Sunday, April 20, 2025
Homeದೇಶ‘ಒನ್ ನೇಷನ್ ಒನ್ ಸಬ್ಸ್ಕ್ರಿಪ್ಷನ್ ‘: ಕೇಂದ್ರದ ಹೊಸ ಯೋಜನೆ

‘ಒನ್ ನೇಷನ್ ಒನ್ ಸಬ್ಸ್ಕ್ರಿಪ್ಷನ್ ‘: ಕೇಂದ್ರದ ಹೊಸ ಯೋಜನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸೋಮವಾರ ‘ಒನ್ ನೇಷನ್ ಒನ್ ಸಬ್ಸ್ಕ್ರಿಪ್ಷನ್ ‘ (ಒಎನ್ಒಎಸ್) ಯೋಜನೆಗೆ ಅನುಮೋದನೆ ನೀಡಿದೆ. ಹೊಸ ಯೋಜನೆಯು ಭಾರತದಾದ್ಯಂತ ವಿದ್ಯಾರ್ಥಿಗಳು, ಬೋಧಕರು ಮತ್ತು ಸಂಶೋಧಕರಿಗೆ ಅನುಕೂಲವಾಗುವಂತೆ  ಉತ್ತಮ ಗುಣಮಟ್ಟದ  ಸಂಶೋಧನಾ ಲೇಖನಗಳು ಮತ್ತು ಅಧ್ಯಯನದ ಪ್ರಭಂದಗಳನ್ನು  ಒಂದೇ ಜಾಗದಲ್ಲಿ ಸಂಗ್ರಹಿಸಿ ಸುಲಭವಾಗಿ ದೊರೆಯುಂತೆ ಮಾಡುವುದಾಗಿದೆ.

ವಿಕ್ಷಿತ್ ಭಾರತ್ @ 2047, ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (ANRF) ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಯೋಜನೆಯನ್ನು ರೂಪಿಸಲಾಗಿದ್ದು, ಈ ಯೋಜನೆಯನ್ನು ಬೆಂಬಲಿಸಲು ಮೋದಿ ಸರ್ಕಾರ ಮುಂದಿನ ಮೂರು ವರ್ಷಗಳಲ್ಲಿ (2025-2027) 6,000 ಕೋಟಿ ರೂ. ವ್ಯಯಿಸಲಿದೆ.

ಒಎನ್ಒಎಸ್ ಅಡಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿನ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಕೇಂದ್ರ ಸರ್ಕಾರದ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿಗೆ, ಅಂತರ್ ರಾಷ್ಟ್ರೀಯ ಮಾನ್ಯತೆ ಪಡೆದ ನಿಯತಕಾಲಿಕಗಳಿಗೆ ಪ್ರವೇಶವನ್ನು ಒದಗಿಸಲಾಗುವುದು. ಈ ಯೋಜನೆಯ ವಿವಿಧ ವಿಭಾಗಗಳಲ್ಲಿ ಸುಮಾರು 1.8 ಕೋಟಿ ವಿದ್ಯಾರ್ಥಿಗಳು, ಬೋಧಕರು, ಸಂಶೋಧಕರು ಮತ್ತು ವಿಜ್ಞಾನಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಒಟ್ಟು 30 ಪ್ರಮುಖ ಅಂತರರಾಷ್ಟ್ರೀಯ ನಿಯತಕಾಲಿಕ ಪ್ರಕಾಶಕರು ಈ ಯೋಜನೆಯ ಭಾಗವಾಗಿದ್ದು, ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ಸ್ವಾಯತ್ತ ಸಂಸ್ಥೆಯಾದ ಮಾಹಿತಿ ಮತ್ತು ಗ್ರಂಥಾಲಯ ನೆಟ್ವರ್ಕ್ (INFLIBNET) ಜಂಟಿಯಾಗಿ ರಾಷ್ಟ್ರೀಯ ಸಬ್ಸ್ಕ್ರಿಪ್ಷನ್ ಮೂಲಕ ಸುಮಾರು 13,000 ಇ-ಜರ್ನಲ್ಗಳನ್ನು ಇಲ್ಲಿ ನೀಡಲು ಸಜ್ಜಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments