ಲಕ್ಷ್ಮೇಶ್ವರ: ಪಟ್ಟಣದ ಪೋಲಿಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀ ನಗರ ಒಂದನೇ ಕ್ರಾಸ್ ನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಮನೆಯಲ್ಲಿ ಯಾರು ಇಲ್ಲದಿದ್ದಾಗ ಬೆಳ್ಳಿಗ್ಗಿನ ಜಾವ 5 ಗಂಟೆಯ ಸಮಯದಲ್ಲಿ ಹಿತ್ತಲ ಬಾಗಿಲ ಚಿಲಕಾ ಮುರಿದು ಮನೆಯಲ್ಲಿದ್ದ ಬೆಳ್ಳಿ- ಬಂಗಾರದ ಆಭರಣಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.
ವರದಿ : ಪರಮೇಶ ಎಸ್ ಲಮಾಣಿ
ಘಟನೆಯ ವಿವರ :
ಅಕ್ಟೋಬರ್ 29 ರಂದು ನಡೆದಿದ್ದ ಕಳ್ಳತನದ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೋಲಿಸರು ಆರೋಪಿ ಹೋಟೆಲ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ, ದ್ಯಾಮಣ್ಣ ಗಂಗಪ್ಪ ಕಂಬಳಿ ಎಂಬಾತನಿಗೆ ಬಂಧಿಸಿ ಅವನಿಂದ ಒಟ್ಟು 17 ಗ್ರಾಮದ ತೂಕದ ಬಂಗಾರದ ಆಭರಣಗಳು ಮತ್ತು 55 ಗ್ರಾಮ ಬೆಳ್ಳಿ ಆಭರಣಗಳು ಸೇರಿದಂತೆ ಒಟ್ಟು 125,000 ರೂ. ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.
ಈ ಪ್ರಕರಣ ಭೇಧಿಸುವಲ್ಲಿ ಎಸ್ಪಿ ರೋಹನ್ ಜಗದೀಶ, ಡಿಎಸ್ಪಿ ಮುರ್ತುಜಾ ಖಾರ್ದಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಬಿ.ವಿ.ನ್ಯಾಮಗೌಡ ನೇತೃತ್ವದಲ್ಲಿ ಪಿಎಸ್ಐ ನಾಗರಾಜ ಗಡದ ಅಪರಾಧ ವಿಭಾಗದ ಪಿಎಸ್ಐ ಟಿ.ಕೆ.ರಾಠೋಡ ಹಾಗೂ ಸಿಬ್ಬಂದಿಗಳಾದ ಎಂ.ಎ.ಶೇಖ, ಆರ್ ಎಸ್ ಯರಗಟ್ಟಿ, ಎಂ.ಎಸ್ ಬಳ್ಳಾರಿ, ಎ.ಆರ್.ಕಮ್ಮಾರ, ಎಚ್.ಬಿ.ಗುಡ್ಡಣ್ಣವರ್, ಸಿ.ಎಸ್.ಮಠಪತಿ, ಡಿ.ಎಸ್.ನಧಾಫ್, ಪಾಂಡುರಂಗರಾವ್, ಎಚ್.ಐ.ಕಲ್ಲನ್ನವರ್, ಎಂ.ಆರ್.ಧಾರವಾಡ, ಎಂ.ಎಸ್.ಅಂಗಡಿ, ಎನ್.ಎಚ್.ಮಠಪತಿ, ಎಎಸ್ಐ ಗುರು ಬೂದಿಹಾಳ, ಸಂಜೀವ ಕೊರಡೂರ, ಅಪ್ಪಣ್ಣ ರಾಠೋಡ ಒಳಗೊಂಡಂತೆ ತಂಡ ರಚಿಸಲಾಗಿತ್ತು.
ಪ್ರಕರಣ ಭೇಧಿಸಿದ ತಂಡವನ್ನು ಎಸ್ಪಿ ರೋಹನ್ ಜಗದೀಶ, ಡಿಎಸ್ಪಿ ಮುರ್ತುಜಾ ಖಾರ್ದಿ ಅಭಿನಂಧಿಸಿದ್ದಾರೆ.
