ಗದಗ: ಜೂನ್ 5:
ರಾಜಧಾನಿಯಲ್ಲಿ ನಿನ್ನೆ ನಡೆದ RCB ತಂಡದ ಸಂಭ್ರಮಾಚರಣೆ ವೇಳೆ ಭಾರೀ ದುರಂತವಾಗಿ ಪರಿಣತಗೊಂಡಿದ್ದು, 11 ಜನ ಅಭಿಮಾನಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಪ್ರಮುಖ ಕಾರಣವೆಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ.ಪಾಟೀಲ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಗದಗನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಏರ್ಪಡಿಸಿ ಮಾತಮಾಡಿದ ಅವರು, ವಿಧಾನಸೌಧದ ಒಳಗಡೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಸೇರಿ ಸಭೆ ಮಾಡಿದ್ರಿ. ಸಭೆಯಲ್ಲಿ ಕಾಂಗ್ರೆಸ್ ನಾಯಕರು ಅವ್ರ ಸಂಬಂಧಿಕರು ಬಿಟ್ಟರೆ ಬೇರೆ ಯಾರು ಇರಲಿಲ್ಲ. ಅದೊಂದು ಕಾಂಗ್ರೆಸ್ ಪಕ್ಷದ ಕುಟುಂಬದ ಸಭೆ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.
ಆರ್ ಸಿಬಿ ತಂಡಕ್ಕೆ ಅಪಾರ ಪ್ರಮಾಣದ ಅಭಿಮಾನಿಗಳ ಬೆಂಬಲ ಇದೆ. ಇದರ ಸಿಂಪತಿ ಪಡೆಯಲು ಕಾಂಗ್ರೆಸ್ ಮುಂದಾಗಿತ್ತು. ಅಧಿಕಾರಿಗಳು ಬೇಡ ಎಂದರೂ ಸಭೆಯನ್ನು ಮಾಡಿ, 11 ಕುಟುಂಬಗಳನ್ನ ಬೀದಿಗೆ ತಂದ ಕೀರ್ತಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಸಂತೋಷ ಲಾಡ್ ಈವರಿಗೆ ಬಾಯಿ ಬಿಟ್ಟಿದ್ದಿಲ್ಲ. ಆದರೆ ಈಗ ಜ್ಯೂನಿಯರ್ ಖರ್ಗೆ ಅವರು ಇದಕ್ಕೆ ಸರ್ಕಾರ ಹೊಣೆ ಅಂತಾ ಒಪ್ಪಿಕೊಂಡಿದ್ದಾರೆ. ಹೀಗಾಗಿ ಪ್ರಿಯಾಂಕಾ ಖರ್ಗೆ ರಾಜಕೀಯ ಇತಿಹಾಸದಲ್ಲಿ ಮೊದಲ ಭಾರಿ ಸತ್ಯವನ್ನು ನುಡಿದಿದ್ದಾರೆ ಎಂದು ವ್ಯಂಗ್ಯವಾಡಿದರು.
ಇನ್ನು ವಿಧಾನ ಸೌಧದಲ್ಲಿ ಕಾರ್ಯಕ್ರಮ ಮಾಡಿದ್ದೀರಿ. ಕಾರಣ ಇವರೇನು, ದೇಶದ ಪರವಾಗಿ ಹೋರಾಡಿದ ವ್ಯಕ್ತಿಗಳ ತಂಡವೇ ಎಂದು ಪ್ರಶ್ನಿಸಿ ಪಾಟೀಲರು, ಇದು ಐಪಿಎಲ್ ಬಂಡವಾಳ ಶಾಹಿಗಳು ಅವರನ್ನು ಖರೀದಿ ಮಾಡ್ತಾರೆ. 11 ಜನ ಅಭಿಮಾನಿಗಳು ಸಾವನ್ನಪ್ಪಿದ್ರು ಒಬ್ಬ ಆಟಗಾರ ವಿಷಾದ ವ್ಯಕ್ತಪಡಿಸಿಲ್ಲ ಎಂದರು.
ಹೀಗಾಗಿ 11 ಪ್ರಾಣವನ್ನು ತೆಗೆದುಕೊಂಡ ಕಾಂಗ್ರೆಸ್ ನಡೆಯನ್ನು ಬಿಜೆಪಿ ಖಂಡಿಸುತ್ತದೆ. ನಿವೃತ್ತ ನ್ಯಾಯಾಧೀಶರೇ ತನಿಖೆ ಮಾಡಬೇಕು. ಅಥವಾ ಸಿಬಿಐ ಸಂಸ್ಥೆಗೆ ಈ ಪ್ರಕರಣವನ್ನ ತನಿಖೆಗೆ ಒತ್ತಾಯಿಸಬೇಕು ಎಂದು ಒತ್ತಾಯಿಸಿದರು.
ಅದ್ಯಾಕೋ ಪ್ರಿಯಾಂಕ ಖರ್ಗೆ ಮೊದಲ ಬಾರಿಗೆ ಸರ್ಕಾರದ ತಪ್ಪನ್ನು ಒಪ್ಪಿಕೊಂಡಿದ್ದಾರೆ. “ಯಾರೂ ಸಭೆ ಮಾಡಬೇಡ ಎಂದಿಲ್ಲ ಅಂತ ಹೇಳುವ ಸಿಎಂ ಸಿದ್ಧರಾಮಯ್ಯ, ಹಾಗಾದರೆ ಸರ್ಕಾರ ಯಾರು ಸಲಹೆ ನೀಡಿದರು ಎಂಬುದನ್ನು ಬಹಿರಂಗ ಪಡಿಸಬೇಕು” ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಘಟನೆಗೆ ಭದ್ರತಾ ವೈಫಲ್ಯ ಎಂದಿದ್ದಾರೆ. ಆದರೆ, “ಭದ್ರತಾ ವೈಫಲ್ಯ ಎಂದರೆ ಅದು ಯಾರದು? ಸಿಎಂ ಸ್ವತಃ ಉತ್ತರ ಕೊಡಬೇಕು!” ಎಂದು ಸಿ ಸಿ ಪಾಟೀಲ್ ಒತ್ತಾಯಿಸಿದರು.
ರಾಜಕೀಯ ಲಾಭದ ಪ್ರಯತ್ನವೆ ದುರ್ಘಟನೆಗೆ ಕಾರಣ?
ವಿರೋಧಪಕ್ಷದ ಆರೋಪದ ಪ್ರಕಾರ, “ಸರ್ಕಾರ RCB ಅಭಿಮಾನಿಗಳ ಸಿಂಪತಿ ಗಳಿಸಲು ಈ ಸಮಾರಂಭ ಆಯೋಜಿಸಿತು. ಆದರೆ, ಇಂತಹ ಘಟನೆಗಳು ನಿರ್ಲಕ್ಷ್ಯದ ಪರಿಣಾಮವಾಗಿವೆ. ಅಧಿಕಾರಿಗಳು ಬೇಡ ಎಂದರೂ ಸಭೆ ನಡೆಸಿದ ಸರ್ಕಾರವೇ ಸಂಪೂರ್ಣ ಹೊಣೆಗಾರ.”
ಪರಿಹಾರ ಮತ್ತು ತನಿಖೆಗೆ ಆಗ್ರಹ
“ಮೃತರ ಕುಟುಂಬಗಳಿಗೆ RCB ತಂಡ ಮತ್ತು ಸರ್ಕಾರ ತಲಾ ₹50 ಲಕ್ಷ ಪರಿಹಾರ ನೀಡಬೇಕು,” ಎಂದು ಪಾಟೀಲ್ ಒತ್ತಾಯಿಸಿದ್ದಾರೆ. ಅಲ್ಲದೇ ಆಟಗಾರರ ನಿಶಬ್ದತೆಯ ಮೇಲೂ ಬೇಸರ ವ್ಯಕ್ತಪಡಿಸಿರುವ ಪಾಟೀಲರು, RCB ತಂಡದ ಯಾವ ಆಟಗಾರರೂ ಈ ದುರ್ಘಟನೆ ಬಗ್ಗೆ ತಮ್ಮ ವಿಷಾದವನ್ನ ವ್ಯಕ್ತಪಡಿಸಿಲ್ಲ ಎಂಬುದು ಮತ್ತೊಂದು ಆಕ್ರೋಶದ ಮೂಲವಾಗಿದೆ. “ಪ್ರಾಣ ಕಳೆದುಕೊಂಡ ಅಭಿಮಾನಿಗಳ ಬಗ್ಗೆ ಕಾಡುವ ನಿಜವೆಂದರೆ – ಕ್ರೀಡೆಗೆ ಜನರ ಭಾವನೆಯನ್ನು ಬಳಸಿಕೊಳ್ಳಲಾಗುತ್ತಿದೆ. ಕ್ರಿಕೆಟ್ ಮೇಲಿನ ನಂಬಿಕೆ ಕುಗ್ಗುತ್ತಿದೆ,” ಎಂದು ಅವರು ಕಿಡಿಕಾರಿದರು.