ಜಪಾನ್ ರಕ್ಷಣಾ ಸಚಿವ ಜನರಲ್ ನಕಾಟಾನಿ ಮತ್ತು ಫಿಲಿಪ್ಪೀನ್ಸ್ ನ ರಾಷ್ಟ್ರೀಯ ರಕ್ಷಣಾ ಕಾರ್ಯದರ್ಶಿ ಗಿಲ್ಬರ್ಟೊ ಟಿಯೊಡೊರೊ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಸಭೆಗಳೊಂದಿಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಲಾವೊ ಪಿಡಿಆರ್ ನ ವಿಯೆಂಟಿಯಾನ್ ನ ತಮ್ಮ ಮೂರು ದಿನಗಳ ಪ್ರವಾಸವನ್ನು ಇಂದು ಮುಕ್ತಾಯಗೊಳಿಸಿದರು.
ಜಪಾನಿನ ರಕ್ಷಣಾ ಸಚಿವರೊಂದಿಗಿನ ಸಭೆಯಲ್ಲಿ, ಇಬ್ಬರೂ ನಾಯಕರು ರಕ್ಷಣಾ ತಂತ್ರಜ್ಞಾನ ಮತ್ತು ಉದ್ಯಮದಲ್ಲಿ ಸಹಬಾಗಿತ್ವವದ ಬಗ್ಗೆ ಚರ್ಚಿಸಿದರು. ಜಪಾನ್ ನಲ್ಲಿ ಇತ್ತೀಚೆಗೆ ಯುನಿಕಾರ್ನ್ ಮಾಸ್ಟ್ ಒಪ್ಪಂದಕ್ಕೆ ಅಂಕಿತ ಹಾಕಿದ್ದನ್ನು ಅವರು ಸ್ಮರಿಸಿದರು, ಇದು ಜಂಟಿ ಪ್ರಯತ್ನಗಳಲ್ಲಿ ಒಂದು ಮೈಲಿಗಲ್ಲಾಗಿದೆ. ಈ ಪ್ರವಾಸದಿಂದ ಭಾರತ ಮತ್ತು ಜಪಾನಿನ ಪಡೆಗಳ ನಡುವೆ ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವುದರ ಜೊತೆಗೆ ರಕ್ಷಣಾ ಉತ್ಪಾದನೆಯಲ್ಲಿ ಸಹಬಾಗಿತ್ವ ಮತ್ತು ಹೊಸ ಅಭಿವೃದ್ಧಿಯ ಸಹಕಾರ ದೊರೆಯಲಿದೆ. ರಕ್ಷಣ ಸಾಮಾಗ್ರಿ ಸರಬರಾಜು ಮತ್ತು ಸೇವೆಗಳ ಪರಸ್ಪರ ಒಪ್ಪಂದದ ಮತ್ತು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಮಿಲಿಟರಿ ವ್ಯಾಯಾಮಗಳಲ್ಲಿ ಭಾಗವಹಿಸುವಿಕೆಯ ಬಗ್ಗೆ ಚರ್ಚಿಸಿದರು. ಸಚಿವರು ವಿಷೇಶವಾಗಿ ವಾಯು ಕ್ಷೇತ್ರದಲ್ಲಿ ಸಹಯೋಗದ ಜೊತೆಗೆ ಹೊಸ ಅನ್ವೇಷಣೆ ಬಗ್ಗೆ ಚರ್ಚಿಸಿದರು.
ನವದೆಹಲಿಗೆ ತೆರಳುವ ಮೊದಲು, ರಕ್ಷಣಾ ಸಚಿವರು ವಿಯೆಂಟಿಯಾನ್ ನ ಐತಿಹಾಸಿಕ ವಾಟ್ ಸಿಸಾಕೇತ್ ದೇವಸ್ಥಾನಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ಸಿಸಾಕೇತ್ ದೇವಾಲಯದ ಮಠಾಧೀಶ ಮಹಾವೇತ್ ಚಿತ್ತಾಕರೊ ಅವರಿಂದ ಆಶೀರ್ವಾದ ಪಡೆದರು.
ವಿಯೆಂಟಿಯಾನ್ ನಲ್ಲಿದ್ದಾಗ, ರಕ್ಷಣಾ ಸಚಿವರು 11 ನೇ ಆಸಿಯಾನ್ ರಕ್ಷಣಾ ಸಚಿವರ ಸಭೆ-ಪ್ಲಸ್ (ADMM-Plus) ನಲ್ಲಿ ಭಾಗವಹಿಸಿದ್ದರು ಮತ್ತು ಮಲೇಷ್ಯಾ, ಲಾವೋ ಪಿಡಿಆರ್, ಚೀನಾ, ಯುನೈಟೆಡ್ ಸ್ಟೇಟ್ಸ್, ನ್ಯೂಜಿಲೆಂಡ್, ಕೊರಿಯಾ ಗಣರಾಜ್ಯ, ಆಸ್ಟ್ರೇಲಿಯಾ, ಜಪಾನ್ ಮತ್ತು ಫಿಲಿಪೈನ್ಸ್ ನ ಸಹವರ್ತಿಗಳೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಿದರು, ಪ್ರಾದೇಶಿಕ ಭದ್ರತೆ ಮತ್ತು ಸಹಯೋಗಕ್ಕೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.