ಗದಗ, ಏಪ್ರಿಲ್ 30:
ಗದಗ ಜಿಲ್ಲೆಯ ಹುಲಕೋಟಿ ಗ್ರಾಮದಲ್ಲಿ ನವದಂಪತಿಯ ಆತ್ಮಹತ್ಯೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್ 29ರಂದು ರಾತ್ರಿ ವಿಕ್ರಮ ಶಿರಹಟ್ಟಿ (30) ಹಾಗೂ ಪತ್ನಿ ಶಿಲ್ಪಾ ಶಿರಹಟ್ಟಿ (28) ಅವರು ಮನೆ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೂಲಗಳ ಪ್ರಕಾರ, ಶಿಲ್ಪಾಗೆ ಬಲ ಕಣ್ಣಿನ ಸಮಸ್ಯೆ ಹಾಗೂ ವಿಕ್ರಮಗೆ ಉಸಿರಾಟದ ತೊಂದರೆ ಇದ್ದುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಈ ವೈಯಕ್ತಿಕ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ದಂಪತಿಗಳು ಮಾನಸಿಕವಾಗಿ ಹತಾಶರಾಗಿದ್ದು, ನಿರಾಸೆಯಿಂದಾಗಿ ಆತ್ಮಹತ್ಯೆಗೆ ಹೆಜ್ಜೆ ಹಾಕಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಮೇಲಿನ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ವಿಕ್ರಮ ಶಿರಹಟ್ಟಿ, ಗದಗ ನಗರದಲ್ಲಿ “ಕರ್ನಾಟಕ ಒನ್” ಸೆಂಟರ್ ನಿರ್ವಹಿಸುತ್ತಿದ್ದ. ಸಾಮಾಜಿಕವಾಗಿ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ವಿಕ್ರಮ, ಅಪಾರ ಸ್ನೇಹಿತ ಬಳಗ ಹೊಂದಿದ್ದ ಹಾಗೂ ಆತ್ಮೀಯತೆಯಿಂದ ಎಲ್ಲರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಯಾಗಿದ್ದಾನೆ.

ಘಟನೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಸ್ತುತ ಪ್ರಕರಣ ಸಂಬಂಧ ಪೊಲೀಸ್ ತನಿಖೆ ಮುಂದುವರಿದಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
