ಬೆಂಗಳೂರು, ಎಪ್ರಿಲ್ 10:
ನಗರದ ಬುಲಿಯನ್ ಮಾರುಕಟ್ಟೆಯಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡುಬಂದಿದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿಯವರೆಗೆ ಕಂಡುಬಂದಿರದಷ್ಟು ಏರಿಕೆಯೊಂದಿಗೆ, ಚಿನ್ನದ ಬೆಲೆ ಹೊಸ ಇತಿಹಾಸ ಸೃಷ್ಟಿಸಿದೆ.
22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಯಲ್ಲಿ 2,700 ರೂ. ಏರಿಕೆಯಾಗಿ, ಇದೀಗ 85,600 ರೂ.ಗೆ ತಲುಪಿದೆ. ಇದೇ ವೇಳೆ, 24 ಕ್ಯಾರೆಟ್ ಚಿನ್ನದ ದರ 2,940 ರೂ. ಏರಿಕೆಯಾಗಿ 93,380 ರೂ.ಗೆ ಏರಿದೆ. ಇದರೊಂದಿಗೆ, ಗ್ರಾಹಕರಿಗೆ ಮದುವೆ ಮತ್ತು ಉತ್ಸವ ಋತುವಿನಲ್ಲಿ ಹೆಚ್ಚು ಖರ್ಚು ಮಾಡುವ ಅನಿವಾರ್ಯತೆ ಎದುರಾಗಿದೆ.

ಮೇಲಿನ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಬೆಳ್ಳಿಯ ದರದಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದ್ದು, ಪ್ರತಿ ಕೆಜಿಗೆ 2000 ರೂ. ಏರಿಕೆಯಾಗಿ ಇಂದಿನಿಂದ 95,000 ರೂ.ಗೆ ತಲುಪಿದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಅಂತರರಾಷ್ಟ್ರೀಯ ರಾಜಕೀಯ ಅವ್ಯವಸ್ಥೆ, ಬಂಡವಾಳ ಹೂಡಿಕೆದಾರರ ಭದ್ರತೆ ಹುಡುಕಾಟ ಮತ್ತು ಡಾಲರ್ ಮೌಲ್ಯದಲ್ಲಿ ಉಲ್ಬಣ ಈ ಬೆಲೆ ಏರಿಕೆಯ ಪ್ರಮುಖ ಕಾರಣಗಳಾಗಿವೆ.
