ಲಕ್ಷ್ಮೇಶ್ವರ: ಸ್ವಾರ್ಥವನ್ನು ಬದಿಗಿಟ್ಟು ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಯ ಕರ್ನಾಟಕ ಸಂಘಟನೆ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಅಯ್ಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸತತ ಹತ್ತು ವರ್ಷಗಳಿಂದ ಸಂಘಟನೆ ಉತ್ತಮ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಈಗಾಗಲೇ 40 ಲಕ್ಷ ಕಾರ್ಯಕರ್ತರನ್ನು ಹೊಂದಿದೆ. ಕ್ಷೇತ್ರದಲ್ಲಿ ಸಂಘಟನೆ ಸಾಮಾಜಿಕ ನ್ಯಾಯದಲ್ಲಿ ಗುರುತಿಸಿಕೊಳ್ಳದಿದ್ದರೆ ಪದಾಧಿಕಾರಿಗಳನ್ನು ಬದಲಾವಣೆ ಮಾಡಲಾಗುವುದು’ ಎಂದು ಎಚ್ಚರಿಸಿದರು.
‘ಸಂಘಟನೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಸಂಘಟನೆಗೆ ಕಪ್ಪು ಚುಕ್ಕೆ ತರುವಂತಹ ಹಾಗೂ ಹಣ ವಸೂಲಿ ಇನ್ನಿತರ ಚಟುವಟಿಕೆಗಳಲ್ಲಿ ಕಾಣಸಿಕೊಂಡರೆ ಶಿಸ್ತು ಕ್ರಮ ಜರಗಿಸಲಾಗುವುದು’ ಎಂದರು.
ಸಂದರ್ಭದಲ್ಲಿ ಲಕ್ಷ್ಮೇಶ್ವರ ತಾಲೂಕಿಗೆ ನೂತನ ಪದಾಧಿಕಾರಿಗಳಿಗೆ ಆಯ್ಕೆ ಮಾಡಲಾಯಿತು ಅವಳಿ ತಾಲೂಕ ಸಂಚಾಲಕರಾಗಿ ರಮೇಶ ಹಂಗನಕಟ್ಟಿ, ತಾಲೂಕ ಅಧ್ಯಕ್ಷರಾಗಿ ಇಸ್ಮಾಯಿಲ್ ಆಡೂರ, ಗೌರವ ಅಧ್ಯಕ್ಷ ಇಸಾಕಭಾಷಾ ಹರಪನಹಳ್ಳಿ, ಉಪಾಧ್ಯಕ್ಷ ಬಸವರಾಜ ಮೇಲ್ಮುರಿ, ಮೈನುಮೊಮಿನ, ಪ್ರಧಾನ ಕಾರ್ಯದರ್ಶಿ ಹಾಲಪ್ಪ ಬಂಡಾರಿ, ಮತ್ತು ಸಂಘಕ್ಕೆ ಇನ್ನಿತರ ಪದಾಧಿಕಾರಿಗಳಾಗಿ ಅನೇಕರನ್ನು ಮಾಡಲಾಯಿತು.
ಹೊಸದಾಗಿ ಸಂಘಟನೆಗೆ ಸೇರಿದವರಿಗೆ ಶಾಲು ಹಾಕಿ ಬರಮಾಡಿಕೊಂಡರು
ಕಾರ್ಯಕ್ರಮದಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷ ಈಶಪ್ಪ ನಾಯ್ಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ, ಜಿಲ್ಲಾ ಅಧ್ಯಕ್ಷ ರಫೀಕ್ ತೋರಗಲ್, ಜಿಲ್ಲಾ ಉಪಾಧ್ಯಕ್ಷ ಭಾಷಾಸಾಬ ಮಲ್ಲಸಮುದ್ರ, ಜಿಲ್ಲಾ ನಗರ ಘಟಕದ ಅಧ್ಯಕ್ಷ ನಾಗರಾಜ ಕ್ಷತ್ರೀಯ ಮತ್ತಿತರಿದ್ದರು.
