ಗದಗ:ಮಕ್ಕಳಲ್ಲಿನ ಅಡಗಿಹೋಗಿರುವ ಪ್ರತಿಭೆಯನ್ನ ಪ್ರತಿಭಾ ಕಾರಂಜಿಯಂಥ ಕಾರ್ಯಕ್ರಮಗಳು ಹೊರತರುತ್ತಿವೆ ಹಾಗೂ ಮಕ್ಕಳಿಗೆ ಇದೊಂದು ಸೂಕ್ತ ವೇದಿಕೆಯಾಗಿದೆ ಎಂದು ಹೊಸಹಳ್ಳಿಯ ಶ್ರೀ ಮನಿಪ್ರ ಅಭಿನವ ಬೂದೀಶ್ವರ ಮಹಾಸ್ವಾಮಿಗಳು ಹೇಳಿದರು.
ಗದಗ ಗ್ರಾಮೀಣ ವಲಯದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಪೂಜ್ಯರು ಆಶಿರ್ವಚನ ನೀಡಿದರು.
ಪ್ರತಿ ಮಗುವಿನಲ್ಲಿ ಹುದುಗಿ ಹೋಗಿರುವ ಪ್ರತಿಭೆಯನ್ನ ಇಂತಹ ಕಾರ್ಯಕ್ರಮಗಳ ಮೂಲಕ ಅನಾವರಣಗೊಳಿಸಬೇಕು. ಆದರೆ ಅದಕ್ಕಿಂತ ಮುಂಚೆ ಮಗುವಿನ ತಂದೆ ತಾಯಿಗಳು ಆ ಮಗುವಿನಲ್ಲಿನ ಪ್ರತಿಭೆಯನ್ನ ಗುರುತಿಸುವ ಕೆಲಸ ಮಾಡಬೇಕು. ಆನಂತರ ಆ ಪ್ರತಿಭೆ ಶಿಕ್ಷಕರ ಮೂಲಕ ಸಮಾಜಕ್ಕೆ ಉಪಯುಕ್ತ ಆಗಬೇಕು ಎಂದು ಹೇಳಿದರು. ಅಲ್ಲದೇ ತಾಯಿಯ ಪ್ರೋತ್ಸಾಹದಿಂದ ಜಗತ್ತಿಗೆ ಬೆಳಕನ್ನು ಪರಿಚಯಿಸಿದ ಥಾಮಸ್ ಅಲ್ವ ಎಡಿಸನ್ ರ ಸಾಧನೆ ಕುರಿತು ಆಶಿರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕುರ್ತಕೋಟಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮೈಲಾರಪ್ಪ ಇನಾಮತಿ, ಉಪಾಧ್ಯಕ್ಷರಾದ ಶ್ರೀಮತಿ ಸರೋಜಾ ಅಂಗಡಿ ಹಾಗೂ ಮುಖ್ಯ ಅತಿಥಿಗಳಾಗಿ ಅಪ್ಪಣ್ಣ ಇನಾಮತಿ ಸೇರಿದಂತೆ ಗ್ರಾಮದ ಮುಖಂಡರು ಮತ್ತು ಸಂಘಟನೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಹಾಜರಿದ್ದರು.
ಸಮನ್ವಯಾಧಿಕಾರಿ ಶ್ರೀ ಜೆ.ಎ.ಭಾವಿಕಟ್ಟಿ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಬಿ.ಇ.ಒ ನಡುವಿನಮನಿ ಮಾತನಾಡಿದರು.
ಇದೇ ವೇಳೆ ತಾಲೂಕು ಅಧ್ಯಕ್ಷ ಶಿವಯೋಗಿ ಬಂಡಿ ರಾಜ್ಯ ಮಟ್ಟದಲ್ಲಿ ವಿಜೇತರಾಗುವ ಮಕ್ಕಳಿಗೆ ಪ್ರೋತ್ಸಾಹ ಧನವಾಗಿ 2500 ರೂ ಗಳನ್ನ ನೀಡುತ್ತೇನೆಂದು ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ತುಂಬುವ ಕೆಲಸ ಮಾಡಿದರು.
ಜಿಲ್ಲಾಧ್ಯಕ್ಷರಾದ ವಿ.ಎಂ.ಹಿರೇಮಠ ಮಕ್ಕಳಿಗೆ ಶುಭಕೊರಿದರು. ಕೊನೆಯಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾದ, ಶಂಕರ ಹಡಗಲಿ ವಂದಿಸಿದರು. ಸಿಆರ್ ಪಿ ನಿಂಬನಾಯ್ಕರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಬೂದಿಶ್ವರ ಮಠದಿಂದ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.ಪ್ರತಿಭಾ ಕಾರಂಜಿ ಕಾರ್ಯಕ್ರಮ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನ ಸೃಷ್ಠಿಸಿತ್ತು.ಗ್ರಾಮದ ಜನಪ್ರತಿನಿಧಿಗಳು ಊರಿನ ಹಿರಿಯರು ಊಟದ ತಯಾರಿ ಮಾಡಿ ಮಕ್ಕಳಿಗೆ ಸ್ವತಃ ಉಣಬಡಿಸಿದರು. ಇಲಾಖೆ ವತಿಯಿಂದ ಎಲ್ಲರಿಗೂ ಧನ್ಯವಾದಗಳನ್ನ ಅರ್ಪಿಸಲಾಯಿತು.