ಲಕ್ಷ್ಮೇಶ್ವರ : ದಿ. ಲಕ್ಷ್ಮೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯು ಗುರುವಾರ ಜರುಗಿತು.
ವರದಿ : ಪರಮೇಶ ಎಸ್ ಲಮಾಣಿ.
ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ ಎರಡೆರಡು ನಾಮ ಪತ್ರಗಳು ಸಲ್ಲಿಕೆಯಾಗಿದ್ದವು. ಕೊನೆಯ ಘಳಿಗೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ಕಾಂಗ್ರೆಸ್ ನ ಬಸನಗೌಡ ವೇಂಕನಗೌಡ ಪಾಟೀಲ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಫಕ್ಕೀರಪ್ಪ ಯಲ್ಲಪ್ಪ ಇಚ್ಚಂಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದರು.
ಘೋಷಣೆಯಾಗುತ್ತಿದ್ದಂತೆಯೇ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ನೂತನ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಬ್ಯಾಂಕಿನ ನಿರ್ದೇಶಕರು ಹಾಗೂ ಕಾರ್ಯಕರ್ತರು ಸನ್ಮಾನಿಸಿದರು.
ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ, ರೋಣದ ಶಾಸಕ ಜಿ.ಎಸ್ ಪಾಟೀಲ ಇವರ ಮಾರ್ಗದರ್ಶನದಲ್ಲಿ ಜರುಗಿತು ಎಂದು ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್ ಕೊಪ್ಪದ ಹೇಳಿದರು.
ಸಂದರ್ಭದಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಜಿ.ವಿ ಪಾಟೀಲ, ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ವೀರೇಂದ್ರಗೌಡ ಪಾಟೀಲ, ತಾಲೂಕ ಅಧ್ಯಕ್ಷ ಮಹೇಶ ಹೋಗೆಸಪಪ್ಪಿನ, ಮುಖಂಡರಾದ ಸೋಮಣ್ಣ ಬೇಟಗೇರಿ, ದೇವಪ್ಪ ಲಮಾಣಿ, ಈರಣ್ಣ ಚವ್ಹಾಣ, ಮಲ್ಲಪ್ಪ ಹುಯಿಲಗೋಳ, ಹನಮಂತ ಹೊಸಳ್ಳಿ, ಸಿದ್ದು ದುರ್ಗಣ್ಣವರ್, ಮುದಕ್ಕಣ್ಣ ಗದ್ದಿ, ಯಲ್ಲಪ್ಪ ಸೂರಣಗಿ, ಹನುಮರೇಡ್ಡಿ ಬಸವರೇಡ್ಡಿ, ಅಶೋಕ ಮರಿಹೊಳಲಣ್ಣವರ್, ಹನಮಂಪ್ಪ ಗೊಜನೂರ, ಬಸವರಾಜ ಹೊಸಮನಿ, ಮುತ್ತಣ್ಣ ಟೊಕಾಳಿ, ಶಿವನಗೌಡ ಪಾಟೀಲ್, ವೆಂಕಣ್ಣ ಲಮಾಣಿ ಸೇರಿದಂತೆ ಕೆಸಿಸಿ ಬ್ಯಾಂಕಿನ ನಿರ್ದೇಶಕರು ಇದ್ದರು.
