ಮುಂಡರಗಿ: ಇದು ನಿಮ್ಮ *“ಸಿಟಿ ಎಕ್ಸಪ್ರೆಸ್”* ನ್ಯೂಸ್ ನ ಬಿಗ್ ಬಿಗ್ ಇಂಪ್ಯಾಕ್ಟ್. ಹೌದು, ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಇಂದು ಬೆಳಿಗ್ಗೆಯಷ್ಟೇ ಪಟ್ಟಣದ ವಾರ್ಡ ನಂ. 20 ರಲ್ಲಿ ( ಶಾದಿಮಹಲ್ ಬಳಿ ) ಬೀದಿ ನಾಯಿಯೊಂದು ಮನೆ ಮುಂದೆ ಆಟವಾಡುತ್ತಿದ್ದ ರುದ್ರೇಶ ವಿರೇಶ ಕಾಳೆ ಅನ್ನೋ ಎರೆಡೂವರೆ ವರ್ಷದ ಮಗುವಿನ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿತ್ತು.
ಈ ಕುರಿತು ನಿಮ್ಮ *ಸಿಟಿ ಎಕ್ಸಪ್ರೆಸ್* ನ್ಯೂಸ್ ವಸ್ತುನಿಷ್ಠ, ವರದಿ ಪ್ರಕಟಿಸಿತ್ತು. ಈ ಮೂಲಕ ಪುರಸಭೆ ಆಡಳಿತ ಮಂಡಳಿಗೆ ತನ್ನ ಜವಾಬ್ದಾರಿಯನ್ನ ನೆನಪಿಸುವ ಜೊತೆಗೆ, ಸಂಬಂಧಿಸಿದ ಅಧಿಕಾರಿಗಳನ್ನ ಎಚ್ಚರಿಸುವ ಕೆಲಸ ಮಾಡಿತ್ತು.
ತಕ್ಷಣ ಎಚ್ಚೆತ್ತುಕೊಂಡ ಮುಂಡರಗಿ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮತ್ತು ಸಿಬ್ಬಂದಿಗಳ ತಂಡ, ಡಾಗ್ಸ್ ಆಪರೇಷನ್ ಗೆ ಇಳಿದಿದೆ. ಬೀದಿನಾಯಿ ಸೆರೆ ಹಿಡಿಯುವ ಪರಿಣಿತರ ತಂಡದೊಂದಿಗೆ ಪಟ್ಟಣದ ತುಂಬೆಲ್ಲ ಬೀಡುಬಿಟ್ಟಿರುವ ಬೀದಿನಾಯಿಗಳ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದೆ.
ಮುಖ್ಯವಾಗಿ ಮಗುವಿನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ ನಾಯಿಯನ್ನ ಸಾರ್ವಜನಿಕರು ತಮ್ಮ ಆಕ್ರೋಶದ ಕಿಚ್ಚಿನಲ್ಲಿ ಹೊಡೆದು ಹಾಕಿದ್ದು, ಪುರಸಭೆ ವತಿಯಿಂದ ಈಗಾಗಲೇ ಐವತ್ತಕ್ಕೂ ಹೆಚ್ಚು ನಾಯಿಗಳನ್ನ ಸೆರೆ ಹಿಡಿಯಲಾಗಿದೆ.ಇನ್ನೂ ಮೂರುದಿನಗಳ ಕಾಲ ಈ ಬೀದಿನಾಯಿಗಳ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಲಿದೆ.
ಅದೇನೆ ಇರಲಿ “ಲೋಕಲ್ ಟು ಗ್ಲೋಬಲ್” ಅನ್ನುವ ಶೀರ್ಷಿಕೆಯೊಂದಿಗೆ ದಾಪುಗಾಲಿಟ್ಟ ನಿಮ್ಮ “ಸಿಟಿ ಎಕ್ಸಪ್ರೆಸ್” ನ್ಯೂಸ್ ಗೆ ಸ್ಥಳಿಯ ಸುದ್ದಿಯ ಫಲಿತಾಂಶ ಸಾರ್ಥಕತೆ ತಂದುಕೊಟ್ಟಿದೆ ಎಂದರೆ ತಪ್ಪಾಗಲಾರದು.ಜೊತೆಗೆ ಸುದ್ದಿ ಪ್ರಸಾರವಾದ ಕೆಲವೇ ಕ್ಷಣದಲ್ಲಿ ಪುರಸಭೆ ‘ಡಾಗ್ ಆಪರೇಶನ್’ ಪ್ರಾರಂಭಿಸಿ ಕಾರ್ಯಾಚರಣೆ ಕೈಗೊಳ್ಳುವ ಹಾಗೆ ಮಾಡಿದ “ಸಿಟಿ ಎಕ್ಸಪ್ರೆಸ್” ನ್ಯೂಸ್ ತಂಡಕ್ಕೆ ಪಟ್ಟಣದ ಜನತೆ ಅಭಿನಂದನೆಗಳನ್ನ ತಿಳಿಸಿದ್ದು, ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಆಶಿರ್ವಾದದೊಂದಿಗೆ ‘ಸಿಟಿ ಎಕ್ಸಪ್ರೆಸ್’ ನ್ಯೂಸ್ ಮತ್ತೇ ತನ್ನ ಕೆಲಸ ಮುಂದುವರೆಸಲಿದೆ.
” ಈಗಾಗಲೇ ಬೀದಿ ನಾಯಿಗಳ ಸೆರೆ ಹಿಡಿಯಲು ಟೆಂಡರ್ ಕರೆದಿದ್ದೆವು.ಆದರೆ ಯಾರೂ ಸಹ ಟೆಂಡರ್ ಹಾಕಲು ಮುಂದೆ ಬಂದಿರಲಿಲ್ಲ. ಇಂದು ಬೆಳಿಗ್ಗೆ ನಡೆದ ಅವಘಡ ನಮ್ಮನ್ನ ಸುಮ್ಮನೆ ಕೂರಲು ಬಿಡಲಿಲ್ಲ. ‘ಸಿಟಿ ಎಕ್ಸಪ್ರೆಸ್’ ನಲ್ಲಿ ಸುದ್ದಿ ವೀಕ್ಷಿಸಿದ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದೇವೆ. ಜೊತೆಗೆ ಮಾಂಸದ ಅಂಗಡಿಗಳ ಸ್ಥಳಾಂತರಕ್ಕೂ ಈಗಾಗಲೇ ಜಾಗೆ ಗುರುತಿಸಲಾಗಿದೆ. ಆ ಕೆಲಸವನ್ನೂ ಸಹ ಆದಷ್ಟು ಬೇಗ ಮಾಡಿ ಮುಗಿಸುತ್ತೇವೆ.”
ಶಂಕರ ಹುಲ್ಲಮ್ಮನವರ.
ಮುಖ್ಯಾಧಿಕಾರಿಗಳು. ಪುರಸಭೆ.ಮುಂಡರಗಿ