ಲಕ್ಷ್ಮೇಶ್ವರ: ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಸಲುವಾಗಿ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಶಾಲಾ ಕೊಠಡಿ ಮತ್ತು ಸೌಚಾಲಯಗಳಿಗೆ ಅನುದಾನ ನೀಡಲಾಗುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಹೆಣ್ಣು ಮಕ್ಕಳು ಇರುವಂತಹಾ ಶಾಲೆಗಳು, ಕಾಲೇಜುಗಳು ಮತ್ತು ವಸತಿ ಶಾಲೆಗಳಿಗೆ ಅಗತ್ಯಕ್ಕೆ ತಕ್ಕಂತೆ ಶೌಚಾಲಯಗಳನ್ನು ಒದಗಿಸಲು ಬದ್ದನಾಗಿದ್ದು ಬೇಕಾಗಿರುವ ಅನುದಾನ ನೀಡುತ್ತಿದ್ದೇನೆ. ಶಾಲೆಯ ಮುಖ್ಯಸ್ಥರು ಮಕ್ಕಳ ಸಂಖ್ಯೆಗೆ ತಕ್ಕಂತೆ ಶೌಚಾಲಯಗಳನ್ನು ನಿರ್ಮಾಣ ಮಾಡಿಸಿಕೊಳ್ಳಬೇಕು ಇದರ ಜತೆಗೆ ಎಲ್ಲಾ ರೀತಿಯ
ಮೂಲಭೂತ ಸೌಕರ್ಯ ಒದಗಿಸಲು ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಪಟ್ಟಣದ ಎ.ಪಿ.ಎಮ್.ಸಿ ಯಾರ್ಡಿನಲ್ಲಿರುವ ದಿ. ಶ್ರೀ ತೋಟಪ್ಪ ಬಸಪ್ಪ ಮಾನ್ವಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿಡಬ್ಲೂಡಿ ಅನುದಾನ ಮತ್ತು ಶಾಸಕರ ಅನುದಾನದಲ್ಲಿ ಶೌಚಾಲಯ ಮತ್ತು ಪಿವರ್ಸ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಶಿರಹಟ್ಟಿ ಮತಕ್ಷೇತ್ರದ ವಿವಿಧ ಶಾಲೆಗಳಲ್ಲಿ ಹಂತ ಹಂತವಾಗಿ ಶೌಚಾಲಯ ನಿರ್ಮಾಣ ಮಾಡಲು ಅನುದಾನ ನೀಡುತ್ತಿದ್ದೆವೆ. ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶಾಲೆಯಲ್ಲಿ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಹಾಗೂ ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ನಾವು ಬದ್ಧರಾಗಿದ್ದು, ಸರ್ಕಾರಿ ಶಾಲೆಗಳನ್ನು ಉಳಿಸಲು ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ ಎಂದರು .
ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷೆ ಸಾವಿತ್ರಿ ಕುರಿ,ಮುಖ್ಯಶಿಕ್ಷಕ ಎಸ್ ಎನ್ ಕ್ಷತ್ರಿಯ,ಫಕ್ಕೀರೇಶ ರಟ್ಟೀಹಳ್ಳಿ, ಗಂಗಾಧರ ಮೆಣಸಿನಕಾಯಿ, ಮಂಜುನಾಥ ಹೊಗೆಸೊಪ್ಪಿನ, ಶಕ್ತಿ ಕತ್ತಿ, ಪ್ರವೀಣ ಬೋಮಲೆ, ಭೀಮಣ್ಣ ಯಂಗಾಡಿ, ಬಸವರಾಜ ಚಕ್ರಸಾಲಿ, ವಿಶಾಲ ಬಟಗುರ್ಕಿ,ವೀರಣ್ಣ ಅಕ್ಕೂರ ಪ್ರಕಾಶ ಮಾದನೂರ,ಸಂತೋಷ ಜಾವೂರ,ಬಸವರಾಜ ಕಲ್ಲೂರ, ಸೇರಿದಂತೆ ಶಾಲೆಯ ಶಿಕ್ಷಕರು ಸಿಬ್ಬಂದಿಗಳು ಇದ್ದರು.
