ಸದ್ಯ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಚಿತ್ರ ನಿನ್ನೆಯಷ್ಟೆ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಹಲ್ ಚಲ್ ಎಬ್ಬಿಸಿದೆ. ಅದರಲ್ಲೂ ಈ ಮೊದಲು ದಾಖಲೆ ಮೊತ್ತದಲ್ಲಿ ಕಲೆಕ್ಷನ್ ಮಾಡಿದ್ದ RRR ಚಿತ್ರದ ದಾಖಲೆಯನ್ನೂ ಸಹ ಇದು ಮುರಿದಿದೆಯಂತೆ. ಮೊದಲ ದಿನ ಭಾರತದಲ್ಲಿ 175.1 ಕೋಟಿ ಸಂಗ್ರಹಿಸಿದೆ ಎಂದು ವರದಿಯಾಗಿದೆ. ಆ ಮೂಲಕ ರಾಜಮೌಳಿ ಅವರ RRR ದಾಖಲೆಯನ್ನು ಮುರಿದಿದೆ. ಪುಷ್ಪ 2 ತೆಲುಗಿನಲ್ಲಿ 95 ಕೋಟಿ ಹಾಗೂ ಹಿಂದಿಯಲ್ಲಿ 67 ಕೋಟಿ ಕಲೆಕ್ಷನ್ ಮಾಡಿದ್ದರೆ, ವಿಶ್ವದಾದ್ಯಂತ 250 ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದೆ. 2022ರಲ್ಲಿ ಬಿಡುಗಡೆಯಾದ RRR ಚಿತ್ರವು ಭಾರತದಲ್ಲಿ ಮೊದಲ ದಿನ 133 ಕೋಟಿ ಕಲೆಕ್ಷನ್ ಮಾಡಿತ್ತು.ಇದೀಗ ಆ ದಾಖಲೆಯನ್ನ ಪುಷ್ಪ-2 ಚಿತ್ರ ಬ್ರೆಕ್ ಮಾಡಿದೆ ಎನ್ನಲಾಗಿದೆ.
RRR ಚಿತ್ರದ ದಾಖಲೆ ಮುರಿದ ಪುಷ್ಪ-2 ಚಿತ್ರ!

ಗದಗ ಹಾಗೂ ಸುತ್ತಲೂ ಇರುವ ಜಿಲ್ಲೆಗಳ ಪ್ರಮುಖ ಸುದ್ದಿಗಳು ಇದ್ದಲ್ಲಿ ಪ್ರಸಾರ ಮಾಡಿದರೆ ಸಂತೋಷವಾದೀತು.