ಇಂದು ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್, ಹುಬ್ಬಳ್ಳಿ ಅವರು ಆಯೋಜಿಸಿದ್ದ ‘ಸಂವಿಧಾನ ಸನ್ಮಾನ’ ಮತ್ತು ಶ್ರೀ ವಿಕಾಸಕುಮಾರ ಪಿ. ಅವರು ಬರೆದ ’ಸಂವಿಧಾನ ಬದಲಾಯಿಸಿದ್ದು ಯಾರು?’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಉದ್ಘಾಟಿಸದರು, ಪುಸ್ತಕ ಲೋಕಾರ್ಪಣೆಯನ್ನು ಕೇಂದ್ರದ ಕಾನೂನು ರಾಜ್ಯ ಮತ್ತು ನ್ಯಾಯ ಸಚಿವರಾದ ಶ್ರೀ ಅರ್ಜುನ ರಾಮ್ ಮೆಘವಾಲ್ ಅವರು ನಡೆಸಿಕೊಟ್ಟರು. ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಶ್ರೀ ಚಲವಾದಿ ನಾರಾಯಣವರು ಪ್ರಸ್ತಾವನೆ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳಿಯ ಹುಬ್ಬಳ್ಳಿ ಧಾರವಾಡ ಪಶ್ಚಿಮದ ಶಾಸಕರಾದ ಶ್ರೀ ಅರವಿಂದ ಬೆಲ್ಲದ್, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಮಹೇಶ ಟೆಂಗಿನಕಾಯಿ, ಕುಂದಗೋಳ ಕ್ಷೇತ್ರದ ಶಾಸಕರಾದ ಶ್ರೀ ಎಂ. ಆರ್. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರದೀಪ ಶೆಟ್ಟರ ಹಾಗೂ ಶ್ರೀ ಎಸ್.ವಿ.ಸಂಕನೂರು, ಎಸ್ ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಂದ್ರ ಕೌತಾಳ ಹಾಗೂ ಮಹಾಪೌರ ಮತ್ತು ಉಪಮಹಾಪೌರರು , ಗಣ್ಯರು ಉಪಸ್ಥಿತರಿದ್ದರು.