ ಕರಿಗೌಡ್ರ ಮತ್ತಿತರಿದ್ದರು.