ಲಕ್ಷ್ಮೇಶ್ವರ: ನಮನ ಟ್ರಸ್ಟ್ ,ಗದಗ ಹಾಗೂ ಶ್ರೀಮತಿ.ಕಮಲಾ ಮತ್ತು ಶ್ರೀ.ವೆಂಕಪ್ಪ ಎಂ. ಅಗಡಿ ಇಂಜನೀಯರಿಂಗ್ ಕಾಲೇಜು ಲಕ್ಷ್ಮೇಶ್ವರ ಸಹಯೋಗದಲ್ಲಿ 21ನೇ ಅಗಡಿ ಕಾಲೇಜು ಸಂಸ್ಥಾಪನಾ ದಿನಾಚರಣೆಯಂದು 2024-25 ನೇ ಸಾಲಿನ ಪ್ರೊ. ವಿ. ಕೆ. ಕುಷ್ಟಗಿ-ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಆಡಳಿತಾಧಿಕಾರಿ ಪ್ರೊ. ವಿಕ್ರಮ ಶಿರೋಳ ಅವರಿಗೆ ನೀಡಿ ಗೌರವಿಸಲಾಗಿದೆ.
ನಮನ ಟ್ರಸ್ಟ್, ಗದಗ ವತಿಯಿಂದ ಪ್ರತಿವರ್ಷ ಅಗಡಿ ಕಾಲೇಜಿನಲ್ಲಿ ಸೇವೆ ಸಲ್ಲಿಸುವ ಪ್ರಾಧ್ಯಾಪಕರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. 2023-24ನೇ ಶೈಕ್ಷಣಿಕ ವರ್ಷ ಈ ಪ್ರಶಸ್ತಿಯನ್ನು ಇಲೆಕ್ಟ್ರಾನಿಕ್ಸ್ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಬಸವರಾಜ ಸೊರಟೂರು ಪಡೆದಿದ್ದರು. ಒಟ್ಟು 10 ಪ್ರಾಧ್ಯಾಪಕರನ್ನು ನಾಮನಿರ್ದೇಶನ ಮಾಡಲಾಗಿದ್ದು, 5 ಹಂತಗಳ ಆಯ್ಕೆ ಪ್ರಕ್ರಿಯೆಯಲ್ಲಿ ಒಬ್ಬರಿಗೆ ಪ್ರಶಸ್ತಿ ನೀಡಲಾಗಿದೆ.
ಅಗಡಿ ಮಹಾವಿದ್ಯಾಲಯದಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ನಮನ ಟ್ರಸ್ಟ್ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಶ್ರೇಷ್ಠತೆಗೆ ಉತ್ತೇಜನ ನೀಡಲು ಮತ್ತು ಪಾಠ-ಶಿಕ್ಷಣ ಪ್ರಕ್ರಿಯೆಯನ್ನು ಸುಧಾರಿಸಲು ಮುನ್ನೆಡೆಯುತ್ತಿರುವ ಒಂದು ಸೇವಾಸಂಸ್ಥೆಯಾಗಿದೆ. ಈ ಟ್ರಸ್ಟ್ನ ಮುಖ್ಯ ಉದ್ದೇಶವು ಅನುಭವಾತ್ಮಕ ಅಧ್ಯಯನವನ್ನು ಪ್ರತಿ ಹಂತದ ಶ್ರೇಣಿಯ ಕಲಿಕಾ ಪ್ರಕ್ರಿಯೆಯಲ್ಲಿ ಜಾರಿಗೊಳಿಸುವುದು.
ಈ ಸಂದರ್ಭದಲ್ಲಿ ಅಗಡಿ ಸಂಸ್ಥೆಯ ಅಧ್ಯಕ್ಷರಾದ ಹರ್ಷವರ್ಧನ ಅಗಡಿ, ಗೀತಾ ಎಚ್ ಅಗಡಿ, ಸಮೀರ ಆನಂದ ಅಗಡಿ,ಪ್ರಾಚಾರ್ಯರಾದ ಡಾ ಪರಶುರಾಮ ಬಾರಕಿ , ಡಾ ಎನ್ ಹಯವದನ, ಡಾ ರಾಜಶೇಖರ ಮೂಲಿಮನಿ ನಮನ ಟ್ರಸ್ಟ್ ಸದಸ್ಯರಾದ . ಹರೀಶ್ ಮೇಕಳಿ, ಶ್ವೇತಾಶ್ರೀ ಸವಾಗವೆ ಮುಂತಾದವರು ಉಪಸ್ಥಿತರಿದ್ದರು.