ಗದಗ : ದೇವದಾಸಿ ಮಹಿಳೆಯರ ಕುಟುಂಬದ ಗಣತಿಯಲ್ಲಿನ ಅಸಮರ್ಪಕತೆ ತೊಡಕುಗಳು ಹಾಗೂ ವಯೋಮಿತಿ ಕೈ ಬಿಟ್ಟು ಸರ್ವೇಯಿಂದ ಹೊರ ಉಳಿದ ಎಲ್ಲರ ಸಂಪೂರ್ಣ ಸರ್ವೆ ಮಾಡಲು ಆಗ್ರಹಿಸಲಾಯಿತು.
ಗದಗ ಜಿಲ್ಲಾಧಿಕಾರಿ ಕಛೇರಿ ಎದುರು ದೇವದಾಸಿ ಮಹಿಳೆಯರು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯರವರಿಗೆ ಮನವಿ ಸಲ್ಲಿಸಲಾಯಿತು.
ವರದಿ: ಪರಮೇಶ ಲಮಾಣಿ
ಜಿಲ್ಲಾಧ್ಯಕ್ಷ ಹುಲಿಗೇಮ್ಮ ಮಾತನಾಡಿ ಹಲವು ದಶಕಗಳ ಹೋರಾಟವನ್ನು ಪರಿಗಣಿಸಿ ತಮ್ಮ ಸರಕಾರ ಹಿಂದಿನ ಕಾಯ್ದೆಗಳನ್ನು ರದ್ದು ಪಡಿಸಿ ದೇವದಾಸಿ ನಿಷೇಧ ಮಸೂದೆ – 2025 ನ್ನು ಅಂಗೀಕರಿಸಿರುವುದು ಮತ್ತು ದೇವದಾಸಿ ಮಹಿಳೆಯರ 3 ತಲೆ ಮಾರುಗಳ ಕುಟುಂಬದವರ ಸಮೀಕ್ಷೆಗೆ ಕ್ರಮ ವಹಿಸಿರುವುದು ಸ್ವಲ್ಪ ತಡವಾಗಿಯಾದರೂ ಕ್ರಮ ವಹಿಸಿರುವ ತಮ್ಮ ಸರಕಾರವನ್ನು ಅಭಿನಂದಿಸಿದೆ.
ಇಗ ನಡೆಯುತ್ತಿರುವ ಆನ್ ಲೈನ್ ಸಮೀಕ್ಷೆಯು ಹಲವಾರು ಕೊರತೆ ಹಾಗು ತೊಂದರೆಗಳಿಂದ ಕೂಡಿ ಅಸಮರ್ಪಕವಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.
ನಾವು ಸದರಿ ಸಮೀಕ್ಷೆಯನ್ನು ಪ್ರತಿ ಗ್ರಾಮದಲ್ಲೂ ದೇವದಾಸಿ ಮಹಿಳೆಯರ ಮನೆ ಮನೆಗೆ ತೆರಳಿ ಈ ಹಿಂದಿನಂತೆ ಸಮೀಕ್ಷೆಯ ಅರ್ಜಿಗಳನ್ನು ತುಂಬಿಸಲು ಕೇಳಿದ್ದೆವು.
ದೇವದಾಸಿ ಮಹಿಳೆಯರು ಮುಗಿಬಿದ್ದು ತಾಲೂಕಾ ಸಿಡಿಪಿಓ ಕಛೇರಿಗಳಿಗೆ ಎಡ ತಾಕುವಂತಾಗಿದೆ. ಪ್ರತಿದಿನ ಸರ್ವರ್ ಸಮಸ್ಯೆ, ಸಮೀಕ್ಷೆಗೆ ಬಳಸುವ ಕಂಪ್ಯೂಟರ್ ಗಳ ಕೊರತೆ, ಸಿಬ್ಬಂದಿಯ ಕೊರತೆಯಿಂದ ಪ್ರತಿದಿನ 20ಕ್ಕಿಂತ ಕಡಿಮೆ ಸಂಖ್ಯೆಯ ಕುಟುಂಬಗಳಷ್ಟೆ ಸಮೀಕ್ಷೆಗೆ ಒಳಪಡಿಸಲಾಗುತ್ತದೆ.
ಇದರಿಂದ ನೂರಾರು ಸಂಖ್ಯೆಯಲ್ಲಿ ಬರುವ ವಯೋವೃದ್ಧ ಮಹಿಳೆಯರು, ಊಟ, ನೀರು, ಶೌಚಾಲಯದ ತೊಂದರೆ ಅನುಭವಿಸಿ, ಬೆಳಗಿನಿಂದ ಸಂಜೆವರೆಗೆ ಕಾದು ಮರಳಿ ವಾಪಾಸು ಬರುವಂತಾಗಿದೆ.
ಈ ರೀತಿ ಈಗಿನ ಗಣತಿಯಿಂದ ಹೊರಗಿಡುವುದು ಅನ್ಯಾಯವಾಗುತ್ತದೆ. ಆದ್ದರಿಂದ ಈ ಕೂಡಲೆ ಸರ್ಕಾರ
ಮದ್ಯ ಪ್ರವೇಶಿಸಿ ಈ ತೊಡಕುಗಳನ್ನು ಮತ್ತು ಅಸಮರ್ಪಕತೆಯನ್ನು, ಬೆದರಿಕೆಯ ಅಂಶವನ್ನು ಸರಿಪಡಿಸಲು ಆಗ್ರಹಿಸಿದರು.
ಜಿಲ್ಲಾಗೌರವಾಧ್ಯಕ್ಷ ಬಾಲು ರಾಠೋಡ ಮಾತನಾಡಿ ಹಕ್ಕೊತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಯಲ್ಲವ್ವ ಸೋನ್ನದ, ಗೌರವ್ವ ಹಿರೇಮನಿ, ಸುನಂದವ್ವ ಬೂದುರ,
ಕನಕವ್ವ ಮಾದರ, ರೇಣವ್ವ ಮಾದರ, ಶಿವವ್ವ ಮಾದರ, ಮದರವ್ವ ಮಾದರ, ರೋಣವ್ವ ಮಾದರ, ದುರಗವ್ವ ಮಾದರ, ಗಂಗವ್ವ ಮಾದರ, ದಂಡಕ್ಕ ಪೂಜಾರ, ತಾರಾಬಾಯಿ ದೊಡ್ಡಮನಿ, ಹುಲಿಗೆವ್ವ ಅಸುಂಡಿ, ಗಾಳೆವ್ವ ಅಸುಂಡಿ, ಲಕ್ಷ್ಮವ್ವ ಸನಾದಿ, ಕಿಟ್ಟೇವ್ವ ಮಾದರ ಭಾಗವಹಿಸಿದ್ದರು.
