ಗದಗ, ಮೇ 12: ಗದಗ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯನ್ನು ನೂತನ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈಗ ಈ ಕಚೇರಿ ಶ್ರೀನಿವಾಸ ಭವನದ ಎದುರುಗಡೆ ಇರುವ ನೇರ ರಸ್ತೆ, ಸೂರ್ಯನಗರ, ನ್ಯೂ ಕೆ.ಎಚ್.ಬಿ. ಕಾಲೋನಿ, ಡಿ. ದೇವರಾಜ ಅರಸು ಭವನ, ಗದಗ ಇಲ್ಲಿ ನೂತನವಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಸಂಬಂಧ ಮಾಹಿತಿ ನೀಡಿರುವ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಲಾಭಾರ್ಥಿಗಳು ಯಾವುದೇ ಸೇವೆಗಳಿಗಾಗಿ ಹಳೆಯ ಕಚೇರಿ ಸ್ಥಳಕ್ಕೆ ಹೋಗದೇ ನವೀಕರಿಸಲಾದ ಈ ವಿಳಾಸಕ್ಕೆ ಭೇಟಿ ನೀಡಬೇಕು ಎಂಬುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಹೊಸ ಕಟ್ಟಡದಲ್ಲಿ ಅಗತ್ಯ ಮೂಲಸೌಕರ್ಯಗಳೊಂದಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲ ವ್ಯವಸ್ಥೆಗಳು ಪ್ರಾರಂಭಗೊಂಡಿದ್ದು, ಸಾರ್ವಜನಿಕ ಸೇವೆಯ ಗುಣಮಟ್ಟವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕರೆತರಲು ಅಧಿಕಾರಿಗಳು ಬದ್ಧರಾಗಿದ್ದಾರೆ.

ಹಿಂದುಳಿದ ವರ್ಗಗಳಿಗೆ ರಾಜ್ಯ ಸರ್ಕಾರದಿಂದ ಸಿಕ್ಕುತ್ತಿರುವ ವಿವಿಧ ಯೋಜನೆಗಳು, ಶೈಕ್ಷಣಿಕ ಅನುದಾನಗಳು, ವಿದ್ಯಾರ್ಥಿವೇತನಗಳು, ವಸತಿ ಸೌಲಭ್ಯಗಳು ಮತ್ತು ಸ್ವಾವಲಂಬನೆ ಯೋಜನೆಗಳ ಮಾಹಿತಿಗಾಗಿ ಈ ಕಚೇರಿ ಮೂಲಕ ಲಾಭ ಪಡೆಯಬಹುದಾಗಿದೆ.
ಸಂಪರ್ಕ ವಿಳಾಸ:
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ,
ಡಿ. ದೇವರಾಜ ಅರಸು ಭವನ,
ಸೂರ್ಯನಗರ, ನ್ಯೂ ಕೆ.ಎಚ್.ಬಿ. ಕಾಲೋನಿ,
ಗದಗ – 582101.

