ಗದಗ, ಏಪ್ರಿಲ್ 8: 2025ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ ಇಂದು ಪ್ರಕಟವಾಗಿದ್ದು, ಗದಗ ಜಿಲ್ಲೆಯು ಶ್ರೇಷ್ಠ ಶೈಕ್ಷಣಿಕ ಸಾಧನೆಯ ಮೂಲಕ ಮತ್ತೊಮ್ಮೆ ರಾಜ್ಯದ ನೋಟ ಸೆಳೆಯುವಲ್ಲಿ ಯಶಸ್ವಿಯಾಗಿದೆ. ವಿಶೇಷವೆಂದರೆ, ಈ ಬಾರಿ ವಿವಿಧ ವಿಭಾಗಗಳಲ್ಲಿ ಮಹಿಳೇಯರೇ ಮಿಂಚಿದ್ದಾರೆ.
ವರದಿ:ಮಹಲಿಂಗೇಶ್ ಹಿರೇಮಠ.
ವಿಭಾಗದ ಪ್ರಕಾರ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನ ಪಡೆದ ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮದಿಂದ ಜಿಲ್ಲೆಗೆ ಗೌರವ ತಂದಿದ್ದಾರೆ.
ಕಲಾ ವಿಭಾಗದ ಕಿರೀಟ ವಿಜಯಲಕ್ಷ್ಮಿಗೆ!
ಮುಂಡರಗಿಯ ಶ್ರೀ ಜ. ಅನ್ನದಾನೀಶ್ವರ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಗೊಂಡಬಾಳ 587 ಅಂಕಗಳೊಂದಿಗೆ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಗಜೇಂದ್ರಗಡದ ಎಸ್.ಎಮ್. ಭೂಸರೆಡ್ಡಿ ಕಾಲೇಜಿನ ಸೌಂದರ್ಯ ನಿಂಬಾಲಗುದಿ 578 ಅಂಕ ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಮೇಲಿನ ಪೋಸ್ಟ್ ನ್ನ ಟಚ್ ಮಾಡಿದರೆ, ಕಾಲೇಜ್ ನ ಸಂಪೂರ್ಣ ಮಾಹಿತಿ ಒದಗುತ್ತದೆ.
ಲಕ್ಷ್ಮೇಶ್ವರದ ಎಸ್‌ಎಮ್‌ಜೆವಿ ಕಾಲೇಜಿನ ಅಫ್ ಸಾನ್ ಬೇಗಂ ನಧಾಪ್ 576 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ನವತಿಕದ ಪ್ರಭುತ್ವ
ಗದಗದ ಜೆಟಿ ಕಾಲೇಜಿನ ನವತಿಕ ಹಜಾರಿ 592 ಅಂಕಗಳೊಂದಿಗೆ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಬೆಟಗೇರಿಯ ಎಎಸ್‌ಎಸ್ ಕಾಲೇಜಿನ ವಿಜಯರಾಜ ಸಿದ್ದಲಿಂಗ 590 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದು ಮಿಂಚಿದ್ದಾರೆ.
ಗಜೇಂದ್ರಗಡದ ಎಸ್‌ಎ ಪ.ಪೂ. ಕಾಲೇಜಿನ ನಮ್ರತಾ ಪಾಟೀಲ್ 588 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲೂ ವಿಜೃಂಭಣೆಯ ಸಾಧನೆ
ಗದಗದ ಜೆಟಿ ಕಾಲೇಜಿನ ಕಾವ್ಯ ಹಿರೇಗೌಡ್ರ ವಿಜ್ಞಾನ ವಿಭಾಗದಲ್ಲಿ 590 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದು, ವಿಜ್ಞಾನ ಪ್ರಿಯರಿಗೆ ಪ್ರೇರಣೆಯಾಗಿದೆ.
ನರೇಗಲ್‌ನ ಎಸ್‌ಎ ಕಾಲೇಜಿನ ಕುಸುಮಾ ಪಟ್ಟಣಶೆಟ್ಟಿ 582 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರೆ, ಲಕ್ಷ್ಮೇಶ್ವರದ ಸರ್ಕಾರಿ ಪ.ಪೂ. ಕಾಲೇಜಿನ ಲಕ್ಷ್ಮೀ ಜಗಳೂರು 580 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಈ ಶ್ರೇಷ್ಠ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳಿಗೆ ಕಾಲೇಜು ಸಿಬ್ಬಂದಿ ವರ್ಗ ಹಾಗೂ ಸಂಸ್ಥೆಗಳ ಆಡಳಿತ ಮಂಡಳಿ ಹಾರ್ದಿಕ ಅಭಿನಂದನೆ ಸಲ್ಲಿಸಿದೆ.