ಲಕ್ಷ್ಮೇಶ್ವರ: ಅಪರಾಧ ತಡೆಯಲು ಸಾರ್ವಜನಿಕರ ಸಹಕಾರ ಅವಶ್ಯಕತೆ ಇದೆ ಪೊಲಿಸರೊಂದಿಗೆ ಸಾರ್ವಜನಿಕರು ಕೈಜೋಡಿಸಿದಾಗ ಅಪರಾಧ ಗಳನ್ನು ತಡೆಗಟ್ಟಬಹುದು ಎಂದು ಅಪರಾಧ ವಿಭಾಗದ ಪಿ ಎಸ್ ಐ ಟಿ. ಕೆ ರಾಠೋಡ ಹೇಳಿದರು.
ಅವರು ಪಟ್ಟಣದ ಬಸ್ ನಿಲ್ದಾಣ ಎದುರು ಆಟೋ ರಿಕ್ಷಾ ಚಾಲಕರಿಗೆ ಅಪರಾಧ ತಡೆ ಮಾಸಾಚರಣಿ ಪ್ರಯುಕ್ತ ಇಲಾಖೆಯಿಂದ ಜಾಗೃತಿ ಮೂಡಿಸುವ ಬಿತ್ತಿಪತ್ರ ವಿತರಣೆ ಮಾಡಿ ಮಾತನಾಡುತ್ತ,
ವರದಿ : ಪರಮೇಶ ಎಸ್ ಲಮಾಣಿ.
ಕೇವಲ ಪೊಲಿಸರಿಂದ ಅಪರಾಧಗಳ ತಡೆ ಸಾಧ್ಯವಿಲ್ಲ, ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ, ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ ಮಾಹೆಯನ್ನು ಅಪರಾಧ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತದೆ.
ಸಾರ್ವಜನಿಕರು
ಯಾವುದೇ ಅಪರಾಧವನ್ನು ಕಂಡ ಸಂದರ್ಭದಲ್ಲಿ ಧೈರ್ಯವಾಗಿ ಮುಂದೆ ಬಂದು ಸಾಕ್ಷಿ ಹೇಳಬೇಕು. ಒಂದು ವೇಳೆ ಹೀಗಾಗದಿದ್ದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ತಪ್ಪಿತಸ್ಥರು ತಪ್ಪಿಸಿಕೊಂಡು ಮತ್ತೆ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಲಿದ್ದಾರೆ ಎಂದು ಹೇಳಿದರಲ್ಲದೇ,
ವಾಹನಗಳಿಗೆ ಲಾಕ್ ಮಾಡದೆ ಬೇರೆ ಕಡೆ ಕೆಲಸಕ್ಕೆ ಹೋಗಬಾರದು, ಮೊಬೈಲ ಇಂಟರನೆಟನಲ್ಲಿ ಬರುವ ಬಹುಮಾನದ ಆಮಿಷಗಳಿಗೆ ಪ್ರತಿಕ್ರಿಯೆ ಮಾಡುವಾಗ ಎಚ್ಚರವಹಿಸಬೇಕು, ಬೈಕಹಾಗೂ ಸ್ಕೂಟಿಯಲ್ಲಿ ಹಣ ವಿದ್ದಾಗ ಕಳ್ಳರಿಂದ ಎಚ್ಚರಿಕೆ ಹಣದ ಬ್ಯಾಗ ದೊಚುವವರ ಬಗ್ಗೆ ಎಚ್ಚರವಿರಬೇಕು ಮೊಬೈಲ ಎಚ್ಚರ ವಿರಬೇಕು ರಸ್ತೆಯಲ್ಲಿ ಅಪಘಾತವಾದಾಗ ಸಾರ್ವಜನಿಕರು ವಿಡಿಯೋ ಮಾಡುವ ಬದಲು ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು
ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆ ಎ ಎಸ್ ಐ ವೈ ಸಿ ದೊಡ್ಡಮನಿ, ಸಿಬ್ಬಂದಿಗಳಾದ ಅಪ್ಪಣ್ಣ ರಾಠೋಡ, ಪಿ ಎಮ್ ತೋರಾಥ, ವೀರನಗೌಡ ಪಾಟೀಲ ಆಟೋ ರಿಕ್ಷಾ ಮಾಲ ಕರು ಚಾಲಕರು ಇದ್ದರು.
