ಗದಗ : ತನ್ನ ಸಹೋದರನ ಮರಣ ಪ್ರಮಾಣ ಪತ್ರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಜೀವಂತ ಇದ್ದ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿ ಯಡವಟ್ಟು ಮಾಡಿದ ಘಟನೆ ಲಕ್ಷ್ಮೇಶ್ವರ ಪುರಸಭೆಯಲ್ಲಿ ನಡೆದಿದೆ.
ವರದಿ : ಪರಮೇಶ ಎಸ್ ಲಮಾಣಿ.
ಘಟನೆಯ ವಿವರ-
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ದೇಸಾಯಿ ಬಾಣ ವ್ಯಾಪ್ತಿಯ ಅಶೋಕ ಮಹಾದೇವಪ್ಪ ಹಂಪಣ್ಣವರ ಎಂಬುವವರು ಅನಾರೋಗ್ಯದಿಂದ ದಿನಾಂಕ ಅಗಸ್ಟ್ ೧, ೨೦೨೪ ರಂದು ಮೃತಪಟ್ಟಿದ್ದರು. ತಮ್ಮ ಸಹೋದರ ಅಶೋಕ ಅವರು ಮರಣ ಹೊಂದಿದ್ದು ಆತನ ಮರಣ ಪ್ರಮಾಣ ಪತ್ರ ನೀಡುವಂತೆ ಸಹೋದರ ನಾಗರಾಜ ಮಹಾದೇವಪ್ಪ ಹಂಪಣ್ಣವರ ಅಗಸ್ಟ ೯, ೨೦೨೪ ರಂದು ಪಟ್ಟಣದ ಪುರಸಭೆಯ ಜನನ ಮತ್ತು ಮರಣ ಅಧಿಕಾರಿಗಳಿಗೆ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದರು.
ಆದರೆ ಅಶೋಕನ ಮರಣ ಪ್ರಮಾಣ ಪತ್ರ ನೀಡುವ ಬದಲು ಅರ್ಜಿ ಸಲ್ಲಿಸಿದ್ದ ಜೀವಂತ ಇದ್ದ ನಾಗರಾಜ ಹಂಪಣ್ಣವರ ಎಂಬುವವರು ಅನಾರೋಗ್ಯದಿಂದ ಮರಣ ಹೊಂದಿದ್ದಾರೆ ಎಂದು ದಿನಾಂಕ ಮಾರ್ಚ೧೧, ೨೦೨೫ ರಂದು ನೋಂದಣಿ ಸಂಖ್ಯೆ /8038/T/D/2024/000181ಅಂತಾ ಬೇಜವಾಬ್ದಾರಿಯಿಂದ ಪ್ರಮಾಣ ಪತ್ರ ನೀಡಿ ಯಡವಟ್ಟು ಮಾಡಿದ್ದಾರೆ.
ಇಷ್ಟೇ ಅಲ್ಲದೆ ತಾವು ಮಾಡಿದ ಯಡವಟ್ಟುನ್ನು ಮುಚ್ಚಿ ಹಾಕಲು ಸದರಿ ದಾಖಲೆಗಳನ್ನು ಪರಿಶೀಲಿಸಿ ತಿದ್ದು ಪಡಿ ಮಾಡುವಂತೆ ಲಕ್ಷ್ಮೇಶ್ವರ ತಹಸೀಲ್ದಾರ್ ಕಚೇರಿಗೆ ಕಳುಹಿಸಿ ಕೊಟ್ಟು ಕೈ ತೊಳೆದು ಕೊಂಡು ಕುಳಿತಿದೆ.
ಇತ್ತ ತನ್ನ ಮರಣ ಪ್ರಮಾಣ ಪತ್ರವನ್ನು ರದ್ದು ಪಡಿಸುವಂತೆ ನಾಗರಾಜ ಹಂಪಣ್ಣವರ ಕಳೆದ ೮ ತಿಂಗಳಿಂದ ಪುರಸಭಗೆ ಅಲೆಯುತ್ತಿದ್ದರು ಮರಣ ಪ್ರಮಾಣ ಪತ್ರ ರದ್ದಾಗಿಲ್ಲ.
ಜೀವಂತ ಇದ್ದರೂ ತನಗೆ ಮರಣ ರಣ ಪತ್ರ ನೀಡಿದ್ದರಿಂದ ಆತನಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ ಎಂದು ನಾಗರಾಜ ತಮ್ಮ ಅಳಲು ತೋಡಿಕೊಂಡರು.
ಎಚ್ಚೆತ್ತ ಅಧಿಕಾರಿಗಳು- ಕಳೆದ ೮ ತಿಂಗಳಿಂದ ಮರಣ ಪ್ರಮಾಣ ಪತ್ರ ರದ್ದು ಪಡಿಸುವಂತೆ ನಾಗರಾಜ ಹಂಪಣ್ಣವರ ಮನವಿ ಸಲ್ಲಿಸಿದ್ದರೂ ಪುರಸಭೆಯ ಜನನ ಮತ್ತು ಮರಣ ನೋಂದಣಿ ಅಧಿಕಾರಿ ಮಂಜುನಾಥ್ ಮುದಗಲ್ಲ ಅತ್ತ ಇತ್ತ ಕಡೆಗೆ ಕೈ ತೋರಿಸಿ ಬಚಾವ್ ಆಗಿದ್ದರು. ಯಾವಾಗ ಪತ್ರಕರ್ತರಿಗೆ ಈ ವಿಷಯ ತಿಳಿದಿದೆ ಎಂದು ಗೊತ್ತಾದ ತಕ್ಷಣ ಅಲರ್ಟ ಆಗಿ ಮರಣ ಪ್ರಮಾಣ ಪತ್ರ ರದ್ದು ಪಡಿಸಲು ಸಂಬಂಧಿಸಿದ ಇಲಾಖೆಯ ಭಾಗ�…
ಈಗಾಗಲೇ ಈ ವಿಷಯದ ಬಗ್ಗೆ ಸಂಭವಿಸಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ಗೆ ನೋಟೀಸ್ ಜಾರಿ ಆಗಿದ್ದು, ಪ್ರಮಾಣ ಪತ್ರ ನೀಡಿ ವರ್ಷವಾದರೂ ಗಮನ ಹರಿಸದ ಜನನ ಮತ್ತು ಮರಣ ನೋಂದಣಿ ಅಧಿಕಾರಿಗಳ ಮೇಲೆ ಕ್ರಮ ಜರಗಿಸಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು.
ಮಹಾಂತೇಶ ಎಚ್ ಬಿಳಗಿ.
ಮುಖ್ಯಾಧಿಕಾರಿಗಳು, ಪುರಸಭೆ ಲಕ್ಷ್ಮೇಶ್ವರ.
