ಬೆಂಗಳೂರು: ಒಂದೆಡೆ ಪಂಚಮಸಾಲಿ ಹೋರಾಟ ತಾರಕಕ್ಕೇರಿ ನಿನ್ನೆ ಬೆಳಗಾವಿಯಲ್ಲಿ ಹಿಂಸಾರೂಪ ಪಡೆದುಕೊಂಡಿದೆ. 2ಎ ಮೀಸಲಾತಿಗಾಗಿ ಹೋರಾಟಕ್ಕೆ ಆಗಮಿಸಿದ್ದ ಹೋರಾಟಗಾರರ ಮೇಲೆ ಖಾಕಿಪಡೆ ಲಾಠಿ ಪ್ರಹಾರ ಮಾಡಿದೆ.ಇದರ ಬೆನ್ನಲ್ಲೆ ದಿ.12 ರಂದು ಸರ್ಕಾರದ ನೀತಿ ಖಂಡಿಸಿ ರಾಜ್ಯವ್ಯಾಪಿ ಹೋರಾಟಕ್ಕೆ ಪಂಚಮಸಾಲಿ ಸ್ವಾಮಿಜಿ ಕರೆ ಕೊಟ್ಟಿದ್ದಾರೆ.
ಈ ನಡುವೆ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಹಿಂದುಳಿದ ಪ್ರವರ್ಗ-2ಎ ಗೆ ಸೇರಿಸಬಾರದು ಎಂದು ಒತ್ತಾಯಿಸಿ ಸಿಎಂ ಸಿದ್ಧರಾಮಯ್ಯನವರಿಗೆ ಮನವಿ ನೀಡಲಾಗಿದೆ.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪಂಚಮಸಾಲಿ ಸಮುದಾಯದ ಬೇಡಿಕೆಯನ್ನು ಯಾವುದೇ ಕಾರಣಕ್ಕೂ ಪರಿಗಣಿಸಬಾರದು.ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡರು ಮನವಿ ಮೂಲಕ ಎಚ್ಚರಿಸಿದ್ದಾರೆ.