ಗದಗ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ತಗ್ಗಿಸಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಸಜ್ಜಾಗಿದೆ. ಸಿಎಂ ಸಿದ್ಧರಾಮಯ್ಯ ಕೂಡ ಸಾಲಗಾರರಿಗೆ ಕಿರುಕುಳ ನೀಡಬಾರದು ಅನ್ನೋ ಆದೇಶ ಸಹ ಹೊರಡಿಸಿದ್ದಾರೆ.ಇಷ್ಟಾದರೂ ಯಾವ ಅಸ್ತ್ರಕ್ಕೂ ಜಗ್ಗದ ಮೈಕ್ರೊ ಫೈನಾನ್ಸ್ ಹಾಗೂ ಬಡ್ಡಿದಂಧೆಕೋರರ ಅಟ್ಟಹಾಸ ಮುಂದುವರೆದಿದೆ.
ಕೇವಲ 10 ಸಾವಿರ ರೂಪಾಯಿಗೆ ಬಡ್ಡಿದಂಧೆಕೋರ ಮೌಲಾಸಾಬ್ ಮನೆಗೆ ಬೀಗ ಹಾಕಿ ವೃದ್ಧೆಯನ್ನ ಮನೆಯಿಂದ ಆಚೆ ಹಾಕಿರೋ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.
ಉಷಾದೇವಿ ಗುರುದೇವಯ್ಯ ಶಾಂತಸ್ವಾಮಿಮಠ (65) ಎಂಬುವರ ಮನೆಗೆ ಬೀಗ ಜಡಿಯಲಾಗಿದ್ದು, ರೋಣ ಪಟ್ಟಣದ ಶಾಂಭವರ ಚಾಳ ನಲ್ಲಿನ ಮನೆಯಲ್ಲಿ ವಾಸವಿದ್ದ ಉಷಾದೇವಿಯವರನ್ನ ಹೊರಗೆ ಹಾಕಲಾಗಿದೆ.

ತಮ್ಮ ಸಹೋದರನ ಚಿಕಿತ್ಸೆಗಾಗಿ ಉಷಾದೇವಿ ಮೌಲಾಸಾಬ್ ನಿಂದ ಹಣ ಪಡೆದಿದ್ದರು. ಮರಳಿ ಕೊಡಲು ತಡವಾದ ಹಿನ್ನೆಲೆ, ಇದೀಗ ಕಾಲಾವಕಾಶ ಕೊಡಿ ಎಂದು ಗೋಗರೆದರೂ,ಮೌಲಾಸಾಬ್ ವೃದ್ಧೆಗೆ ಟಾರ್ಚರ್ ನೀಡಿ ಮನೆಗೆ ಬೀಗ ಹಾಕಿ, ವೃದ್ಧೆಯನ್ನ ಹೊರಗೆ ಹಾಕಿರುವ ಆರೋಪ ಕೇಳಿ ಬಂದಿದೆ.
ಮನೆಗೆ ಬೀಗ ಹಾಕಿರುವ ಕುರಿತು ಸ್ವತಃ ವೃದ್ಧೆ ತನ್ನ ಅಳಲು ತೋಡಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಗದಗ ಜಿಲ್ಲೆಯ ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.