Home » News » ರಾಷ್ಟ್ರಭಕ್ತ, ತತ್ವಜ್ಞಾನಿ, ಪತ್ರಕರ್ತ, ಮೇಧಾವಿ ಲೇಖಕರಾಗಿ ಕೆಲಸ ಮಾಡಿದ ಪಂ. ದೀನದಯಾಳ್ ಉಪಾಧ್ಯಾಯ….!

ರಾಷ್ಟ್ರಭಕ್ತ, ತತ್ವಜ್ಞಾನಿ, ಪತ್ರಕರ್ತ, ಮೇಧಾವಿ ಲೇಖಕರಾಗಿ ಕೆಲಸ ಮಾಡಿದ ಪಂ. ದೀನದಯಾಳ್ ಉಪಾಧ್ಯಾಯ….!

by CityXPress
0 comments

ಲಕ್ಷ್ಮೇಶ್ವರ : ಅಪ್ಪಟ ದೇಶಭಕ್ತ, ಚಿಂತಕ, ಜನಸಂಘದ ನಾಯಕ ಪಂ. ದೀನದಯಾಳ್ ಉಪಾಧ್ಯಾಯರ ಸಮರ್ಪಣಾ ದಿನದ ಅಂಗವಾಗಿ ಪಟ್ಟಣದಲ್ಲಿ ಅವರ ಭಾವಚಿತ್ರಕ್ಕೆ ಶಾಸಕ ಡಾ. ಚಂದ್ರು ಲಮಾಣಿ ನೇತೃತ್ವದಲ್ಲಿ ಪಕ್ಷದ ಮುಖಂಡರು ಪುಷ್ಪ ನಮನ ಸಲ್ಲಿಸಿದರು.

ವರದಿ: ಪರಮೇಶ ಎಸ್ ಲಮಾಣಿ.

ಈ ವೇಳೆ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ದೇಶದ ಹಿತ ಚಿಂತಕರು, ತ್ಯಾಗ ಜೀವಿಗಳು, ಜನಸಂಘದ ನಾಯಕರಾಗಿದ್ದ ಇವರು ಭಾಜಪ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ್ದಾರೆ. ಅವರ ಸಂಘಟನಾ ಶಕ್ತಿ, ವ್ಯಕ್ತಿತ್ವ, ನಿಷ್ಠೆ ಮತ್ತು ಪ್ರಾಮಾಣಿಕ ಪ್ರಯತ್ನದಿಂದಾಗಿ ಇಂದು ಬಿಜೆಪಿ ಹೆಮ್ಮರವಾಗಿದೆ.

ರಾಷ್ಟ್ರಭಕ್ತ, ತತ್ವಜ್ಞಾನಿ, ಪತ್ರಕರ್ತ, ಮೇಧಾವಿ ಲೇಖಕರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ರಾಷ್ಟ್ರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಅವರ ಶಿಸ್ತಿನ ಜೀವನ, ದೇಶಪ್ರೇಮ, ತತ್ವ-ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

banner

ಈ ವೇಳೆ ಶಿರಹಟ್ಟಿ ಮಂಡಲದ ಪ್ರಕಾರ್ಯದರ್ಶಿ ಗಂಗಾಧರ
ಮೆಣಸಿನಕಾಯಿ, ನಿಂಗಪ್ಪ ಬನ್ನಿ, ಎಂ.ಆರ್. ಪಾಟೀಲ, ಅನಿಲ ಮುಳಗುಂದ, ಮಹಾದೇವಪ್ಪ ಅಣ್ಣಿಗೇರಿ, ವಿಜಯ ಹತ್ತಿಕಾಳ, ರುದ್ರಪ್ಪ ಉಮಚಗಿ, ಪ್ರವೀಣ ಬೋಮಲೆ, ದುಂಡೇಶ ಕೊಟಗಿ, ಹಾಲಪ್ಪ ಸೂರಣಗಿ, ಬಸವರಾಜ ಕಲ್ಲೂರ, ಸಂಗಮೇಶ ಬೆಳವಲಕೊಪ್ಪ, ವಿಜಯ ಕುಂಬಾರ, ವಿಜಯ ಬೂದಿಹಾಳ, ಸಂತೋಷ ಜಾವೂರ, ಉಳವೇಶಗೌಡ ಪಾಟೀಲ, ಸತೀಶ ಕಾಡಣ್ಣವರ, ವಿಶಾಲ ಬಟಗುರ್ಕಿ ಸೇರಿ ಬಿಜೆಪಿ ಕಾರ್ಯಕರ್ತರು ಇದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb