ಗದಗ,: ಇತ್ತೀಚಿನ ವರ್ಷಗಳಲ್ಲಿ ಗದಗ ಬೆಟಗೇರಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಘನತೆ ಹೊಂದಿರುವ ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯವು ಇನ್ನೊಮ್ಮೆ ಶೈಕ್ಷಣಿಕ ಸಾಧನೆಯ ಉದಾತ್ತ ಘೋಷಣೆಯೊಂದಿಗೆ ತಮ್ಮ ಯಶಸ್ವೀ ಪಥವನ್ನು ಮುಂದುವರಿಸಿದೆ. ಪ್ರತಿಷ್ಠಿತ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಜರುಗಿಸುವ 2024-25ನೇ ಶೈಕ್ಷಣಿಕ ಸಾಲಿನ ಜಂಟಿ ಪ್ರವೇಶ ಪರೀಕ್ಷೆ (JEE Mains) ಯಲ್ಲಿ ಈ ವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಶಕ್ತಿಯನ್ನು ರಾಷ್ಟ್ರಮಟ್ಟದಲ್ಲಿ ಸಾಬೀತುಪಡಿಸಿ, ಕಾಲೇಜಿನ ಕೀರ್ತಿಗೆ ನೂತನ ಉಜ್ವಲತೆಯನ್ನುಂಟು ಮಾಡಿದ್ದಾರೆ.
ಈ ಬಾರಿ ಕುಮಾರ ಪಕ್ಷಲ್ ಕಟಾರಿಯಾ ಎಂಬ ವಿದ್ಯಾರ್ಥಿಯು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ 2178 ನೇ ರ‍್ಯಾಂಕ್ ಗಳಿಸಿ, ಮುಂದಿನ ಹಂತದ JEE Advanced ಪರೀಕ್ಷೆ ಬರೆಯಲು ಅರ್ಹತೆಯನ್ನು ಪಡೆದಿದ್ದಾರೆ. ಅಲ್ಲದೆ, ಅವರು ಭಾರತೀಯ ತಂತ್ರಜ್ಞಾನ ಸಂಸ್ಥೆ (IIT)ಯ ಪ್ರವೇಶಕ್ಕೆ ಸದೃಢವಾದ ಪಾದಾರ್ಪಣೆ ಮಾಡಿದ್ದಾರೆ. ಈ ಸಾಧನೆಯಿಂದ ಅವರು ತನ್ನ ಪಠ್ಯತತ್ಪರತೆಯ ಜೊತೆಗೆ ಕಾಲೇಜಿನ ಹಿರಿಮೆಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿರುವುದು ಹೆಮ್ಮೆ ಪಡಿಸುವ ಸಂಗತಿಯಾಗಿದೆ.
ಅದೇ ರೀತಿ ಮತ್ತೊಬ್ಬ ಪ್ರತಿಭಾಶಾಲಿ ವಿದ್ಯಾರ್ಥಿ ಕುಮಾರ ಕಮಲೇಶ ಮೂಲಿಮನಿ ಅವರು ಅಖಿಲ ಭಾರತ ಮಟ್ಟದಲ್ಲಿ 14246 ನೇ ರ‍್ಯಾಂಕ್ ಗಳಿಸುವುದರೊಂದಿಗೆ JEE Advanced ಪರೀಕ್ಷೆಗೆ ಅರ್ಹತೆ ಪಡೆಯುವುದಷ್ಟೇ ಅಲ್ಲದೆ, ತಾನೂ ಭಾರತೀಯ ತಂತ್ರಜ್ಞಾನ ಸಂಸ್ಥೆ ಪ್ರವೇಶಕ್ಕೆ ತಕ್ಕ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇವರ ಶ್ರಮ, ದಿಟ್ಟ ನಿಲುವು ಮತ್ತು ನಿರಂತರ ಅಭ್ಯಾಸಗಳು ಈ ಸಾಧನೆಯ ಬಿಕ್ಕಟ್ಟನ್ನು ಭೇದಿಸಲು ಸಹಾಯವಾದವು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಈ ಇಬ್ಬರು ಪ್ರತಿಭಾವಂತರ ಶೈಕ್ಷಣಿಕ ಸಾಧನೆಯ ಮೂಲಕ ಸನ್ಮಾರ್ಗ ಕಾಲೇಜು ಮಾತ್ರವಲ್ಲದೆ, ಸಂಪೂರ್ಣ ಗದಗ ಜಿಲ್ಲೆಯ ಶೈಕ್ಷಣಿಕ ನಾಮಧೇಯಕ್ಕೂ ಮಹತ್ವದ ಪ್ರಗತಿ ಸೂಚಕವಾಗಿ ಪರಿಗಣಿಸಬಹುದು.
ವಿದ್ಯಾರ್ಥಿಗಳ ಈ ಸಾಧನೆಗೆ ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಚೇರಮನ್ ಪ್ರೊ. ರಾಜೇಶ್ ಕುಲಕರ್ಣಿ, ಆಡಳಿತ ಮಂಡಳಿಯ ಸದಸ್ಯರು ಪ್ರೊ. ರೋಹಿತ್, ರಾಹುಲ್ ಒಡೆಯರ್, ಪ್ರೊ. ಪುನೀತ್ ದೇಶಪಾಂಡೆ, ಪ್ರೊ. ಸೈಯದ್ ಮತೀನ್ ಮುಲ್ಲಾ, ಪ್ರಾಚಾರ್ಯರಾದ ಪ್ರೊ. ಪ್ರೇಮಾನಂದ ರೋಣದ, ಆಡಳಿತಾಧಿಕಾರಿ ಶ್ರೀ ಎಂ.ಸಿ ಹಿರೇಮಠ, ಹಾಗೂ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಇಲ್ಲಿನ ವಿದ್ಯಾರ್ಥಿವೃಂದಗಳು ಇಂತಹದ್ದೇ ಶ್ರೇಷ್ಠ ಸಾಧನೆಗಳನ್ನು ಮುಂದಿನ ದಿನಗಳಲ್ಲಿಯೂ ತೋರಲಿ, ಅವರ ಭವಿಷ್ಯ ಉಜ್ವಲವಾಗಲಿ ಎಂಬ ಹಾರೈಕೆಯೊಂದಿಗೆ, ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಸಾಧನೆಯ ದಿಗಂತವನ್ನು ಇನ್ನಷ್ಟು ವಿಸ್ತರಿಸುತ್ತಿದೆ.
