ಲಕ್ಷ್ಮೇಶ್ವರ: ಲಕ್ಷ್ಮೇಶ್ವರ – ಶಿರಹಟ್ಟಿ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಬಗ್ಗೆ ನಿಮ್ಮ ಸಿಟಿ ಎಕ್ಸ್‌ಪ್ರೆಸ್ ನ್ಯೂಸ್, ಸುದ್ದಿ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ, ಎತ್ತೆಚ್ಚ ತಾಲೂಕು ಅಧಿಕಾರಿವರ್ಗ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿದೆ.
“ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳು ದಂಧೆ: ‘ಮಾಮೂಲಿ’ ಆಸೆಗೆ ಕಣ್ಮುಚ್ಚಿ ಕುಳಿತರಾ ಅಧಿಕಾರಿಗಳು…!? ಎಂಬ ಶಿರ್ಷಿಕೆಯಡಿ ಇಂದು (ಮಾ.26) ಬೆಳಿಗ್ಗೆ ವಿಸ್ಕೃತ ಸುದ್ದಿ ಬಿತ್ತರಿಸಿತ್ತು. ಪರಿಣಾಮ ಎಚ್ಚೆತ್ತ ಅಧಿಕಾರಿಗಳ ತಂಡ ತಹಶಿಲ್ದಾರ ವಾಸುದೇವ ಸ್ವಾಮಿ ನೇತೃತ್ವದಲ್ಲಿ, ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಕೃಷ್ಣಪ್ಪ ಧರ್ಮರ, ಪಿಎಸ್ಐ ನಾಗರಾಜ ಗಡಾದ ಸೇರಿದಂತೆ ಇನ್ನಿತರ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ, ಹಲವು ಗ್ರಾಮಗಳ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿ,ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಪಾರ ಮೌಲ್ಯದ ಮರಳನ್ನ ವಶಕ್ಕೆ ಪಡೆದಿದ್ದಾರೆ.
ಪುಟಗಾಂವ್ ಬಡ್ನಿ, ಹು1ಲ್ಲೂರು, ಬಟ್ಟೂರು ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಹಾಗೂ ಮನೆಗಳ ಮುಂದೆ ಸಂಗ್ರಹಿಸಿಟ್ಟಿದ್ದ ಮರಳು ದಾಸ್ತಾನು ಮೇಲೆ ಅಧಿಕಾರಿಗಳು ದಾಳಿ ನಡೆಸಿ,ಲಕ್ಷಾಂತರ ಮೌಲ್ಯದ ಮರಳನ್ನ ವಶಪಡಿಸಿಕೊಂಡು ಮರಳು ಲೂಟಿಕೋರರಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಹಳ್ಳದ ಜಾಡು ಹಿಡಿದು ಹೋದ ಅಧಿಕಾರಿಗಳು ಲ,ಅಲ್ಲಿನ ಮರಳುಗಾರಿಕೆ ಕಂಡು ಶಾಕ್ ಆಗಿದ್ದಾರೆ.ಈಗಾಗಲೇ ಶಂಕಿತ ಮರಳು ಲೂಟಿಕೋರರ ಮೇಲೆ ದೂರು ದಾಖಲಿಸಿ, ಅಕ್ರಮ ಮರಳುಗಳ್ಳರಿಗೆ ಬಿಸಿ ಮುಟ್ಟಿಸಿದ್ದಾರೆ.
ಆದರೆ ಗ್ರಾಮದೊಳಗೆ ಅಧಿಕಾರಿಗಳ ವಾಹನ ಎಂಟ್ರಿಯಾದ ತಕ್ಷಣ, ಎದ್ನೋ ಬಿದ್ನೋ ಅಂತ, ಮರಳುಗಳ್ಳರು ಮರಳು ಅಡ್ಡೆಗಳಿಂದ ತಮ್ಮ ವಾಹನ ಸಮೇತ ಎಸ್ಕೇಪ್ ಆಗುವದು ಸಾಮಾನ್ಯವಾಗಿದೆ. ಹೀಗಿದ್ದೂ, ಅಧಿಕಾರಿಗಳ ಇಂದಿನ ದಾಳಿ ಸಾರ್ವಜನಿಕರಲ್ಲಿ ಕೊಂಚ ಸಮಾಧಾನ ತಂದಿದ್ದು, ಲೂಟಿಕೋರರಿಗೆ ಅಲ್ಪಮಟ್ಟಿನ ಬಿಸಿ ತಟ್ಟಿದೆ. ಆದರೆ ಪುನಃ ಅದೇ ಚಾಳಿ ಮುಂದುವರೆಸುವ ಮರಳುಗಳ್ಳರು, ತಮ್ಮ ಅಕ್ರಮ ಚಟುವಟಿಕೆ ಮೂಲಕ, ಅಧಿಕಾರಿವರ್ಗಕ್ಕೆ ಚಳ್ಳೆ ಹಣ್ಣು ತಿನ್ನಿಸುವದರಲ್ಲಿ ಯಾವ ಸಂಶಯವಿಲ್ಲ.
ಹೀಗಾಗಿ ಅಧಿಕಾರಿಗಳ ಈ ದಾಳಿ, ನೆಪಮಾತ್ರಕ್ಕೆ ಆಗುವ ಬದಲು, ಸಂಪೂರ್ಣ ಅಕ್ರಮ ಮರಳು ದಂಧೆಗೆ ಬ್ರೆಕ್ ಹಾಕಬೇಕಾಗಿದೆ. ಅದೇನೆ ಇರಲಿ, ನಿಮ್ಮ ಸಿಟಿ ಎಕ್ಸಪ್ರೆಸ್ ನ್ಯೂಸ್ ಸುದ್ದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ, ಅಧಿಕಾರಿಗಳು ಎಚ್ಚೆತ್ತು ದಾಳಿ ನಡೆಸುವ ಹಾಗೆ ಇಂಪ್ಯಾಕ್ಟ್ ಆಗಿದ್ದಂತು ಸುಳ್ಳಲ್ಲ.
*ಕೋಟ್*..
“ಈಗಾಗಲೇ ಅನೇಕ ಮರಳು ಸಾಗಾಟ ಮಾಡಿದ ಲಾರಿಗಳನ್ನು ಸೀಜ್ ಮಾಡಿದ್ದೇವೆ. ಮತ್ತೆ ಅಕ್ರಮ ಮರಳು ದಂಧೆ ಅಡ್ಡೆ ಮೇಲೆ ತಹಶಿಲ್ದಾರರ ನೇತೃತ್ವದಲ್ಲಿ ದಾಳಿ ಮಾಡಿ ಎಚ್ಚರಿಕೆ ನೀಡಿದ್ದು, ಮುಂದೆ ಅಕ್ರಮ ಮರಳು ದಂಧೆಕೊರರು ಸಿಕ್ಕಲ್ಲಿ ಖಂಡಿತವಾಗಿಯೂ ಕಾನೂನು ಕ್ರಮ ಜರಗಿಸುವ ಕೆಲಸ ಮಾಡುತ್ತೇವೆ.”
ನಾಗರಾಜ ಗಡಾದ
ಪಿಎಸ್ಐ. ಲಕ್ಷ್ಮೇಶ್ವರ ಪೊಲೀಸ್ ಠಾಣೆ.