ಶ್ರೀನಗರ, ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಗೆ ದೇಶವೇ ಬೆಚ್ಚಿ ಬಿದ್ದಿದೆ. ಕನ್ನಡಿಗರಾದ ಶಿವಮೊಗ್ಗದ ಮಂಜುನಾಥ ಹಾಗೂ ಬೆಂಗಳೂರಿನ ಭರತ್ ಭೂಷಣ್ ಈ ದಾಳಿಗೆ ಬಲಿಯಾಗಿದ್ದಾರೆ. ಈ ದಾಳಿಯಲ್ಲಿ ಕೆಲವು ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿರೋ ಭಯೋತ್ಪಾದಕರು, 27 ಪ್ರವಾಸಿಗರನ್ನ ಹತ್ಯೆ ಮಾಡಿದ್ದಾರೆ.
ಈ ನಡುವೆ ಗದಗ ಮೂಲದ ಗದಗನ ವಕೀಲಚಾಳ ನಿವಾಸಿ ಪ್ರಶಾಂತ ರಾಜಶೇಖರ ಅಣ್ಣಿಗೇರಿ (27) ಹಾಗೂ ಮತ್ತೋರ್ವ ಪ್ರವಾಸಿಗ ಖಾನತೋಟ, ಜನತಾ ಕಾಲೋನಿ ನಿವಾಸಿ, ಮಾರುತಿ ಈರಪ್ಪ ಕಟ್ಟಿಮನಿ (28) ಎಂಬ ಇಬ್ಬರು ಯುವಕರು ಶ್ರೀನಗರದಲ್ಲಿ ಸುರಕ್ಷಿತವಾಗಿದ್ದಾರೆ ಎಂಬ ಸುದ್ದಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಇವರಿಬ್ಬರು ಬೆಂಗಳೂರಿನಿಂದ ವಿಮಾನ ಮೂಲಕ ಸೋಮವಾರವಷ್ಟೇ ಶ್ರೀನಗರಕ್ಕೆ ತೆರಳಿದ್ದರು. ನಿನ್ನೆ ಅವರು ಪಹಲ್ಗಾಮ್ ಕಡೆಗೆ ಪ್ರವಾಸಕ್ಕೂ ಹೊರಡಲಿಕ್ಕೆ ಸಜ್ಜಾಗಿದ್ದರು ಎನ್ನಲಾಗಿದೆ.

ಮೇಲಿನ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ..
ಅಲ್ಲದೇ, ನಗರದ ಜೈನ ಸಮುದಾಯದ ಧರೀಜ್ ಷಾ ಕುಟುಂಬದ 17 ಜನ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ.ಅದೃಷ್ಟವಶಾತ್ 17 ಜನರೂ ಸಹ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಒಂದೇ ಕುಟುಂಬದ ಸದ್ಯಸರೆಲ್ಲರೂ ಕೂಡಿಕೊಂಡು, ಕಾಶ್ಮೀರದ ಪಹಲ್ಗಾಮಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದರು. ಉಗ್ರರ ದಾಳಿ ಹಿನ್ನೆಲೆ ಮರಳಿ ತಮ್ಮೂರಿನತ್ತ ವಾಪಾಸ್ ಆಗುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಅದೃಷ್ಟವಶಾತ್ ದಾಳಿಯ ವಿಷಯ ತಿಳಿದ ತಕ್ಷಣ ಅವರು ಪಹಲ್ಗಾಮ್ ಪ್ರವಾಸವನ್ನು ತಕ್ಷಣವೇ ರದ್ದುಪಡಿಸಿ ಮತ್ತೆ ಶ್ರೀನಗರಕ್ಕೆ ಹಿಂದಿರುಗಿದ್ದಾರೆ. ಇದೀಗ ಅವರು ಶ್ರೀನಗರದ ಲಾಡ್ಜ್ ಒಂದರಲ್ಲಿ ಉಳಿದಿದ್ದಾರೆ. “ನಾವು ಸಂಪೂರ್ಣವಾಗಿ ಸುರಕ್ಷಿತವಾಗಿದ್ದೇವೆ. ಯಾವುದೇ ತೊಂದರೆ ಇಲ್ಲ. ಆದರೆ ನಿನ್ನೆ ನಡೆದ ಘಟನೆಯಿಂದ ನಾವು ತುಂಬಾ ಬೆದರುವಂತಾಗಿದೆ,” ಎಂದು ಮಾರುತಿ ಹಾಗೂ ಪ್ರಶಾಂತ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಈ ರೀತಿಯ ಘಟನೆಗಳು ಹಾರಾಟದಲ್ಲಿರುವ ಪ್ರವಾಸೋದ್ಯಮದ ಮೇಲೆ ಆಘಾತಕಾರಿಯಾಗಿ ಬೀರುತ್ತಿವೆ. ಸ್ಥಳೀಯ ಪೋಲಿಸ್ ಹಾಗೂ ಭದ್ರತಾ ಪಡೆಗಳು ಈಗಲೇ ತನಿಖೆ ಆರಂಭಿಸಿದ್ದು, ಈ ದಾಳಿಯ ಹಿಂದೆ ಇರುವ ಉಗ್ರರ ತನಿಖೆ ಜೋರಾಗಿ ನಡೆಯುತ್ತಿದೆ.

ಪ್ರವಾಸಿಗರ ಸುರಕ್ಷತೆಗೆ ಹೆಚ್ಚು ಪ್ರಾಮುಖ್ಯತೆ ನೀಡುವಂತೆ ಅಲ್ಲಿನ ಆಡಳಿತ ವ್ಯವಸ್ಥೆಗೆ ಹಲವಾರು ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.
ಏನಿದು ಘಟನೆ..
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಿನ್ನೆ ಸಂಜೆ ಭಯೋತ್ಪಾದಕ ದಾಳಿ ನಡೆದಿದೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ಮಾಡಲಾಗಿದೆ. ಭಯೋತ್ಪಾದಕರ ಈ ಗುಂಡಿನ ದಾಳಿಯಲ್ಲಿ ಶಿವಮೊಗ್ಗ ಹಾಗೂ ಬೆಂಗಳೂರಿನ ಕನ್ನಡಿಗ ಪ್ರವಾಸಿಗರನ್ನ ಸೇರಿ ಸುಮಾರು 27 ಪ್ರವಾಸಿಗರ ಸಾವಾಗಿದೆ ಎಂದು ವರದಿಯಾಗಿದೆ. ಗಾಯಗೊಂಡ ಪ್ರವಾಸಿಗರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಲಗಳು ಹೇಳುವಂತೆ ಭಯೋತ್ಪಾದಕರು ಮೊದಲು ಪ್ರವಾಸಿಗರಿಂದ ಹೆಸರುಗಳನ್ನು ಕೇಳಿದರು. ಆಗ ಪ್ರವಾಸಿಗರು ತಮ್ಮ ಹಿಂದೂ ಹೆಸರುಗಳನ್ನು ಹೇಳಿದಾಗ ಪ್ರವಾಸಿಗರ ಮೇಲೆ ಅವರು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಚುರುಕುಗೊಂಡ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ 2-3 ಭಯೋತ್ಪಾದಕರು ಹತರಾಗಿದ್ದಾರೆ ಎನ್ನಲಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ನೇರವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಇದೇ ಮೊದಲು ಎಂಬುದು ಗಮನಾರ್ಹ.
ಕಾಡಿನಿಂದ ಬಂದ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ನಂತರ ಅಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಪ್ರವಾಸಿಗರು ತಮ್ಮ ಪ್ರಾಣ ಉಳಿಸಿಕೊಳ್ಳಲು ಎಲ್ಲಂದರಲ್ಲಿ ಓಡಲು ಪ್ರಾರಂಭಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ತಕ್ಷಣ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆ ಆರಂಭಿಸಿದರು. ಗುಡ್ಡಗಾಡು ಪ್ರದೇಶಗಳಲ್ಲಿ ಸೇನೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.