ಕೇಂದ್ರ ಸರ್ಕಾರ ಇಂದು ಸಂಸತ್ತಿನಲ್ಲಿ ಒಂದು ದೇಶ, ಒಂದು ಎಲೆಕ್ಷನ್ ಮಸೂದೆ ಮಂಡಿಸಲಿದೆ. ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿ ಸಂಸದೀಯ ಸ್ಥಾಯಿ ಸಮಿತಿಗೆ ಶಿಫಾರಸು ಮಾಡುವಂತೆ ಸ್ಪೀಕರ್‌ಗೆ ಮನವಿ ಮಾಡುವ ಸಾಧ್ಯತೆ ಇದೆ. 129 ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗುತ್ತಿದೆ ಎಂದು ವರದಿಯಾಗಿದೆ. ಸಂಸದರು ಕಡ್ಡಾಯವಾಗಿ ಸಂಸತ್ತಿಗೆ ಹಾಜರಾಗಬೇಕು ಎಂದು BJP ಈಗಾಗಲೇ ವಿಪ್ ಜಾರಿ ಮಾಡಿದೆ. ಕಾಂಗ್ರೆಸ್ ಜೊತೆಗೆ ಹಲವು ಪ್ರಾದೇಶಿಕ ಪಕ್ಷಗಳು ಈ ಮಸೂದೆಯನ್ನು ವಿರೋಧಿಸುತ್ತಿವೆ.
*ಲೋಕಸಭೆಯಲ್ಲಿ ಯಾರ ಬಲ ಎಷ್ಟು?*
ಒಂದು ದೇಶ, ಒಂದು ಎಲೆಕ್ಷನ್ ಬಿಲ್ ಮಂಡನೆ ಹಿನ್ನೆಲೆ ಲೋಕಸಭೆಯಲ್ಲಿ ಪಕ್ಷಗಳ ಬಲಾಬಲದ ಬಗ್ಗೆ ಕುತೂಹಲ ಮೂಡಿದೆ. ಈ ಸಾಂವಿಧಾನಿಕ ತಿದ್ದುಪಡಿ ಮಸೂದೆ ಅಂಗೀಕರಿಸಲು ಸಂಖ್ಯಾ ಬಲ ಪ್ರಮುಖವಾಗಿದೆ. 543 ಸ್ಥಾನಗಳ LS ನಲ್ಲಿ NDA 293 ಸ್ಥಾನ ಹೊಂದಿದೆ. ಇದರಲ್ಲಿ BJP 240, TDP 16, JDU 12, SS 7, LJP 5. INDIA 249. CONG 99, SP 37, TMC 28, DMK 22. TMC ಮೈತ್ರಿಗೆ ತಲೆಕೆಡಿಸಿಕೊಂಡಿಲ್ಲ. ತಟಸ್ಥ ಪಕ್ಷಗಳು 11 ಸ್ಥಾನ ಹೊಂದಿವೆ.