ಗದಗ: ಗದಗದ ಪ್ರಸಿದ್ಧ ವೀರೇಶ್ವರ ಪುಣ್ಯಾಶ್ರಮದಲ್ಲಿ ಜೂನ್ 12ರಿಂದ 16ರ ತನಕ ಲಿಂ. ಪಂಡಿತ ಪಂಚಾಕ್ಷರಿ ಗವಾಯಿಗಳ 81ನೇ ಪುಣ್ಯಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯಸ್ಮರಣೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಲೆ ಆಧಾರಿತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪೀಠಾಧಿಪತಿ ಕಲ್ಲಯ್ಯಜ್ಜನವರು ತಿಳಿಸಿದ್ದಾರೆ.
ಪೀಠಾಧಿಪತಿ ಕಲ್ಲಯ್ಯಜ್ಜನವರು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಮಹೋತ್ಸವದ ಸಂದರ್ಭದಲ್ಲಿ ಕೀರ್ತನ, ಸಂಗೀತ, ಉಪನ್ಯಾಸ, ನಾಟಕಗಳು ಹಾಗೂ ಅಂಧರ ಗೋಷ್ಠಿಗಳು ದಿನದಿಂದ ದಿನಕ್ಕೂ ಭಕ್ತರನ್ನು ಆಕರ್ಷಿಸಲಿವೆ ಎಂದು ಅವರು ತಿಳಿಸಿದರು.
ಪ್ರತಿದಿನದ ವಿಶೇಷ ಕಾರ್ಯಕ್ರಮಗಳು ಹೀಗಿವೆ:
🔹 ಜೂ. 12 (ಬುಧವಾರ)
ಸಂಜೆ 6:00 ಗಂಟೆಗೆ
ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಧರ್ಮಸಭೆ ಮತ್ತು ಕೀರ್ತನ ಸಮ್ಮೇಳನ.
🔹 ಜೂ. 13 (ಗುರುವಾರ)
ಸಂಜೆ 6:00 ಗಂಟೆಗೆ
ಶಿರಹಟ್ಟಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಶೀರ್ವಾದದಲ್ಲಿ ಕೀರ್ತನ ಸಮ್ಮೇಳನ ಹಾಗೂ ಅಂಧರಗೋಷ್ಠಿ.
🔹 ಜೂ. 14 (ಶುಕ್ರವಾರ)
ಸಂಜೆ 6:00 ಗಂಟೆಗೆ
ಮುಂಡರಗಿ ಮಠದ ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳವರ ಸಾನ್ನಿಧ್ಯದಲ್ಲಿ ಸಂಗೀತ ಹಾಗೂ ಕೀರ್ತನ ಕಾರ್ಯಕ್ರಮ.
🔹 ಜೂ. 15 (ಶನಿವಾರ)
ಸಂಜೆ 6:00 ಗಂಟೆಗೆ
ಡಂಬಳ-ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿಯವರ ನೇತೃತ್ವದಲ್ಲಿ ಶಿವಾನುಭವಗೋಷ್ಠಿ.
🔹 ಜೂ. 16 (ಭಾನುವಾರ)
ಬೆಳಿಗ್ಗೆ 8:00 ಗಂಟೆಗೆ
ಲಿಂ. ಪಂಡಿತ ಪಂಚಾಕ್ಷರಿ ಗವಾಯಿ ಹಾಗೂ ಪದ್ಮಭೂಷಣ ಪಂ. ಪುಟ್ಟರಾಜ ಕವಿ ಗವಾಯಿಗಳ ಭಾವಚಿತ್ರ ಮೆರವಣಿಗೆ.
ಸಂಜೆ 6:00 ಗಂಟೆಗೆ
ಉಭಯ ಗುರುಗಳ ಮಹಾರಥೋತ್ಸವ.
ಸಂಜೆ 6:30 ಗಂಟೆಗೆ
ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಧರ್ಮೋತ್ತೇಜಕ ಸಭೆ.
ಇದಾದ ಬಳಿಕ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳಿಗೆ –
ಪದ್ಮಭೂಷಣ ಪಂ. ಪುಟ್ಟರಾಜ ಪ್ರಶಸ್ತಿ, ಕುಮಾರಶ್ರೀ ಪ್ರಶಸ್ತಿ, ಪ್ರದಾನ ಮಾಡಲಾಗುತ್ತದೆ.
ರಾತ್ರಿ ಅಂತ್ಯದಲ್ಲಿ ಭಾವಸಂಜೆ ಸಂಗೀತ ಕಾರ್ಯಕ್ರಮದಿಂದ ಅಹೋರಾತ್ರಿ ಗಾಯನ ಸಂಭ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕರು ವಿವರಿಸಿದರು.ಈ ಪತ್ರಿಕಾ ಗೋಷ್ಠಿಯಲ್ಲಿ ಪುಣ್ಯಾಶ್ರಮದ ಟ್ರಸ್ಟ್ ಕಮಿಟಿಯ ಎಲ್ಲ ಸದಸ್ಯರು ಪಾಲ್ಗೊಂಡೊದ್ದರು.
ಆಪ್ತತೆ, ಸಂಸ್ಕೃತಿಯ ಭಾವನೆ ಹಾಗೂ ಗುರುಸ್ಮರಣೆಯ ಔದಾರ್ಯದಿಂದ ಕೂಡಿರುವ ಈ ಜಾತ್ರಾ ಮಹೋತ್ಸವದಲ್ಲಿ ಭಕ್ತಜನರು ಮತ್ತು ಕಲೆಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜತ್ರಾ ಸಮಿತಿಯವರು ಕರೆ ನೀಡಿದ್ದಾರೆ.