ಮುಂಡರಗಿ: ಕೇಂದ್ರದ ಗೃಹ ಸಚಿವ ಅಮಿತ್ ಶಾ ಡಾ.ಬಿ.ಆರ್.ಅಂಬೇಡ್ಕರ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿಯೂ ಪ್ರತಿಭಟನೆ ನಡೆಸಲಾಯಿತು.
ಅಂಬೇಡ್ಕರ್ ಅಭಿಮಾನಿ ಬಳಗದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಕೊಪ್ಪಳ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಗದಗ ಮುಂಡರಗಿ ರಸ್ತೆ ತಡೆದು ಅಮಿತ್ ಷಾ ವಿರುದ್ಧ ಘೋಷಣೆ ಕೂಗಿದರು. ಅಮಿತ್ ಷಾ ಅವರನ್ನ ತಕ್ಷಣ ಕೇಂದ್ರ ಸಂಪುಟದಿಂದ ಕೈ ಬಿಡಬೇಕು ಹಾಗೂ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಅಮಿತ್ ಷಾ ಹೇಳಿಕೆ ಅಂಬೇಡ್ಕರ್ ಅವರಿಗೆ ಅಪಮಾನ ಎಸಗುವ ಹೇಳಿಕೆಯಾಗಿದ್ದು, ಸಂವಿಧಾನದ ಅಡಿಯಲ್ಲಿ ಮೀಸಲಾತಿ ಪಡೆದು ಬದುಕುತ್ತಿರುವ ಅಮಿತ್ ಶಾ ಅವರನ್ನು ಈ ದೇಶದ ಪೌರತ್ವ ರದ್ದು ಮಾಡಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ಇದೇ ವೇಳೆ, ಅಮಿತ್ ಷಾ ಭಾವಚಿತ್ರಕ್ಕೆ ಚಪ್ಪಲಿ ಹೇಟು ಕೊಟ್ಟು, ಬೆಂಕಿ ಹಚ್ಚಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಂತರ ರ್ಯಾಲಿ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಲಕ್ಷ್ಮಣ್ ತಗಡಿನಮನಿ, ಚಂದ್ರಶೇಖರ್ ಪೂಜಾರ, ಸೋಮಣ್ಣ ಹೈತಾಪೂರ, ನಿಂಗರಾಜ ಹಾಲಿನವರ್, ಅಡಿವೆಪ್ಪ ಚಲವಾದಿ ಸೇರಿದಂತೆ ಅನೇಕರು ಇದ್ದರು.