Headlines

ಶೀಘ್ರದಲ್ಲೇ ಹೊಸ 10 ಮತ್ತು 500 ರೂ. ನೋಟುಗಳ ಬಿಡುಗಡೆ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶೀಘ್ರದಲ್ಲೇ ಮಹಾತ್ಮ ಗಾಂಧಿ (ಹೊಸ) ಸರಣಿಯಲ್ಲಿ 10 ರೂ. ಮತ್ತು 500 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಹೊಸ ನೋಟುಗಳಲ್ಲಿ ಆರ್‌ಬಿಐ ನ ಹೊಸ ಗವರ್ನರ್ ಸಂಜಯ್ ಮಲ್ಲೋತ್ರಾ ಅವರ ಸಹಿ ಅಲಂಕರಿಸಲಿದೆ.

ಆರ್‌ಬಿಐ ನೀಡಿರುವ ಮಾಹಿತಿಯಂತೆ, ಈ ಹೊಸ ನೋಟುಗಳ ವಿನ್ಯಾಸವು ಈ ಹಿಂದೆ ಬಿಡುಗಡೆಯಾದ ಮಹಾತ್ಮ ಗಾಂಧಿ (ಹೊಸ) ಸರಣಿಯ ನೋಟುಗಳಂತೆಯೇ ಇರಲಿದೆ. ವಿನ್ಯಾಸದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳು ಇಲ್ಲ.

ಹಳೆಯ 10 ರೂ. ಮತ್ತು 500 ರೂ. ನೋಟುಗಳ ಬಗ್ಗೆಯೂ ಸ್ಪಷ್ಟತೆ ನೀಡಿರುವ ಆರ್‌ಬಿಐ, ಈ ಹಿಂದೆ ಬಿಡುಗಡೆಗೊಂಡ ನೋಟುಗಳು ಸಹ ಚಲಾವಣೆಯಲ್ಲೇ ಮುಂದುವರಿಯಲಿವೆ ಎಂದು ತಿಳಿಸಿದೆ. ಹೀಗಾಗಿ ಸಾರ್ವಜನಿಕರು ಹಳೆಯ ನೋಟುಗಳ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *