ಹೈದರಾಬಾದ್: ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಅವರನ್ನ ಬಂಧಿಸಲಾಗಿದೆ. ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಟಾಸ್ಕ ಪೋರ್ಸ್ ನಟ ಅಲ್ಲು ಅರ್ಜುನ್ ಅವರನ್ನ ಅರೆಸ್ಟ್ ಮಾಡಿದ್ದಾರೆ. ಹೈದರಾಬಾದ್ ನ ಚಿಕಡಪಲ್ಲಿಯ ಪೊಲೀಸ್ ಠಾಣೆಗೆ ಅವರನ್ನ ಕರೆದೊಯ್ಯಲಾಗಿದೆ. ಮನೆಯಲ್ಲಿ ಕಾಫಿ ಕುಡಿಯುತ್ತಾ ನಿಂತಾಗ ಪೊಲೀಸರು ಅವರನ್ನ ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದಾರೆ.
ಪುಷ್ಪ-2 ಚಿತ್ರದ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಥಿಯೇಟರ್ ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ರೇವತಿ ಎಂ ಮಹಿಳೆ ಸಾವನ್ನಪ್ಪಿ, ಆಕೆಯ ಮಗ ಗಂಭೀರವಾಗಿ ಗಾಯಗೊಂಡಿದ್ದರು.
ಬೆಡ್ ರೂಂ ಗೆ ನುಗ್ಗಿ ಅರೆಸ್ಟ್ ಮಾಡಿದ ಪೊಲೀಸರು!
ಹೌದು, ತನ್ನನ್ನು ಬಂಧಿಸಲು ಮನೆಗೆ ಬಂದ ಹೈದರಾಬಾದ್ ನ ಚಿಕಡಪಲ್ಲಿ ಪೊಲೀಸರ ವಿರುದ್ಧ ಅಲ್ಲು ಅರ್ಜುನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಡ್ರೆಸ್ ಬದಲಾಯಿಸಲೂ ಪೊಲೀಸರು ಅವಕಾಶ ನಿಡಿಲ್ಲ. ಉಪಹಾರ ಸೇವಿಸಿ ಬರ್ತೀನಿ ಅಂತ ಕೇಳಿಕೊಂಡರೂ, ಪೊಲೀಸರ ಕೆಳದೇ, ನೇರವಾಗಿ ಅವರ ಬೆಡ್ ರೂಮ್ ಗೆ ನುಗ್ಗಿ ಅವರನ್ನ ಬಂಧಿಸಿದ್ದಾರೆ. ಇನ್ನು ಮಹಿಳೆ ಸಾವನ್ನಪ್ಪಿದ ಪ್ರಕರಣ ಸಂಬಂಧ ಪೊಲೀಸರು, ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣ ಸಾಬೀತಾದರೆ, ಅಲ್ಲು ಅರ್ಜುನ್ ಸುಮಾರು 10 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕಾನೂನು ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ. ಥಿಯೇಟರ್ ಮಾಲೀಕನನ್ನ ಈಗಾಗಲೇ ಬಂಧಿಸಿದ್ದಾರೆ.