ಎಲೋನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್ ಕಂಪನಿಯು ‘ಡೈರೆಕ್ಟ್-ಟು-ಸೆಲ್’ ಎಂಬ ಉಪಗ್ರಹ ಆಧಾರಿತ ಸಂವಹನ ಸೇವೆ ಪ್ರಾರಂಭಿಸಿದೆ. ಈ ತಂತ್ರಜ್ಞಾನದಿಂದ ಸ್ಮಾರ್ಟ್‌ಫೋನ್‌ಗಳನ್ನು ಉಪಗ್ರಹಗಳಿಗೆ ನೇರವಾಗಿ ಸಂಪರ್ಕಿಸಬಹುದು. ಈ ತಂತ್ರಜ್ಞಾನಕ್ಕೆ ಮೊಬೈಲ್ ಟವರ್‌ಗಳ ಅಗತ್ಯವಿರುವುದಿಲ್ಲ ಮತ್ತು ಟವರ್‌ಗಳಿಲ್ಲದಿದ್ದರೂ ಇಂಟರ್ನೆಟ್/ಕಾಲ್ ಸಂಪರ್ಕ ಲಭ್ಯವಿರುತ್ತದೆ. ಭೂಮಿ ಮೇಲಿನ ಎಲ್ಲಾ ಸ್ಥಳಗಳಲ್ಲೂ ನೂತನ ತಂತ್ರಜ್ಞಾನದಿಂದ ಜನರಿಗೆ ಸೇವೆ ನೀಡಬಹುದಾಗಿದೆ ಎಂದು ಕಂಪನಿ ತಿಳಿಸಿದೆ.
ಇನ್ಮುಂದೆ ಮೊಬೈಲ್ ಟವರ್‌ಗಳ ಅಗತ್ಯ ಇಲ್ಲ!
