ವಿಶ್ವದ ಮೊದಲ ಖಾಸಗಿ ಬಾಹ್ಯಾಕಾಶ ನಿಲ್ದಾಣವನ್ನು ಅನಾವರಣಗೊಳಿಸಲಾಗಿದೆ. ಹ್ಯಾವನ್ -1 ಎಂದು ಕರೆಯಲ್ಪಡುವ ಇದರ ವಿನ್ಯಾಸವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಿಂತ ಹೆಚ್ಚು ಆಧುನಿಕ ಮತ್ತು ವಿಶಾಲವಾಗಿದೆ. ಹ್ಯಾವನ್ -1 ನ ಒಳಬಾಗವು ನಯವಾದ ಮರದ ವೆನಿಯರ್ ಮತ್ತು ಮೃದುವಾದ ಬಿಳಿ ಗೋಡೆಗಳನ್ನು ಹೊಂದಿರುವ ಐಷಾರಾಮಿ ಹೋಟೆಲ್ ಅನ್ನು ಹೋಲುತ್ತದೆ. ಒಳಗೆ ಜಿಮ್ ಮತ್ತು ಭೂಮಿಯ ಮೇಲಿನ ಪ್ರೀತಿ ಪಾತ್ರರೊಂದಿಗೆ ಸಂಪರ್ಕದಲ್ಲಿರಲು ದೂರ ಸಂಪರ್ಕ ತಂತ್ರಜ್ಞಾನವನ್ನು ಹೊಂದಿರುವ ಖಾಸಗಿ ಕೋಣೆಗಳಿವೆ.
ನಾಲ್ಕು ಖಾಸಗಿ ವಸತಿಗೃಹಗಳಲ್ಲಿ ಪ್ರತಿಯೊಂದೂ ತಮ್ಮ ವಸ್ತುಗಳ ಸಂಗ್ರಹಣೆ, ವ್ಯಾನಿಟಿ ಮತ್ತು ಕಸ್ಟಮ್ ಸೌಲಭ್ಯಗಳ ಕಿಟ್ ಅನ್ನು ಹೊಂದಿದೆ. ಇದನ್ನು ನಿರ್ಮಿಸಿರುವ ವ್ಯಾಸ್ಟ್ ಬಾಹ್ಯಾಕಾಶದಲ್ಲಿ ವಿಶ್ರಾಂತಿಯ ಸಮಯದಲ್ಲಿ ನಿದ್ರಿಸಲು ತೂಕವಿಲ್ಲದ ಕಾರಣ ಗಗನಯಾತ್ರಿಗಳಿಗೆ ಇದು ಸವಾಲಾಗಿದೆ. ಆದ್ದರಿಂದ ಸಧಾರಿತ ಮಲಗು ಕೋಣೆಯನ್ನು ನಿರ್ಮಿಸಲು ಆದ್ಯತೆ ನೀಡಿದ್ದಾರೆ. ಅವರು ಅಭಿವೃದ್ಧಿಪಡಿಸಿದ ಸಿಗ್ನೇಚರ್ ಸ್ಲೀಪ್ ಸಿಸ್ಟಮ್ ನ ಹಾಸಿಗೆಯು ಕ್ವೀನ್ ಸೈಜ್ ಗಾತ್ರದಲ್ಲಿದೆ ಮತ್ತು ಸೈಡ್ ಅಥವಾ ಬ್ಯಾಕ್ ಸ್ಲೀಪರ್ ಗಳಿಗೆ ಹೊಂದಿಕೊಳ್ಳುವಂತೆ ಕಸ್ಟಮೈಸ್ ಮಾಡಿದ್ದರಿಂದ ಅತ್ಯಂತ ಆರಾಮದಾಯಕ ವಾಗಿದೆ. ನಿಲ್ದಾಣದ ಕೇಂದ್ರಭಾಗದಲ್ಲಿ ನಿಯೋಜಿಸಿರುವ ಟೇಬಲ್ ಮತ್ತು ಬಾಹ್ಯಾಕಾಶದ ಸಂಪೂರ್ಣ ಚಿತ್ರಣವನ್ನು ನೋಡಲು ಗುಮ್ಮಟಾಕಾರದ ಕಿಟಕಿಯನ್ನು ಒಳಗೊಂಡಿದೆ.
ಇಲ್ಲಿಯವರೆಗೆ ಬಿಡುಗಡೆಯಾದ ಚಿತ್ರಗಳು ಗ್ರಾಫಿಕ್ಸ್ ಮೂಲಕ ಸಿದ್ದಪಡಿಸಿದ್ದವಾಗಿವೆ. ಆದರೆ ಅಂತಿಮವಾಗಿ ನಿರ್ಮಾಣವಾಗುವ ಈ ನಿಲ್ದಾಣ ಈ ವಿನ್ಯಾಸಗಳಿಗೆ ಹತ್ತಿರವಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಸ್ಪೇಸ್ಎಕ್ಸ್ನ ಫಾಲ್ಕನ್ 9 ರಾಕೆಟ್ನಲ್ಲಿ ಆಗಸ್ಟ್ 2025 ಕ್ಕಿಂತ ಮುಂಚಿತವಾಗಿ ಉಡಾವಣೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದದೆ. ನಿಲ್ದಾಣವು 2026 ರ ಆರಂಭದಲ್ಲಿ ತನ್ನ ಮೊದಲ ಯಾತ್ರಾರ್ತಿಗಳನ್ನು ಇಲ್ಲಿಗೆ ಸ್ವಾಗತಿಸುವ ನಿರೀಕ್ಷೆಗಳಿವೆ.
ಈ ಬಾಹ್ಯಾಕಾಶ ನಿಲ್ದಾಣ ಐಷಾರಾಮಿ ಅನುಭವದ ಹೊರತಾಗಿಯೂ, ವೈಜ್ಞಾನಿಕ ಸಂಶೋಧನೆಗಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ ನಿಲ್ದಾಣವೆಂದು ಪರಿಗಣಿಸಬಹುದಾಗಿದೆ.