ಗದಗ: ನಾಳೆ ದೂದ್ ನಾನಾ ಮುಹಿಬ್ಬ್ ಚಾರಿಟೇಬಲ್ ಟ್ರಸ್ಟ್ ಲಕ್ಷ್ಮೇಶ್ವರ ವತಿಯಿಂದ ನೂತನ ಅಂಬೂಲೆನ್ಸ್ ಲೋಕಾರ್ಪಣೆ ಮತ್ತು ಮಾದಕ ವಸ್ತು ಆಂದೋಲನ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹ ಣ ಕಾರ್ಯಕ್ರಮ ಜರಗುವುದು ಎಂದು ಟ್ರಸ್ಟ್ ವತಿಯಿಂದ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಎಸ್ ಲಮಾಣಿ.
ಈ ಕಾರ್ಯಕ್ರಮದ ನೇತೃತ್ವವನ್ನು ಎನ್.ಪಿ.ಎಮ್ ಝೈನುಲ್ ಆಭಿದ್ ತಂಙಳ್ ದುಗ್ಗಲಡ್ಕ, ಉದ್ಧಾಟನೆ ಸೆಯ್ಯದ್ ಆಮೀರ್ ತಂಙಳ್ ಕಿನ್ಯ ಹಾಗೂ ಅಧ್ಯಕ್ಷತೆಯನ್ನು ಇಸ್ಮಾಯಿಲ್ ಆಡೂರ ವಹಿಸಿಕೊಳ್ಳುವರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಕರ್ನಾಟಕ ಸರ್ಕಾರದ ಸ್ಪೀಕರ್ ಯು.ಟಿ.ಖಾದರ್ ,ಅಬ್ದುಲ್ ಖಾದರ್, ಸೈಯ್ಯದ್ ತಂಙಳ್, ಸೈಯದ್ ಬಾತಿಷ, ಯು.ಟಿ ಝಲ್ಪಿಕಾರ, ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ಗಂಗಣ್ಣ ಮಹಾಂತಶೇಟ್ಟರ್, ಜಿ.ಎಸ್.ಗಡ್ಡದೇವರಮಠ, ನಿವೃತ್ತಿ ಡಿಸಿಪಿ ಜಿ.ಎ ಬಾವಾ, ಹು-ದಾ ಪೋಲಿಸ್ ಕಮಿಷನರ್ ಶಶಿಕುಮಾರ್, ಸಿಪಿಐ ನಾಗರಾಜ ಮಾಡಳ್ಳಿ, ದರ್ಗಾ ಕಮಿಟಿ ಅಧ್ಯಕ್ಷ ಸುಲೇಮಾನ ಕಣಕೆ, ಅಂಜುಮನ್ ಕಮಿಟಿ ಅಧ್ಯಕ್ಷ ಮುಕ್ತಾರಹ್ಮದ್ ಗದಗ, ದಾದಾಪೀರ್ ಮುಚ್ಚಾಲೆ, ಪುರಸಭೆ ಉಪಾಧ್ಯಕ್ಷ ಫೀರದೋಷ ಆಡೂರ, ಸಿಕಂದರಬಾಷಾ ಕಣಕೆ, ಶರಣು ಗೋಡಿ, ಎಮ್.ಆಯ್.ಮುಳಗುಂದ, ಹಾಗೂ ಜೈನುಲ್ ಆಬೀದ್ ಆಗಮಿಸುವರು ಎಂದು ಪ್ರಕಟನೆಯಲ್ಲಿ ತಿಳಿಸಿದೆ.