ಭಾರತೀಯ ಸೇನೆಯ ಆಧುನೀಕರಣಕ್ಕಾಗಿ ಸರ್ಕಾರವು ದೇಣಿಗೆ ಕೋರಿ ಬ್ಯಾಂಕ್ ಖಾತೆಯನ್ನು ತೆರೆದಿದೆ ಎಂದು ಹೇಳುವ ‘ದಾರಿ ತಪ್ಪಿಸುವ’ ಸಂದೇಶವು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ. ಇದು ನಕಲಿ ಸಂದೇಶವಾಗಿದ್ದು, ಜಾಗರೂಕರಾಗಿರಬೇಕು, ಅಂತಹ ಮೋಸದ ಸಂದೇಶಗಳಿಗೆ ಜನರು ಬಲಿಯಾಗಬಾರದು ಎಂದು ಸಚಿವಾಲಯ ಎಚ್ಚರಿಸಿದೆ.
ಭಾರತೀಯ ಸೇನೆಯ ಆಧುನೀಕರಣಕ್ಕಾಗಿ ಮತ್ತು ಸೈನಿಕ ಕಾರ್ಯಾಚರಣೆಯಲ್ಲಿ ಗಾಯಗೊಂಡ ಅಥವಾ ಹುತಾತ್ಮರಾದ ಸೈನಿಕರ ಕುಟುಂಬಗಳ ಕಲ್ಯಾಣಕ್ಕಾಗಿ ನಿರ್ದಿಷ್ಟ ಬ್ಯಾಂಕ್ ಖಾತೆಗೆ ದೇಣಿಗೆ ನೀಡುವ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ದಾರಿ ತಪ್ಪಿಸುವ ಸಂದೇಶವು ಹರಿದಾಡುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇದು ಸಚಿವ ಸಂಪುಟ ನಿರ್ಧಾರ ಎಂದು ಮತ್ತು ಈದರ ರೂವಾರಿಯಾಗಿ ನಟ ಅಕ್ಷಯ್ ಕುಮಾರ್ ಅವರ ಹೆಸರನ್ನು ಬಳಕೆ ಮಾಡಿರುವುದು ಜನರನ್ನು ಸುಲಭವಾಗಿ ಮೋಸಗೊಳಿಸುವ ಸರಳ ಉಪಾಯ ಎಂದು ಸಚಿವಾಲಯ ತಿಳಿಸಿದೆ. ಸಂದೇಶದಲ್ಲಿ ನೀಡಲಾದ ಬ್ಯಾಂಕ್ ಖಾತೆಯ ವಿವರಗಳು ಸುಳ್ಳು ಎಂದು ಅದು ಹೇಳಿದೆ.
ಸರ್ಕಾರವು ಸ್ವತಹಾ ಸಕ್ರಿಯ ಯುದ್ಧ ಕಾರ್ಯಾಚರಣೆಗಳಲ್ಲಿ ಹುತಾತ್ಮರಾದ ಅಥವಾ ಅಂಗವಿಕಲರಾದ ಸೈನಿಕರಿಗಾಗಿ ಹಲವು ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಈ ಸಂದೇಶದ ಸತ್ಯಾಸತ್ಯತೆಯನ್ನು ಹಡುಕಿದ PIB ಫ್ಯಾಕ್ಟ್ ಚೆಕ್ ಅನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ದಾರಿ ತಪ್ಪಿಸುವ ಸಂದೇಶದ ಬಗ್ಗೆ ಜನರನ್ನು ಎಚ್ಚರಿಸಿದೆ.