ಲಕ್ಷ್ಮೇಶ್ವರ: ತಾಲೂಕ ಪಂಚ ಗ್ಯಾರಂಟಿ ಸಮಿತಿ ಅಸ್ತಿತ್ವಕ್ಕೆ ಬಂದಾಗಿನಿಂದ ಮುಸುಕಿನ ಗುದ್ದಾಟ ನಡೆಯುತ್ತಿದ್ದರು, ಇದರ ನಡುವೆಯು ಜೂನ್ 20ರ ಶುಕ್ರವಾರ ತಾಪಂ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಪ್ರಗತಿ ಪರಿಶೀಲನೆ ಸಭೆ ಜರುಗಿದೆ.
ಲಕ್ಷ್ಮೇಶ್ವರ ಸುದ್ದಿ.
ಪರಮೇಶ ಎಸ್ ಲಮಾಣಿ.
ಸಭೆಗೆ ಅಸಮಾಧಾನ ವ್ಯಕ್ತಪಡಿಸಿದ ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹಾಗೂ ಪಂಚ ಗ್ಯಾರಂಟಿ ಸಮಿತಿ ಸದಸ್ಯರಾಗಿದ್ದ ಜಿ ಆರ್ ಕೊಪ್ಪದ ಪತ್ರಿಕಾ ಹೇಳಿಕೆ ನೀಡಿದರು.
ತಾಲೂಕ ಪಂಚ ಗ್ಯಾರಂಟಿ ಸಮಿತಿಯಲ್ಲಿ ಒಟ್ಟು 15ಜನ ಸದಸ್ಯರು ಇದ್ದಿವಿ, ಒಂದು ವಾರದ ಹಿಂದೆ ಗ್ಯಾರಂಟಿ ಸಮಿತಿಗೆ 7 ಜನ ಸದಸ್ಯರು ರಾಜೀನಾಮೆ ಸಲ್ಲಿಸಿದ್ದೇವೆ.
ರಾಜೀನಾಮೆ ಕಾರಣ : ತಾಲೂಕ ಪಂಚ ಗ್ಯಾರಂಟಿ ಸಮಿತಿಯ ಹಾಲಿ ಅಧ್ಯಕ್ಷ ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ಸದಸ್ಯರು ಇಲ್ಲದ್ದಿದ್ದರು, ತಾಲೂಕಿನ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾಗಿದ್ದಾರೆ ಎನ್ನುವ ಆರೋಪ ಕಾರ್ಯಕರ್ತರಲ್ಲಿ ಕೇಳಿಬಂದಿತ್ತು.
ಈ ಹಿನ್ನಲೆಯಲ್ಲಿ ಇತ್ತಿಚೇಗೆ ಹಾಲಿ ಅಧ್ಯಕ್ಷರು ಗದಗ ಜಿಲ್ಲೆಯ ಸಮಿತಿಯ ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿತ್ತು, ತಾಲೂಕ ಪಂಚ ಗ್ಯಾರಂಟಿ ಸಮಿತಿ ಸದಸ್ಯರು ಮಾತ್ರ ಇದ್ದರು, ಪಂಚ ಗ್ಯಾರಂಟಿ ಸಮಿತಿಯ ನಿಯಮದಂತೆ ಜಿಲ್ಲಾ ಸಮಿತಿಯ ಸದಸ್ಯರಾದವರು ಮಾತ್ರ ತಾಲೂಕ ಅಧ್ಯಕ್ಷರಾಗಬಹುದು ಎಂಬ ನಿಯಮವಿದೆ. ಆದರೆ ನಿಯಮಗಳನ್ನು ಗಾಳಿಗೆ ತೂರಿ ತಾಲೂಕ ಸದಸ್ಯರಾಗಿದ್ದರು ಕೂಡ ಕೆಲವರ ಕೃಪಾಕಟಾಕ್ಷದಿಂದ ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ, ಈ ಬಗ್ಗೆ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿತ್ತು.
ಹಾಗಾಗಿ ಜೂನ್ 20 ರಂದು ನಡೆದ ಸಭೆಗೆ ರಾಜೀನಾಮೆ ಕೊಟ್ಟಿರುವ ಸಮಿತಿಯ 7 ಜನ ಸದಸ್ಯರು, ಅಸಮಾಧಾನಗೊಂಡ ಕಾರ್ಯಕರ್ತರು ಸಭೆಗೆ ಹೋಗದೆ ಗೈರು ಆಗಿದ್ದೇವೆ.
ಪಕ್ಷದ ಹಿತದೃಷ್ಟಿಯಿಂದ ಅಹಿತಕರ ಘಟನೆ ನಡೆಯಬಾರದೆಂದು ಕಾರ್ಯಕರ್ತರು ಹಾಗೂ ಗ್ಯಾರಂಟಿ ಸಮಿತಿ ಸದಸ್ಯರನ್ನು ಸಮಾಧಾನ ಪಡಿಸಿ ಪಕ್ಷದ ಮುಂಚೂಣಿ ಘಟಕದ ಅಧ್ಯಕ್ಷನಾಗಿ ಪಕ್ಷಕ್ಕೆ ಆಗುವ ಹಾನಿಯನ್ನು ತಡೆಗಟ್ಟಲು, ಪ್ರಯತ್ನಿಸಿ, ಎಲ್ಲರನ್ನು ಸಮಾಧಾನ ಪಡಿಸಿದ್ದು, ಈ ಬಗ್ಗೆ ಜಿಲ್ಲೆಯ ಪಕ್ಷದ ಹಿರಿಯರ ಗಮನಕ್ಕೆ ಈ ವಿಷಯವನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ಪ್ರತಿಕ್ರಿಯೆಸಿದರು.