ಭಾರಿ ಕುತೂಹಲ ಮೂಡಿಸಿದ್ದ, ಶಿಗ್ಗಾವಿ ರಣಕಣದಲ್ಲಿ ಕೊನೆಗೂ ಕಾಂಗ್ರೆಸ್ ಜಯಭೇರಿ ಭಾರಿಸಿದೆ.
ಮಾಜಿ ಸಿಎಂ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ತಮ್ಮ ಪುತ್ರ ಭರತ್ ಬೊಮ್ಮಾಯಿಯ ಅದೃಷ್ಟ ಪರೀಕ್ಷೆಯಲ್ಲಿ ಸೋಲು ಕಂಡಿದ್ದಾರೆ.
ಮತ ಎಣಿಕೆಯ 18 ಸುತ್ತುಗಳೂ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್,
13,448 ಅಂತರದಿಂದ 1,00,587 ಮತಗಳನ್ನ ಪಡೆದು ಜಯಭೇರಿ ಭಾರಿಸಿದ್ದರೆ, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ,86,960 ಮತಗಳಿಗೆ ಸೋಲು ಅನುಭವಿಸಿದ್ದಾರೆ.
ಹಲವು ಬಂಡಾಯಗಳ ಮಧ್ಯೆಯೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ, ಯಾಸೀರ ಖಾನ್ ಪಠಾಣ್ ಗೆಲುವು ಸಾಧಿಸಿದ್ದಾರೆ.
ಖಾದ್ರಿ ಬಂಡಾಯ ಶಮನಗೊಳಿಸಿದ್ದು, ಕೈಗೆ ಸಿಕ್ಕ ಪ್ಲಸ್ ಪಾಯಿಂಟ್ ಆಗಿದ್ದರೆ, ಇತ್ತ ಸತೀಶ್ ಜಾರಕಿಹೊಳಿ ಉಸ್ತುವಾರಿಯಲ್ಲಿ ನಡೆದ ಅಹಿಂದ ಮತಗಳ ಕ್ರೂಡಿಕರಣದ ತಂತ್ರ ವರ್ಕೌಟ್ ಆಗಿದೆ.
ಇನ್ನು ಕಳೆದ ಎಂಪಿ ಚುನಾವಣೆಯಲ್ಲಿ ಬೊಮ್ಮಾಯಿ ವಿರುದ್ಧ ಸೋಲು ಅನುಭವಿಸಿದ್ದ, ಆನಂದಸ್ವಾಮಿ ಗಡ್ಡದ್ದೇವರಮಠ ಹಾಗೂ ಹಲವು ನಾಯಕರ ಒಗ್ಗಟ್ಟಿನ ಮಂತ್ರ, ಭರತ್ ಬೊಮ್ಮಾಯಿಗೆ ಸೋಲಿನ ರುಚಿ ತೋರಿಸುವದರಲ್ಲಿ ಯಶಸ್ವಿಯಾಗಿದೆ.