Headlines

ಜಾತಿವಾರು ಜನಗಣತಿ ವರದಿ ಮಂಡನೆ: ಮುಂದಿನ ಸಂಪುಟ ಸಭೆಗೆ ಜಾತಿಗಣತಿ ವರದಿ ಅನುಷ್ಠಾನ ಶಿಫ್ಟ್..

ಬೆಂಗಳೂರು, ಏಪ್ರಿಲ್ 11:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಬಹು ನಿರೀಕ್ಷಿತ ಜಾತಿವಾರು ಜನಗಣತಿ ವರದಿಯನ್ನು ಮಂಡಿಸಿದರು. ಈ ವರದಿಯ ಮಂಡನೆ ಕಾಂಗ್ರೆಸ್ ಪಕ್ಷದ ಒಳಗೊಂದಿಗೇ ಬಿಜೆಪಿ ಸೇರಿದಂತೆ ಹಲವು ಶಾಸಕರ ವಿರೋಧದ ನಡುವೆಯೂ ನಡೆದಿದೆ.

ಹತ್ತು ವರ್ಷಗಳ ನಿಲುವಿನ ಬಳಿಕ ಈ ವರದಿಗೆ ಇದೀಗ ಮರುಜೀವ ಸಿಕ್ಕಿದೆ. ಮನೆಮನೆಗೆ ತೆರಳದೇ ತಯಾರಿಸಲಾದ ಈ ವರದಿ ಕುರಿತು ಪ್ರತಿಪಕ್ಷಗಳು ಗುಮಾನಿ ವ್ಯಕ್ತಪಡಿಸಿದ್ದು, ಇದರ ಪಾರದರ್ಶಕತೆಯ ಕುರಿತು ಪ್ರಶ್ನೆ ಎತ್ತಿವೆ.

ಸಂಪುಟ ಸಭೆಯಲ್ಲಿ ವರದಿ ಕುರಿತಂತೆ ಚರ್ಚೆ ನಡೆದಿದ್ದು, ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ವಿಷಯ ಉತ್ಕಟ ಚರ್ಚೆಗೆ ಗುರಿಯಾಗುವ ಸಾಧ್ಯತೆ ಇದೆ. ಆದರೆ ವರದಿಯ ಅನುಷ್ಠಾನ ಕುರಿತು ಈ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಮುಂದಿನ ಸಂಪುಟ ಸಭೆಯಲ್ಲಿ ‘ಜಾತಿ ಜನಗಣತಿ ಅನುಷ್ಠಾನ’ ಕುರಿತು ತೀರ್ಮಾನ ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *