
ದಾವಣಗೆರೆ: ಬಿ.ವೈ.ವಿಜಯೇಂದ್ರ ಅವರೇ ಮುಂದಿನ ಸಿಎಂ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.ಡಾವಣಗೆರೆಯ ಶಿರಮಗೊಂಡನಹಳ್ಳಿಯಲ್ಲಿ ನಡೆಯುತಿದ್ದ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದ ವೇಳೆ ಈ ಮಾತನ್ನು ಅವರು ಹೇಳಿದ್ದು, ದಾವಣಗೆರೆಯಿಂದ ನಾವು ಸಂದೇಶ ಕೊಡುತ್ತಿದ್ದೇವೆ. ಯಾವುದೇ ದುಷ್ಟ ಶಕ್ತಿ ಬಂದರು ಇದನ್ನು ತಡಿಯೋದಕ್ಕೆ ಸಾಧ್ಯವಿಲ್ಲ. ವಿಜಯೇಂದ್ರ ಅವರನ್ನ ಮುಂದಿನ ಮುಖ್ಯಮಂತ್ರಿ ಮಾಡೆ ಮಾಡ್ತೀವಿ ಎಂದು ಎರಡು ಕೈ ಎತ್ತಿ ವಿಜಯೇಂದ್ರ ಮುಖ್ಯಮಂತ್ರಿ ಆಗಬೇಕು ಅಂದ್ರೆ ಬೆಂಬಲ ಕೊಡಿ ಎಂದು ರೇಣುಕಾಚಾರ್ಯ ಘೋಷಣೆ ಮಾಡಿದ್ದಾರೆ.